Palayamam Gopaladasaraya

Composer : Shri Tande Venkatesha vittala

By Smt.Shubhalakshmi Rao

ಪಾಲಯ ಮಾಂ ಗೋಪಾಲದಾಸರಾಯ
ವಿಲಸಿತ ಗುಣನಿಲಯಾ |ಪ|

ಮುರಹರ ನಾಮಕನರಸಿ ಜಠರವೆಂಬ ಸುಧಾಂಬುದಿಯಲಿ ಶಂಬ,
ದಾರಿ ಸದೃಶ ಘನ ರೂಪದೊಳವತರಿಸೀ
ಸುಜ್ಞಾನ ಭಕ್ತಿ ವೆರಸೀ,
ಪರಿಸರ ಮತದೊಳು ಬದ್ಧ ದೀಕ್ಷೆಯಾಂತು
ಅಚರಿಸಿ ಸಮಂತು ,
ಪರಿಶುದ್ಧಾತ್ಮನೆ ಗೆಲಿದೆ ಪಂಚಕರಣ
ನಮೋ ನಮೋ ಭಾಗಣ್ಣ [೧]

ವಿಜಯದಾಸ ಗುರುಪದ ರಜವನು ಧರಿಸಿ ತೀರ್ಥಕ್ಷೇತ್ರ ಚರಿಸೀ,
ಸುಜನವರದ ರಜತಮವ ಸೇರಗೊಡದೇ
ಮಮತೆಯ ಕಿತ್ತೊಗೆದೇ,
ನಿಜಪಾದಾಶ್ರಿತ-ರುದ್ಧರಿಸುತ ದಯದೀ
ಗುರುವಾಜ್ಞೆಯ ಬಲದಿ
ಶ್ರೀ ಜಗನ್ನಾಥರಿ-ಗಾಯುರ್ದಾನವಿತ್ತೇ
ರವಿಜನ ಮರೆಸುತ್ತೇ [೨]

ದ್ವಂದ್ವ ಸಮರ್ಪಣೆಗೈವ ತತ್ತ್ವ ಚತುರ
ಗಿರಿಜಾತೆಯ ಕುವರ,
ತಂದೆ ವೆಂಕಟೇಶವಿಠ್ಠಲ ಧ್ಯಾನಸುಖ
ಮಗ್ನನೆ ಆತ್ಮಮಖ,
ದಿಂದ ಸಂಚಿತಾಗಾಮಿಯೆಲ್ಲ ದಹಿಸೀ
ವಿರಕ್ತಿಗೆ ನೆಲೆಯೆನಿಸೀ
ಬಂಧುರ ಕವಿ ಕುಮುದೇಂದು ಮೆರೆದೆ ಜಗದೀ
ಬಾ ಬೇಗನೆ ದಯದೀ |೩|


pAlaya mAM gOpAladAsarAya
vilasita guNanilayA |pa|

murahara nAmakanarasi jaTharaveMba sudhAMbudiyali SaMba,
dAri sadRuSa Gana rUpadoLavatarisI
suj~jAna Bakti verasI,
parisara matadoLu baddha dIkSheyAMtu
acarisi samaMtu ,
pariSuddhAtmane gelide paMcakaraNa
namO namO BAgaNNa [1]

vijayadAsa gurupada rajavanu dharisi tIrthakShEtra carisI,
sujanavarada rajatamava sEragoDadE
mamateya kittogedE,
nijapAdASrita-ruddharisuta dayadI
guruvAj~jeya baladi
SrI jagannAthari-gAyurdAnavittE
ravijana maresuttE [2]

dvaMdva samarpaNegaiva tattva catura
girijAteya kuvara,
taMde veMkaTESaviThThala dhyAnasuKa
magnane AtmamaKa,
diMda saMcitAgAmiyella dahisI
viraktige neleyenisI
baMdhura kavi kumudEMdu merede jagadI
bA bEgane dayadI |3|

Leave a Reply

Your email address will not be published. Required fields are marked *

You might also like

error: Content is protected !!