Composer : Shri Vijaya dasaru
ದಾಸರೆ ಪುರಂದರದಾಸರು
ಲೇಸಾಗಿ ಎನಗೆ ಸುಮಾರ್ಗವನು ತೋರಿದರು ||ಪ||
ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿ
ಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂ
ಅತಿ ದಯಾಪರರಾಗಿ ತನ್ನವನಿವನೆಂದು
ಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು ||೧||
ಶಬ್ದಾದಿ ಮೊದಲಾದ ವಿಷಯಂಗಳಾ ಕರ್ಮ
ದಬ್ಧ್ದಿಯೊಳಗೆ ಬಿದ್ದು ಪೊರುಳುತಿದ್ದಾ
ಲುಬ್ಧಕನ ಕರೆದು ದೃಢವಾಗಿ ಸುಜ್ಞಾನದ
ಅಬ್ಧಿಯೊಳಗಿಟ್ಟು ಕರುಣದಲಿ ನೋಡಿದರು ||೨||
ಹಿಂದೆ ಏಸೇಸು ಜನ್ಮ ಜನಿಸಿ ಅನ್ಯರಿಂದಲಿ ಬಲುಕಾಲ
ನೊಂದ ನರನಾ
ತಂದು ವೈರಾಗ್ಯದೊಳು ಪೊಗಸಿ ಸೌಖ್ಯವ ಪರಶಿ
ತಂದೆ ಮಕ್ಕಳನು ಸಾಕಿದಂತೆ ಸಾಕಿದರು ||೩||
ಉಪದೇಶವಿತ್ತರು ಸುಪ್ರೀತಾರ್ಥದಲಿ ಬಂದು
ಜಪ ನಿಜಾಸನ ಧ್ಯಾನ ಜ್ಞಾನದಿಂದ
ಸಪುತೆರಡು ಲೋಕದ ಒಡೆಯನ್ನ ಪಾದವ
ಸಫಲವಾಗುವಂತೆ ಸಾಧನವ ಪೇಳಿದರು ||೪||
ದಾರಿದ್ರ್ಯ ದೋಷವ ಸೇರಿದ ಮಾನವನಿಗೆ
ಆರು ಕೊಡದಲಿ ಧೇನು ದೊರಕಿದಂತೆ
ಕಾರುಣ್ಯದಲಿ ಗುರು ಪುರಂದರದಾಸರು
ಮೂರುತಿ ವಿಜಯವಿಠ್ಠಲನ್ನ ತೋರಿಸಿದರು ||೫||
dAsare puraMdaradAsaru
lEsAgi enage sumArgavanu tOridaru ||pa||
ati mugdhanAgi duruLarA durAcAradalli
matigeTTu mahiyoLage tirugutiralU
ati dayApararAgi tannavanivaneMdu
hitadalli poredu kumatiya biDisidaru ||1||
SabdAdi modalAda viShayaMgaLA karma
dabdhdiyoLage biddu poruLutiddA
lubdhakana karedu dRuDhavAgi suj~jAnada
abdhiyoLagiTTu karuNadali nODidaru ||2||
hiMde EsEsu janma janisi anyariMdali balukAla
noMda naranA
taMdu vairAgyadoLu pogasi sauKyava paraSi
taMde makkaLanu sAkidaMte sAkidaru ||3||
upadESavittaru suprItArthadali baMdu
japa nijAsana dhyAna j~jAnadiMda
saputeraDu lOkada oDeyanna pAdava
saPalavAguvaMte sAdhanava pELidaru ||4||
dAridrya dOShava sErida mAnavanige
Aru koDadali dhEnu dorakidaMte
kAruNyadali guru puraMdaradAsaru
mUruti vijayaviThThalanna tOrisidaru ||5||
Leave a Reply