Composer : Shri Purandara dasaru
ಪುಟ್ಟಿಸ ಬ್ಯಾಡವೊ ದೇವ ಎಂದೆಂದಿಗು ಇಂಥ ||ಪ||
ಕಷ್ಟಪಟ್ಟು ತಿರುಗುವ ಪಾಪಿ ಜೀವನವ ||ಅ.ಪ||
ನರರ ಸ್ತುತಿಸಿ ನಾಲಿಗೆ ಬರಡು ಮಾಡಿ ಕೊಂಡು
ಉದರ ಪೋಷಣೆಗಾಗಿ ಅವರಿವರೆನ್ನದೆ
ಧರೆಯೊಳು ಲಜ್ಜೆ ನಾಚಿಕೆಗಳನೀಡ್ಯಾಡಿ
ಪರರ ಪೀಡಿಸಿ ತಿಂಬ ಪಾಪಿ ಜೀವನವ |೧|
ಎಂಟು ಗೇಣು ಶರೀರವು ಒಂದು ಗೇಣು ಮಾಡಿ ಕೊಂಡು
ಪಂಟಿಸುತ್ತ ಮೆಲ್ಲ ಮೆಲ್ಲನೆ ಪೋಗಿ
ಗಂಟಲ ಸೆರೆಗಳುಬ್ಬಿ ಕೇಳವೊ ಸಂಕಟವ ವೈ-
ಕುಂಠಪತಿ ನೀನೇ ಬಲ್ಲೆ ಕಪಟ ನಾಟಕನೆ |೨|
ಲೆಕ್ಕದಲ್ಲಿ ನೀ ಮೊದಲು ಮಾಡಿದಷ್ಟಲ್ಲದೆ
ಸಖಿಯು ವೆಗ್ಗಳವಾಗಿ ಕೊಡುವರುಂಟೆ
ಕಕ್ಕುಲಾತಿ ಪಟ್ಟರಿಲ್ಲ ಕರುಣಾಳೊ ನಿನ್ನ ಮೊರೆ-
ಹೊಕ್ಕೆ ಎನ್ನನು ಕಾಯೊ ಪುರಂದರವಿಠಲ |೩|
puTTisa byADavo dEva eMdeMdigu iMtha ||pa||
kaShTapaTTu tiruguva pApi jIvanava ||a.pa||
narara stutisi nAlige baraDu mADi koMDu
udara pOShaNegAgi avarivarennade
dhareyoLu lajje nAcikegaLanIDyADi
parara pIDisi tiMba pApi jIvanava |1|
eMTu gENu SarIravu oMdu gENu mADi koMDu
paMTisutta mella mellane pOgi
gaMTala seregaLubbi kELavo saMkaTava vai-
kuMThapati nInE balle kapaTa nATakane |2|
lekkadalli nI modalu mADidaShTallade
sakhiyu veggaLavAgi koDuvaruMTe
kakkulAti paTTarilla karuNALo ninna more-
hokke ennanu kAyo puraMdaraviThala |3|
Leave a Reply