Composer : Shri Vidyaprasanna Tirtharu
Shri Jagannatha Tirtharu – 1755-1770
Ashrama Gurugalu: Shri Raguhnatha Tirtharu [SESHACHANDRIKACHARYARU]
Ashrama Shishyaru: Shri Srinatha Tirtharu
ಶ್ರೀ ಜಗನ್ನಾಥತೀರ್ಥರ ದಿವ್ಯ ಮಹಿಮೆಯನು
ರಾಜಿಸುವ ಹೈಮಲಿಪಿಯಲ್ಲಿ ಬರೆಯಲಿ ಬೇಕು ||ಪ
ಈ ಜಗದಿ ಸುಜನ ಸುರಭೂಜರಾಗಿಹ ಮಹಾ
ರಾಜ ಶ್ರೀ ರಘುನಾಥತೀರ್ಥ ಕರ || ಅ.ಪ. ||
ಉದ್ಭವಿಸಿದರು ಗಾಲವರು ಜಗದೊಳೆಂಬಂಶ
ವೇದ್ಯವಾಯಿತು ಆಪ್ತ ಜನ ವೃಂದಕೆ
ಮಧ್ವಮತ ತತ್ವಗಳ-ನುದ್ಧಾರವನೆ ಗೈದ
ದಿಗ್ಧಂತಿಗಳತಿ ಪ್ರಸಿದ್ಧ ಸ್ಥಾನವ ಪಡೆದ [೧]
ಸಕಲ ಶಾಸ್ತ್ರಾರ್ಥ ನಿರ್ಣಯಗೈವ ಪರಸೂತ್ರ
ನಿಕರಗಳಿ-ಗಲವಬೋಧರ ಭಾಷ್ಯವ
ಸುಖದಿಂದಲರಿಯಲುಪ ಕೃತಿಗೈದ ಯತಿಕುಲ
ತಿಲಕ ಭಾಷ್ಯಾ ದೀಪಿಕಾಚಾರ್ಯರೆಂದತಿ ಖ್ಯಾತ [೨]
ಸರ್ವಗುಣ ಗುಣಪೂರ್ಣ ಸರ್ವತ್ರ ವ್ಯಾಪ್ತ ಹರಿ
ಸರ್ವಭಕ್ತ ಪ್ರಸನ್ನನೆಂದರುಹಲು
ಓರ್ವ ಆಮ್ರ ವೃಕ್ಷದಲಿ ಶ್ರೀ ನರಹರಿಯ
ಉರ್ವನುಗ್ರಹ ಪಡೆದ ಸರ್ವತಂತ್ರ ಸ್ವತಂತ್ರ [೩]
SrI jagannAthatIrthara divya mahimeyanu
rAjisuva haimalipiyalli bareyali bEku ||pa
I jagadi sujana suraBUjarAgiha mahA
rAja SrI raGunAthatIrtha kara || a.pa. ||
udBavisidaru gAlavaru jagadoLeMbaMSa
vEdyavAyitu Apta jana vRuMdake
madhvamata tatvagaLa-nuddhAravane gaida
digdhaMtigaLati prasiddha sthAnava paDeda [1]
sakala SAstrArtha nirNayagaiva parasUtra
nikaragaLi-galavabOdhara BAShyava
suKadiMdalariyalupa kRutigaida yatikula
tilaka BAShyA dIpikAcAryareMdati KyAta [2]
sarvaguNa guNapUrNa sarvatra vyApta hari
sarvaBakta prasannaneMdaruhalu
Orva Amra vRukShadali SrI narahariya
urvanugraha paDeda sarvataMtra svataMtra [3]
Leave a Reply