Composer : Shri Gurugovinda dasaru [ankita pradana – Hari vittala]
ಹರಿವಿಠ್ಠಲಾ ನೀನಿವಳ ಸಲಹಬೇಕೋ |
ಪರಿಪರಿಯ ಸೌಖ್ಯಗಳ ಇಹಪರಂಗಳಲಿತ್ತು [ಪ]
ಕಿಂಕರಿಗೆ ತವಪಾದ ಪಂಕಜಗಳೆರಡಕ್ಕೆ
ವೆಂಕಟೇಶನೆ ನಿನ್ನ ದಿವ್ಯ ರೂಪವನು |
ಶಂಕೆಯಿಲ್ಲದೆ ಇವಳ ಸ್ವಪ್ನದಲಿ ತೋರಿ ತವ
ಕಿಂಕರಳು ಎನಿಪುದಕೆ ಅಭಯ ಸೂಚಿಸಿದೇ [೧]
ಪ್ರಾಚೀನ ಕರ್ಮಗಳ ಯೋಚಿಸಲು ಅಳವಿಲ್ಲ
ಕೀಚಕಾರಿ ಪ್ರಿಯನೆ ಮೋಚಕೇಚ್ಛೆಯನು
ಸೂಚಿಸುತ ಸಂಸಾರ ಕೂಪಾರ ದಾಟಿಪುದು
ಖೇಚರ ಸುವಾಹಕನೆ ಯಾಚಿಸುವೆ ನಿಂತು [೨]
ತಾರತಮ್ಯ ಜ್ಞಾನ ಮೂರೆರಡು ವಿಧಭೇದ
ಈರ ಮುಖ ಸುರ ಸರ್ವ ಶ್ರೀ ಹರಿಯ ಕಿಂಕರನು
ಮಾರಾರಿ ಸಖ ಹರಿಯೆ ಸರ್ವೋತ್ತಮಾನೆಂಬ
ಚಾರುಮತಿಯನು ಕೊಟ್ಟು ಕಾಪಾಡು ಹರಿಯೇ [೩]
ಪಂಚರೂಪಾತ್ಮಕ ಪ್ರಪಂಚ ವ್ಯವಹಾರದಲಿ
ಹೆಂಚು ಹಾಟಕ ರೂಪ ಸರ್ವ ದ್ರವ್ಯದಲೀ |
ಅಂಚೆವಹ ಮುಖ್ಯಾಲ್ಪ ಸರ್ವ ಜೀವರುಗಳಲಿ
ಸಂಚಿಂತನೆಯು ತವ ಅದ್ವೈತ ತಿಳಿಸೋ [೩]
ಮೋದ ಮುನಿ ಸುಪ್ರೀಯ ಮಾಧವನೆ ಪತಿಸೇವೆ
ನೀದಯದಿ ಕೊಟ್ಟಿವಳ ಸಾಧನವ ಗೈಸೀ |
ವೇದೇಶನಾದ ಗುರು ಗೋವಿಂದ ವಿಠ್ಠಲನೆ
ಸಾದರದಿ ಹೃದ್ಗುಹದಿ ತೋರೆಂದು ಭಿನ್ನೈಪೆ [೪]
hariviThThalA nInivaLa salahabEkO |
paripariya sauKyagaLa ihaparaMgaLalittu [pa]
kiMkarige tavapAda paMkajagaLeraDakke
veMkaTESane ninna divya rUpavanu |
SaMkeyillade ivaLa svapnadali tOri tava
kiMkaraLu enipudake aBaya sUcisidE [1]
prAcIna karmagaLa yOcisalu aLavilla
kIcakAri priyane mOcakEcCeyanu
sUcisuta saMsAra kUpAra dATipudu
KEcara suvAhakane yAcisuve niMtu [2]
tAratamya j~jAna mUreraDu vidhaBEda
Ira muKa sura sarva SrI hariya kiMkaranu
mArAri saKa hariye sarvOttamAneMba
cArumatiyanu koTTu kApADu hariyE [3]
paMcarUpAtmaka prapaMca vyavahAradali
heMcu hATaka rUpa sarva dravyadalI |
aMcevaha muKyAlpa sarva jIvarugaLali
saMciMtaneyu tava advaita tiLisO [3]
mOda muni suprIya mAdhavane patisEve
nIdayadi koTTivaLa sAdhanava gaisI |
vEdESanAda guru gOviMda viThThalane
sAdaradi hRudguhadi tOreMdu Binnaipe [4]
Leave a Reply