Composer : Shri Purandara dasaru
ದಾಸನಾಗುವುದಕ್ಕೆ ಏಸುಜನ್ಮದ ಸುಕೃತ
ಭಾಸುರ ರವಿಕೋಟಿ ಶ್ರೀಶ ಸುಗುಣವಂತ
ನಾಶರಹಿತ ನಿನ್ನ ದಾಸರ ದಾಸ್ಯವ
ಲೇಸಾಗಿ ಕೊಡು ಕಂಡ್ಯ ಪುರಂದರವಿಠಲ ||
ದಾಸರ ನಿಂದಿಸಬೇಡ ಮನುಜ , ಹರಿ-
ದಾಸರ ನಿಂದಿಸ ಬೇಡ [ಪ]
ರಾಮರ ನಿಂದಿಸಿ ರಾವಣ ಕೆಟ್ಟ
ವಿಭೀಷಣಗಾಯಿತು ಪಟ್ಟ
ಭೂಮಿಯ ಲೋಭದಿ ಕೌರವ ಕೆಟ್ಟ
ಧರ್ಮಗೆ ರಾಜ್ಯವ ಬಿಟ್ಟ [೧]
ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆ
ಸುಡದಲೆ ಬಿಡುವುದೇನಣ್ಣ
ಪೊಡವಿಯ ಜನರಿಗೆ ಬಡತನ ಬಂದರೆ
ಬಿರುನುಡಿ ಆಡದಿರಣ್ಣ [೨]
ದೇವಕಿ ಸೆರೆಯನು ಬಿಡಿಸಿದ ದಾಸರು
ನರರೇನೈ ಈ ಜಗದೊಳು
ಭಾವಜನಯ್ಯನ ಭಕುತರ ಸೇವಿಸೆ
ಪಾವನ ಮಾಡುವ ಪುರಂದರ ವಿಠಲ [೩]
dAsanAguvudakke Esujanmada sukRuta
BAsura ravikOTi SrISa suguNavaMta
nASarahita ninna dAsara dAsyava
lEsAgi koDu kaMDya puraMdaraviThala ||
dAsara niMdisabEDa manuja , hari-
dAsara niMdisa bEDa [pa]
rAmara niMdisi rAvaNa keTTa
viBIShaNagAyitu paTTa
BUmiya lOBadi kaurava keTTa
dharmage rAjyava biTTa [1]
uDiyalli keMDava kaTTikoMDare
suDadale biDuvudEnaNNa
poDaviya janarige baDatana baMdare
birunuDi ADadiraNNa [2]
dEvaki sereyanu biDisida dAsaru
nararEnai I jagadoLu
BAvajanayyana Bakutara sEvise
pAvana mADuva puraMdara viThala [3]
Leave a Reply