Dasa purandara

Composer : Shri Shyamasundara dasaru

By Smt.Shubhalakshmi Rao

ದಾಸ ಪುರಂದರ | ದಾಸಗುರೂ |
ವಾಸವ ನಾಮಕ ದಾಸಗುರೂ [ಪ]

ಭೂಸುರರಿಗೆ ಧನರಾಶಿ ಸಮರ್ಪಿಸಿ
ವ್ಯಾಸರಾಯರುಪದೇಶಗೊಂಡ ಹರಿದಾಸ [ಅ.ಪ]

ಜಲಜಭವನ ಪಿತನಾಜ್ಞೆಯಲಿ
ಕಲಯುಗದಲಿ ಜನ್ಮ ತಾಳುತಲಿ |
ಅಲವ ಬೋಧಮತ ನೆಲೆಯನು ಸುಲಭದಿ
ಸಿರಿಗನ್ನಡದಲ್ಲಿ ತಿಳಿಸಿ ಸಲಹಿದ [೧]

ಪವನದೇವನ ಒಲಿಸುತಲಿ | ಮಾ
ಧವನ ಸೇವಿಸುತಲೆ ಕುಣಿಯುತಲಿ
ಕವನದಿ ಭಕುತಿಯ ನವವಿಧ ಮಾರ್ಗವ
ಅವನಿಗೆ ಬೀರಿದ ದಿವಜ ಮೌನಿವರ [೨]

ಕಾಮಿತ ಫಲಗಳ ಗರೆಯುತಲಿ ಬಲು
ಪಾಮರ ಜನರನು ಸಲಹುತಲಿ
ಶ್ರೀಮನೋವಲ್ಲಭ ಶಾಮುಂದರನ
ನಾಮಾಮೃತವನು ಪ್ರೇಮದಿ ಉಣಿಸಿದ [೩]


dAsa puraMdara | dAsagurU |
vAsava nAmaka dAsagurU [pa]

BUsurarige dhanarASi samarpisi
vyAsarAyarupadESagoMDa haridAsa [a.pa]

jalajaBavana pitanAj~jeyali
kalayugadali janma tALutali |
alava bOdhamata neleyanu sulaBadi
sirigannaDadalli tiLisi salahida [1]

pavanadEvana olisutali | mA
dhavana sEvisutale kuNiyutali
kavanadi Bakutiya navavidha mArgava
avanige bIrida divaja maunivara [2]

kAmita PalagaLa gareyutali balu
pAmara janaranu salahutali
SrImanOvallaBa SAmuMdarana
nAmAmRutavanu prEmadi uNisida [3]

Leave a Reply

Your email address will not be published. Required fields are marked *

You might also like

error: Content is protected !!