Composer : Shri Vijayadasaru giving Ankita to Shri Gopaladasaru
ಗೋಪಾಲವಿಠಲ ನಿನ್ನ ಪೂಜೆ ಮಾಡುವೆನೊ
ಕಾಪಾಡು ಈ ಮಾತನು [ಪ]
ಅಪರಾ ಜನುಮದಲಿ ಕೂಡಿದವನ ಮೇಲೆ
ನೀ ಪ್ರೀತಿಯ ಮಾಡಿ ನಿಜದಾಸರೊಳಗಿಡು |ಅ.ಪ|
ಶೃತಿಶಾಸ್ತ್ರ ಪುರಾಣ ಮಿಕ್ಕಾವ ಗ್ರಂಥಗಳ
ಸತತ ಅಭ್ಯಾಸ ಮಾಡಿ
ಮಿತಿಯಿಲ್ಲದಲೆ ತೀರ್ಥ ಯಾತ್ರೆ ದಾನ ನಾನಾ
ವ್ರತಗಳ ಬಿಡದೆ ಮಾಡಿ
ಮತಿಯಲ್ಲಿ ನಿಂದು ಮಹಾ ಸ್ತೋತ್ರಗಳ ಗೈದು
ಉನ್ನತ ತಪಸುಗಳ ಮಾಡಿ
ಹಿತ ಪುಣ್ಯದಿಂದವಗೆ ಉಪದೇಶ ಮಾಡಿದೆನೊ
ಚ್ಯುತಿದೂರ ನಿನ್ನ ಕರುಣಾ ರಸಕೆ ಎಣೆಗಾಣೆ [೧]
ಏನೊ ನಿನ್ನಲ್ಲಿದ್ದ ನೇಮ ನಾ
ಕರ್ತೃತವಕಾನೆನು ಕೊಂಡಾಡುವೆ
ಜ್ಞಾನವೆ ಭಕುತರಿಗೆಯಿತ್ತು ಯತಾರ್ಥದಲಿ
ಕ್ಷೋಣಿಯೊಳಗೆ ನಡೆಸುತ
ಮಾನವರೊಳಗಿದ್ದು ವಿಚಿತ್ರವನೆ ತೋರಿ
ಎಮ್ಮನು ಧನ್ಯನ ಮಾಡುವೆ
ಮಾಣದೆ ಈಪರಿ ಕೀರ್ತಿ ತುಂಬಿರಲಾಗಿ
ಧ್ಯಾನದಲಿ ಅಮರರಿಗೆ ಬೆಡಗುಗೊಳಿಸುವ ದೇವಾ [೨]
ಅಂಕಿತವು ನಾನಿತ್ತೆ ನಿನ್ನ ಪ್ರೇರಣೆಯಿಂದ
ಕಿಂಕರರಿಗೆ ಲೌಕಿಕ ನಾ
ಡೊಂಕು ನಡತೆಯ ಬಿಡಿಸಿ
ಜನುಮ ಜನುಮದಲಿದ್ದ ಪಂಕನಿಕರವ ತೊಲಗಿಸಿ
ಶಂಕೆ ಪುಟ್ಟದಂತೆ ಕಾವ್ಯಗಳ ಪೇಳಿಪುದು
ಸಂಕಟಗಳಟ್ಟದ್ ಹಾಗೆ
ವೆಂಕಟ ಕೃಷ್ಣನು ನೀನೆ
ವಿಜಯವಿಠ್ಠಲಯಿಂದು
ಅಂಕುರವ ಫಲಿಸಿ ಫಲ ಪ್ರಾಪ್ತಿಯಾಗೇನೊ [೩]
gOpAlaviThala ninna pUje mADuveno
kApADu I mAtanu [pa]
aparA janumadali kUDidavana mEle
nI prItiya mADi nijadAsaroLagiDu |a.pa|
SRutiSAstra purANa mikkAva graMthagaLa
satata aByAsa mADi
mitiyilladale tIrtha yAtre dAna nAnA
vratagaLa biDade mADi
matiyalli niMdu mahA stOtragaLa gaidu
unnata tapasugaLa mADi
hita puNyadiMdavage upadEsha mADideno
cyutidUra ninna karuNA rasake eNegANe [1]
Eno ninnallidda nEma nA
kartRutavakAnenu koMDADuve
j~jAnave bhakutarigeyittu yatArthadali
kShONiyoLage naDesuta
mAnavaroLagiddu vichitravane tOri
emmanu dhanyana mADuve
mANade Ipari kIrti tuMbiralAgi
dhyAnadali amararige beDagugoLisuva dEvA [2]
aMkitavu nAnitte ninna prEraNeyiMda
kiMkararige laukika nA
DoMku naDateya biDisi
januma janumadalidda paMkanikarava tolagisi
SaMke puTTadaMte kAvyagaLa pELipudu
saMkaTagaLaTTad hAge
veMkaTa kRuShNanu nIne
vijayaviThThalayiMdu
aMkurava phalisi Pala prAptiyAgEno [3]
Leave a Reply