Tag: Ajnanigala Kooda adhika

  • Ajnanigala Kooda adhika

    Composer: Shri Purandara dasaru ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತಸುಜ್ಞಾನಿಗಳ ಕೂಡ ಜಗಳವೆ ಲೇಸು [ಪ] ಉಂಬುಡುವುದಕ್ಕಿರುವ ಅರಸನೋಲಗಕ್ಕಿಂತತುಂಬಿದೂರೊಳಗೆ ತಿರಿದುಂಬುವುದೆ ಲೇಸುಹಂಬಲಿಸಿ ಹಾಳು ಹರಟೆ ಹೊಡೆಯುವುದಕಿಂತನಂಬಿ ಹರಿದಾಸರೊಳ್-ಆಡುವುದೆ ಲೇಸು [೧] ಒಡನೆ ಹಂಗಿಸುವವನ ಪಾಲೋಗರಕ್ಕಿಂತಕುಡಿ ನೀರ ಕುಡಿದು ಕೊಂಡಿರುವುದೆ ಲೇಸುಬಿಡದೆ ಕಡಿದಾಡುವವರ ನೆರೆಯಲ್ ಇಹುದಕಿಂತಅಡವಿಯೊಳಗ್ ಅಜ್ಞಾತವಾಸವೇ ಲೇಸು [೨] ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತಹಸನಾದಾ ಹಾಳು ಗುಡಿಗಳೆ ಲೇಸುಭಿಸಜಾಕ್ಷ ಪುರಂದರ ವಿಠ್ಠಲನ ನೆನೆನೆನೆದುವಸುಧೆಯೋಳು ಚಿರಕಾಲ ಇರುವುದೆ ಲೇಸು [೩] aj~jAnigaLa kUDa adhika snEhakkiMtasuj~jAnigaLa kUDa jagaLave…

error: Content is protected !!