Purandara rayara punyanama

Composer : Shri Gopala dasaru

By Smt.Shubhalakshmi Rao

ಪುರಂದರ ರಾಯರ ಪುಣ್ಯನಾಮ |
ಸ್ಮರಣೆಯನ್ನು ಜಪಿಸಿರೋ ಸುಜನರು |
ಅನಂತ ಜನುಮದ ಅಘವನ್ನು ಕಳೆದ ಮ್ಯಾಲೆ |
ಪುನರಾವರ್ತಿ ಬಾರದೆ ಲೋಕ ಪೊಂದಿಪುದು |ಪ|

ಆಗಮಾರ್ಥಗಳ ಅನುವಾಗಿ ಸಾರವ ತೆಗೆದು |
ರಾಗಪದ ಕಾವ್ಯದಿಂದ |
ಶ್ರೀ ಗುರು ಮಧ್ವಮುನಿ ಮತವ ಪೊಂದಿ ಬಲು |
ಭಾಗವತ ಧರ್ಮ ವಹಿಸಿ |
ನಾಗಶಯನನ ಗುಣವ ಕೊಂಡಾಡಿ ಜಗದೊಳಗೆ |
ಯೋಗ ಪ್ರವಾಹದಿಂದ ಮೆರೆದ |
ಸಾಗರವು ದಕ್ಷಿಣೋತ್ತರ ಪೂರ್ವ ಪಶ್ಚಿಮ |
ಯೋಗದಲಿ ಚರಿಸಿ ಒಳಗಾಗದೆ, ಕಲಿಯ ಗೆದ್ದ ||೧||

ನೋಡಿದ ಮಾತ್ರಿವರ ನಯನಗಳ ದೋಷವು |
ಓಡುವವು ಲೇಶವಿರದೆ |
ಆಡಿದಾ ಮಾತುರದಿ ಯಿವರ ವಾರ್ತೆಯ ವದನ |
ಬೇಡದಿನ್ನೆಂದು ವಿಷಯ |
ಮಾಡಿದಾ ಮಾತ್ರಿವರ ಅರ್ಚನೆಯು ಕರಗಳು |
ಮಾಡವವು ಅನ್ಯ ಕರ್ಮ |
ಕೂಡಿ ಮನಬೆರೆದು ಜಪಿಸುತ ನಿತ್ಯ ಧ್ಯಾನವನು |
ಮಾಡಿದವನ ಪುಣ್ಯಕೀಡು ನಾ ಕಾಣೆ ||೨||

ಪು ಎಂದು ಉಚ್ಚರಿಸೆ ಪುಣ್ಯಕರ್ಮಕೆ ಧರ್ಮ |
ಸಹಯವಾಗಿ ಒದಗುವವು |
ರ ಎನ್ನೆ ಜ್ಞಾನಾಖ್ಯವೆಂಬ ರತುನಾರ್ಥಗಳು |
ಆಯಾಸವಿಲ್ಲದೆ ಬಪ್ಪವು |
ದ ಎಂದು ಉಚ್ಚರಿಸೆ ಸರ್ವ ಕಾಮಗಳನ್ನು |
ದದಾತಿ ಎಂದಾಡುವವು |
ರಾ ಯೆನ್ನೆ ರಾಜ ಗೋಪಾಲವಿಠಲ ತನ್ನ |
ಸಾಯುಜ್ಯವನು ಯಿತ್ತು ಸಲಹುವನು, ಸರ್ವದ ||೩||


puraMdara rAyara puNyanAma |
smaraNeyannu japisirO sujanaru |
anaMta janumada aghavannu kaLeda myAle |
punarAvarti bArade lOka poMdipudu |pa|

AgamArthagaLa anuvAgi sArava tegedu |
rAgapada kAvyadiMda |
shrI guru madhwamuni matava poMdi balu |
bhAgavata dharma vahisi |
nAgashayanana guNava koMDADi jagadoLage |
yOga pravAhadiMda mereda |
sAgaravu dakShiNOttara pUrva pashchima |
yOgadali charisi oLagAgade, kaliya gedda ||1||

nODida mAtrivara nayanagaLa dOShavu |
ODuvavu lEshavirade |
ADidA mAturadi yivara vArteya vadana |
bEDadinneMdu viShaya |
mADidA mAtrivara archaneyu karagaLu |
mADavavu anya karma |
kUDi manaberedu japisuta nitya dhyAnavanu |
mADidavana puNyakIDu nA kANe ||2||

pu eMdu uccharise puNyakarmake dharma |
sahayavAgi odaguvavu |
ra enne j~jAnAkhyaveMba ratunArthagaLu |
AyAsavillade bappavu |
da eMdu uccharise sarva kAmagaLannu |
dadAti eMdADuvavu |
rA yenne rAja gOpAlaviThala tanna |
sAyujyavanu yittu salahuvanu, sarvada ||3||

Leave a Reply

Your email address will not be published. Required fields are marked *

You might also like

error: Content is protected !!