-
Puttisa byadavo
Composer : Shri Purandara dasaru ಪುಟ್ಟಿಸ ಬ್ಯಾಡವೊ ದೇವ ಎಂದೆಂದಿಗು ಇಂಥ ||ಪ||ಕಷ್ಟಪಟ್ಟು ತಿರುಗುವ ಪಾಪಿ ಜೀವನವ ||ಅ.ಪ|| ನರರ ಸ್ತುತಿಸಿ ನಾಲಿಗೆ ಬರಡು ಮಾಡಿ ಕೊಂಡುಉದರ ಪೋಷಣೆಗಾಗಿ ಅವರಿವರೆನ್ನದೆಧರೆಯೊಳು ಲಜ್ಜೆ ನಾಚಿಕೆಗಳನೀಡ್ಯಾಡಿಪರರ ಪೀಡಿಸಿ ತಿಂಬ ಪಾಪಿ ಜೀವನವ |೧| ಎಂಟು ಗೇಣು ಶರೀರವು ಒಂದು ಗೇಣು ಮಾಡಿ ಕೊಂಡುಪಂಟಿಸುತ್ತ ಮೆಲ್ಲ ಮೆಲ್ಲನೆ ಪೋಗಿಗಂಟಲ ಸೆರೆಗಳುಬ್ಬಿ ಕೇಳವೊ ಸಂಕಟವ ವೈ-ಕುಂಠಪತಿ ನೀನೇ ಬಲ್ಲೆ ಕಪಟ ನಾಟಕನೆ |೨| ಲೆಕ್ಕದಲ್ಲಿ ನೀ ಮೊದಲು ಮಾಡಿದಷ್ಟಲ್ಲದೆಸಖಿಯು ವೆಗ್ಗಳವಾಗಿ ಕೊಡುವರುಂಟೆಕಕ್ಕುಲಾತಿ…
