Composer : Shri Purandara dasaru
ದಾಸನಾಗುವುದಕೆ ಏಸು ಜನ್ಮದ ಸುಕ್ರುತ
ಭಾಸುರ ರವಿ ಕೋಟಿ ಶ್ರೀಶ ಗುಣವಂತ
ನಿನ್ನ ದಾಸರ ದಾಸ್ಯವ ಲೇಸಾಗಿ ಕೊಡು ಕಂಡ್ಯ
ಪುರಂದರ ವಿಟ್ಟಲ ||
ಮುಯ್ಯಕ್ಕೆ ಮುಯ್ಯ ತೀರಿತು – ಜಗ |
ದಯ್ಯ ವಿಜಯ್ಯ ಸಾಹಯ್ಯ ಪಂಢರಿರಾಯ [ಪ]
ಸಣ್ಣವನೆಂದು ನಾ ನೀರು ತಾರೆಂದರೆ |
ಬೆಣ್ಣೆಗಳ್ಳ ಕೃಷ್ಣ ಮರವೆ ಮಾಡಿ |
ಚಿನ್ನದ ಗಿಂಡಿಲಿ ನೀರು ತಂದಿಟ್ಟರೆ |
ಕಣ್ಣು ಕಾಣದೆ ನಾ ಟೊಣೆದೆ ಪಂಢರಿರಾಯ [೧]
ಎನ್ನ ಪೆಸರು ಮಾಡಿ ಸೂಳೆಗೆ ಕಂಕಣ |
ವನ್ನು ನೀನಿತ್ತೆ ನಿಜರೂಪದಿ |
ಎನ್ನ ಪೀಡಿಸಿ ಪರಮ ಭಂಡನ ಮಾಡಿ |
ನಿನ್ನ ಮುಯ್ಯಕೆ ಮುಯ್ಯಿ ತೀರಿಸಿ ಕೊಣ್ಡ್ಯ ಹರಿಯೇ [೨]
ಭಕ್ತವತ್ಸಲನೆಂಬೊ ಬಿರುದು ಬೇಕಾದರೆ |
ಭಕ್ತರಾಧೀನನಾಗಿರ ಬೇಡವೆ |
ಯುಕ್ತಿಯಲಿ ನಿನ್ನಂಥ ದೇವರ ನಾ ಕಾಣೆ |
ಮುಕ್ತೀಶ ಪುರಂದರವಿಠಲ ಪಂಢರಿರಾಯ [೩]
dAsanAguvudake Esu janmada sukruta
bhAsura ravi kOTi shrIsha guNavaMta
ninna dAsara dAsyava lEsAgi koDu kaMDya
puraMdara viTTala ||
muyyakke muyya tIritu – jaga |
dayya vijayya sAhayya paMDharirAya [pa]
saNNavaneMdu nA nIru tAreMdare |
beNNegaLLa kRuShNa marave mADi |
cinnada giMDili nIru taMdiTTare |
kaNNu kANade nA ToNede paMDharirAya [1]
enna pesaru mADi sULege kaMkaNa |
vannu nInitte nijarUpadi |
enna pIDisi parama bhaMDana mADi |
ninna muyyake muyyi tIrisi koNDya hariyE [2]
BaktavatsalaneMbo birudu bEkAdare |
bhaktarAdhInanAgira bEDave |
yuktiyali ninnaMtha dEvara nA kANe |
muktISa puraMdaraviThala paMDharirAya [3]
Leave a Reply