Guru Govinda vittalane

Composer : Shri Tande muddu mohana vittala [Ankita pradana to Shri Gurugovinda dasaru]

By Smt.Shubhalakshmi Rao

ಗುರು ಗೋವಿಂದವಿಠಲನೆ ನೀನವರ |
ಕರುಣಾ ಕಟಾಕ್ಷದಿಂದೀಕ್ಷಿಸುತಾ
ಕಾಪಾಡೋ ಹರಿಯೇ || ಪ ||

ಗರುಡ ಗಮನನೆ ದೇವ –
ಗರ್ವಗಳ ಪರಿಹರಿಸಿ |
ಸರ್ವಾಂತರಾತ್ಮಕನೇ
ಕಾಪಾಡೋ ಹರಿಯೇ || ಅ. ಪ ||

ಸೃಷ್ಟ್ಯಾದಿಕರ್ತನೇ ಸುಗುಣ
ಮೂರುತಿ ದೇವಾ |
ಕಷ್ಟಗಳ ಪರಿಹರಿಸಿ
ಕಾಪಾಡೋ ಹರಿಯೇ |
ಕೃಷ್ಣಮೂರುತಿ ಹೃದಯ
ಅಷ್ಟದಳ ಮಧ್ಯದಲ್ಲಿ |
ದೃಷ್ಟಿ ಗೋಚರನಾಗಿ
ಕಾಪಾಡೋ ಹರಿಯೇ || ೧ ||

ಅಪಾರ ಮಹಿಮನೆ
ಆಪದ್-ಬಾಂಧವನಾಗಿ |
ತಾಪತ್ರಯಗಳ ಕಡಿದು
ಕಾಪಾಡೋ ಹರಿಯೇ |
ಕೋಪ ತಾಪಾದಿ ಭವ ದುರ್ಗಗಳನೆ
ಪರಿಹರಿಸಿ ಭವ |
ಕೂಪದಿಂದೆತ್ತಿ ನೀ
ಕಾಪಾಡೋ ಹರಿಯೇ || ೨ ||

ಹರಿಯೇ ಸರ್ವೋತ್ತಮನು
ಶಿರಿ ವಾಯು ಮೊದಲಾದ |
ಸುರರೆಲ್ಲ ಕಿಂಕರರೆಂಬ |
ವರ ಮಧ್ವ ಶಾಸ್ತ್ರವನೆ
ತಿಳಿಸಿ ಕಾಪಾಡೋ ಹರಿಯೇ |
ಪರಮ ಪುರುಷನೆ ತಂದೆ –
ಮುದ್ದುಮೋಹನವಿಠಲನೇ ನಿನ್ನ |
ಪರತರಾತ್ಮಕವಾದ ದಿವ್ಯ ರೂಪವ
ತೋರಿ ಕಾಪಾಡೋ ಹರಿಯೇ || ೩ ||


guru gOviMdaviThalane nInavara |
karuNA kaTAkShadiMdIkShisutA
kApADO hariyE || pa ||

garuDa gamanane dEva –
garvagaLa pariharisi |
sarvAMtarAtmakanE
kApADO hariyE || a. pa ||

sRuShTyAdikartanE suguNa
mUruti dEvA |
kaShTagaLa pariharisi
kApADO hariyE |
kRuShNamUruti hRudaya
aShTadaLa madhyadalli |
dRuShTi gOcaranAgi
kApADO hariyE || 1 ||

apAra mahimane
Apad-bAMdhavanAgi |
tApatrayagaLa kaDidu
kApADO hariyE |
kOpa tApAdi bhava durgagaLane
pariharisi Bava |
kUpadiMdetti nI
kApADO hariyE || 2 ||

hariyE sarvOttamanu
Siri vAyu modalAda |
surarella kiMkarareMba |
vara madhva SAstravane
tiLisi kApADO hariyE |
parama puruShane taMde –
muddumOhanaviThalanE ninna |
paratarAtmakavAda divya rUpava
tOri kApADO hariyE || 3 ||

Leave a Reply

Your email address will not be published. Required fields are marked *

You might also like

error: Content is protected !!