Composer : Shri Ramakanta vittala
ಗೋಪಾಲದಾಸರ ಅಪಾರ ಗುಣಸ್ತೋತ್ರ
ತಾಪ ಪರಿಹರ ಸರ್ವ ಪಾಪಹರವೂ ||ಪ||
ಶ್ರೀಪತಿ ಹರಿಯ ಸಂ|ಪ್ರೀತಿ ಪಾತ್ರರು ಘನ
ತಾಪಸಿ ಮುಕ್ತಿ ಕಲಾಪ ಯುಕ್ತಿಲಿ ಪೇಳ್ವ ||ಅ||
ಭಾಗವತೋತ್ತಮ | ರಾಗಿ ಗುರುಗಳಿಂದ
ಭಾಗಣ್ಣನೆನಿಸಿ ಕೂಗಿಸಿಕೊಳ್ಳುತಾ
ಯೋಗಿ ಭೋಗಿ ಆಯುರ್ದಾನವ ಮಾಡಿದ ತ್ಯಾಗಿ
ರೋಗೋಪದ್ರವಗಳ ನೀಗಿಪ ಕರುಣೀ ||೧||
ಜ್ಞಾನ ಭಕ್ತಿ ವಿರಕ್ತಿ ಸಂಗಮವಾಗಿ
ಕಾಣುವುದಿವರಲ್ಲಿ ಮೂರ್ತಿಗೊಂಡು
ದೀನವತ್ಸಲ ಹರಿ | ಧ್ಯಾನನಿರತ ಮುಖ್ಯ
ಪ್ರಾಣಪತಿಯ ನಿತ್ಯ ಮಾನಸದಲಿ ಕಾಂಬ ||೨||
ವಿಜಯರಾಯರ ದಿವ್ಯ | ಕರುಣಕವಚವ ತೊಟ್ಟು
ಋಜುಮಾರ್ಗದರ್ಶಕ ಸುಜನೋದ್ದಾರಿ
ವಿಜಯಸಖನ ಗುಣ ಕಥನ ಕವನ ನಿಪುಣ
ನಿಜಗುರುಪದರಜ ಭಸಿತ ವಿಭೂಷಣ ||೩||
ಗುರುಗಳಿಂದೊಡಗೂಡಿ ತಿರುಪತಿ ವೆಂಕಟ
ಗಿರಿಯರಸನ ಯಾತ್ರೆ ಪ್ರತಿವರುಷ
ತೆರಳಿ ಶ್ರೀ ಹರಿಲೀಲೆ | ಹೊಸ ಹೊಸ ಪರಿಯಲಿ
ಹರುಷದಿಂದಲಿ ಕಂಡು | ಪೊಗಳಿದ ಸನ್ಮಹಿಮ ||೪||
ಸಾರಿ ಬಂದವ ಅ | ಪಾರ ಕರುಣದಿಂದ
ವೀರದಾಸರ ಮಾಡಿ | ತಾರಕರೆನಿಸಿ
ಶ್ರೀ ರಮಾಕಾಂತವಿಠಲ | ವಿಶ್ವಂಭರನಡಿ
ವಾರಿಜಾಶ್ರಯ ಪಡೆದು ಕೀರುತಿ ಪೊಂದಿದ ||೫||
gOpAladAsara apAra guNastOtra
tApa parihara sarva pApaharavU ||pa||
shrIpati hariya saM|prIti pAtraru ghana
tApasi mukti kalApa yuktili pELva ||a||
BAgavatOttama | rAgi gurugaLiMda
BAgaNNanenisi kUgisikoLLutA
yOgi BOgi AyurdAnava mADida tyAgi
rOgOpadravagaLa nIgipa karuNI ||1||
j~jAna Bakti virakti saMgamavAgi
kANuvudivaralli mUrtigoMDu
dInavatsala hari | dhyAnanirata muKya
prANapatiya nitya mAnasadali kAMba ||2||
vijayarAyara divya | karuNakavacava toTTu
RujumArgadarSaka sujanOddAri
vijayasaKana guNa kathana kavana nipuNa
nijagurupadaraja Basita viBUShaNa ||3||
gurugaLiMdoDagUDi tirupati veMkaTa
giriyarasana yAtre prativaruSha
teraLi SrI harilIle | hosa hosa pariyali
haruShadiMdali kaMDu | pogaLida sanmahima ||4||
sAri baMdava a | pAra karuNadiMda
vIradAsara mADi | tArakarenisi
SrI ramAkAMtaviThala | viSvaMBaranaDi
vArijASraya paDedu kIruti poMdida ||5||
Leave a Reply