Composer: Shri Purandara dasaru
ಬಾರಮ್ಮ ನಾವಿಬ್ಬರಾಡುವ
ಮುಕ್ತಿ ಸಾಧನಂಗಳ ಬೇಗ ಬೇಡುವ ||ಪ||
ಮೂರೆಂಟು ಮನೆಯ ಭೇದವ ಮಾಡಿ
ಮತ್ತೈದೆಂಟು ಮನೆ ಕಿಟ್ಯಾಡುವ |
ಕಾಡುವ ಕಪಿ ಶಯನಂಗಳು ಬೇಡುವ
ಧ್ಯಾನ ಮಂಟಪದಲಿ ಜೋಡಿ ಕೂಡ್ಯಾಡುವ |೧|
ಪುಂಡರೀಕಾಕ್ಷ ಶೇಷನ ಮೇಲೆ
ಭೂಮಂಡಲದೊಳಗೆ ಬ್ರಹ್ಮಾಂಡವು |
ಶಂಕ ಚಕ್ರಾಂಕಿತ ಪುರಂದರವಿಠಲನ
ಧ್ಯಾನ ಮಂಟಪದೊಳು ಜೋಡಿ ಕೂಡ್ಯಾಡುವ |೨|
bAramma nAvibbarADuva
mukti sAdhanaMgaLa bEga bEDuva ||pa||
mUreMTu maneya BEdava mADi
mattaideMTu mane kiTyADuva |
kADuva kapi SayanaMgaLu bEDuva
dhyAna maMTapadali jODi kUDyADuva |1|
puMDarIkAkSha SEShana mEle
BUmaMDaladoLage brahmAMDavu |
SaMka cakrAMkita puraMdaraviThalana
dhyAna maMTapadoLu jODi kUDyADuva |2|
Leave a Reply