Ajnanigala Kooda adhika

Composer: Shri Purandara dasaru

By Smt.Shubhalakshmi Rao

ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡ ಜಗಳವೆ ಲೇಸು [ಪ]

ಉಂಬುಡುವುದಕ್ಕಿರುವ ಅರಸನೋಲಗಕ್ಕಿಂತ
ತುಂಬಿದೂರೊಳಗೆ ತಿರಿದುಂಬುವುದೆ ಲೇಸು
ಹಂಬಲಿಸಿ ಹಾಳು ಹರಟೆ ಹೊಡೆಯುವುದಕಿಂತ
ನಂಬಿ ಹರಿದಾಸರೊಳ್-ಆಡುವುದೆ ಲೇಸು [೧]

ಒಡನೆ ಹಂಗಿಸುವವನ ಪಾಲೋಗರಕ್ಕಿಂತ
ಕುಡಿ ನೀರ ಕುಡಿದು ಕೊಂಡಿರುವುದೆ ಲೇಸು
ಬಿಡದೆ ಕಡಿದಾಡುವವರ ನೆರೆಯಲ್ ಇಹುದಕಿಂತ
ಅಡವಿಯೊಳಗ್ ಅಜ್ಞಾತವಾಸವೇ ಲೇಸು [೨]

ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ
ಹಸನಾದಾ ಹಾಳು ಗುಡಿಗಳೆ ಲೇಸು
ಭಿಸಜಾಕ್ಷ ಪುರಂದರ ವಿಠ್ಠಲನ ನೆನೆನೆನೆದು
ವಸುಧೆಯೋಳು ಚಿರಕಾಲ ಇರುವುದೆ ಲೇಸು [೩]


aj~jAnigaLa kUDa adhika snEhakkiMta
suj~jAnigaLa kUDa jagaLave lEsu [pa]

uMbuDuvudakkiruva arasanOlagakkiMta
tuMbidUroLage tiriduMbuvude lEsu
haMbalisi hALu haraTe hoDeyuvudakiMta
naMbi haridAsaroL-ADuvude lEsu [1]

oDane haMgisuvavana pAlOgarakkiMta
kuDi nIra kuDidu koMDiruvude lEsu
biDade kaDidADuvavara nereyal ihudakiMta
aDaviyoLag aj~jAtavAsavE lEsu [2]

masedu matsaripa satiyoDane saMsArakkiMta
hasanAdA hALu guDigaLe lEsu
BisajAkSha puraMdara viThThalana nenenenedu
vasudheyOLu chirakAla iruvude lEsu [3]

Leave a Reply

Your email address will not be published. Required fields are marked *

You might also like

error: Content is protected !!