Karunadi pore Haridasa

Composer : Shri Gurugopala vittala on Shri Prasannavenkata dasaru

By Smt.Shubhalakshmi Rao

ಕರುಣದಿ ಪೊರೆ ಹರಿದಾಸವರೇಣ್ಯ ಯೆನ್ನಾ |
ಸಿರಿ ಪ್ರಸನ್ವೆಂಕಟದಾಸಾನುದಾಸ ಘನ್ನಾ [ಪ]

ಹರಿ ಮಹಿಮಾವೃತ ಭಾಗವತದ ಸಾರಾ |
ವರ ವರದ್ ಹೇಳಿದನರ್ಘ್ಯ ರತುನ ಹಾರಾ |
ಭೂರಿ ಭವಿಗಳುದ್ಧಾರಕಾಗಿ ಪದಪದ್ಯಠಾಯಿಲಿ |
ಹರಿ ಚಿತ್ತಾರವಿರಚಿಸಿದ ಪರಮ ಪಾವನ ಸುಚರಿತ್ರ [೧]

ಅನುಮಾನತೀರ್ಥರಣುವ್ಯಾಖ್ಯಾನದ ಅರ್ಥ |
ಅನುವಾಗ್ ಬುಣಿಸ್ಯಾನಂದವನಿತ್ತ ಸಮರ್ಥ |
ಮನನಿಸಿ ಮಾನವ ಸಿಂಗನರಿವ ಸು –
ಜ್ಞಾನ ಮತಿಯನಿತ್ತು ಪಾಲಿಸೋ ಪವಿತರ [೨]

ಜ್ಞಾನ ಭಕುತಿ ವೈರಾಗ್ಯ ಸಂಪನ್ನನೇ ನೀ |
ಯೆನ್ನೊಳಿಹ ಹಮ್ಮನವನಳಿದು ಚೆನ್ನ ದಾರಿತೋರಿ |
ಜ್ಞಾನಗಮ್ಯ ಗುರುಗೋಪಾಲವಿಠ್ಠಲನ |
ಸನ್ನುತ ನೆನೆವಾನಂದನೆನಿಸಿ ಹರಸೆನ್ನ ಸಂತತ [೩]


karuNadi pore haridAsavarENya yennA |
siri prasanveMkaTadAsAnudAsa GannA [pa]

hari mahimAvRuta BAgavatada sArA |
vara varad hELidanarghya ratuna hArA |
BUri BavigaLuddhArakAgi padapadyaThAyili |
hari cittAraviracisida parama pAvana sucaritra [1]

anumAnatIrtharaNuvyAKyAnada artha |
anuvAg buNisyAnaMdavanitta samartha |
mananisi mAnava siMganariva su –
j~jAna matiyanittu pAlisO pavitara [2]

j~jAna Bakuti vairAgya saMpannanE nI |
yennoLiha hammanavanaLidu cenna dAritOri |
j~jAnagamya gurugOpAlaviThThalana |
sannuta nenevAnaMdanenisi harasenna saMtata [3]

Leave a Reply

Your email address will not be published. Required fields are marked *

You might also like

error: Content is protected !!