Mooru namagala dharisida

Composer : Shri Gopala dasaru

By Smt.Shubhalakshmi Rao

ಸರ್ವರಿಗೆ ಪ್ರೇರಕ, ಸರ್ವ ಕರ್ತೃ ಭೋಕ್ತ,
ಸರ್ವತ್ರದಲಿ ವ್ಯಾಪ್ತ, ಸರ್ವ ಶಬ್ದ ವಾಚ್ಯ,
ಸರ್ವ ಗುಣ ಪರಿಪೂರ್ಣ, ಸರ್ವ ದೋಶ ದೂರ,
ಸರ್ವ ಜ್ಞಾನಗಮ್ಯ , ಸರ್ವ ಶಕ್ತಿ ಮೂರ್ತಿ ಸರ್ವೇಶ,
ಎನುವ ಗೋಪಾಲ ವಿಠಲರೇಯ ಶ್ರೀನಿವಾಸ,
ಸರ್ವಂತರ್ಯಾಮಿ ಸಾರ್ವಭೌಮ, ನಮೋ ಶ್ರೀನಿವಾಸ…

ಮೂರು ನಾಮಗಳ ಧರಿಸಿದ ಕಾರಣವೇನೊ
ಸಾರಿ ಪೇಳಲೋ ಈಗಲೇ ದೇವ ||ಪ||

ಶ್ರೀ ರಮಾಪತೆ ಶ್ರೀನಿವಾಸ ವೆಂಕಟರಮಣ
ಯಾರು ಇಟ್ಟರೊ ನಿನಗೆ ಮೂರು ನಾಮಗಳ |ಅ.ಪ|

ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು |
ಶುದ್ಧ ಪಾದಕೆ ಎರಗಿ ಕರವ ಮುಗಿದು |
ಎದ್ದು ನೋಡಲು ನಿನ್ನ ಫಣೆಯೊಳೀಪರಿ ಇರಲು
ಮಧ್ವಮತದ ದೈವವೆಂದು ನಿನ್ನ ಕರೆಯುವರೆ ||೧||

ಸಾಲದೆ ನಿನ್ನ ಸೌಂದರ್ಯಕ್ಕೆ ಒಂದು ತಿಲಕ |
ಪಾಲಸಾಗರಶಾಯಿ ಚೆಲುವಮೂರುತಿ |
ಕಾಲಕಾಲಕೆ ಬರುವ ಭಕುತಜನಗಳ ವೃಂದ |
ದೃಷ್ಟಿ ತಾಕುವುದೆಂದು ತೋರುವ ಬಗೆಯೊ ||೨||

ಮೂರು ಲೋಕಗಳಿಹವು ಮೂರುರೂಪನು ನಾನು |
ಮೂರು ಮಾಳ್ಪೆನು ಜಗವ ಮೂರು ಗುಣದೀ |
ಮೂರು ತಾಪವಗೆದ್ದು ಮಾರ್ಗದಿ ಭಜಿಸಿದಗೆ |
ಪಾರು ಮಾಡುವೆನೆಂದು ತೋರುವ ಬಗೆಯೊ ||೩||

ಮೂರೆರಡು ಎರಡೊಂದು ಇಂದ್ರಿಯ ವರ್ಜಿಸಲು |
ತೋರುವನು ನಿಜರೂಪ ಭಕ್ತನೆಂದು |
ಸಾರುತ್ತಿದ್ದರು ವಾಯು ಅರಿಯದೆ ಭಜಿಸಿದಗೆ |
ಮೂರುನಾಮವೆ ಗತಿ ಎನ್ನುವ ಬಗೆಯೋ ||೪||

ಶ್ರೀಲೋಲ ಕೃಷ್ಣ ಗೋಪಾಲವಿಠ್ಠಲ ನಿನ್ನ
ಈ ಬಗೆಯ ಲೀಲೆಗಳ ಅರಿವರ್ಯಾರೋ |
ವ್ಯಾಳಶಯನ ವೆಂಕಟೇಶನೆ ಎನ್ನ ಮನಕೆ |
ಕಾಲಕಾಲಕೆ ನಿನ್ನ ಲೀಲೆಗಳ ತೋರೋ ||೫||


sarvarige prEraka, sarva kartRu bhOkta,
sarvatradali vyApta, sarva shabda vAchya,
sarva guNa paripUrNa, sarva dOsha dUra,
sarva j~jAnagamya , sarva shakti mUrti sarvEsha,
enuva gOpAla viThalarEya SrInivAsa,
sarvaMtaryAmi sArvabhauma, namO SrInivAsa…

mUru nAmagaLa dharisida kAraNavEno
sAri pELalO IgalE dEva ||pa||

SrI ramApate SrInivAsa veMkaTaramaNa
yAru iTTaro ninage mUru nAmagaLa |a.pa|

Suddha vaiShNavarella Suddha mUruti eMdu |
Suddha pAdake eragi karava mugidu |
eddu nODalu ninna phaNeyoLIpari iralu
madhvamatada daivaveMdu ninna kareyuvare ||1||

sAlade ninna sauMdaryakke oMdu tilaka |
pAlasAgaraSAyi celuvamUruti |
kAlakAlake baruva BakutajanagaLa vRuMda |
dRuShTi tAkuvudeMdu tOruva bageyo ||2||

mUru lOkagaLihavu mUrurUpanu nAnu |
mUru mALpenu jagava mUru guNadI |
mUru tApavageddu mArgadi Bajisidage |
pAru mADuveneMdu tOruva bageyo ||3||

mUreraDu eraDoMdu iMdriya varjisalu |
tOruvanu nijarUpa BaktaneMdu |
sAruttiddaru vAyu ariyade Bajisidage |
mUrunAmave gati ennuva bageyO ||4||

SreelOla kRuShNa gOpAlaviThThala ninna
I bageya leelegaLa arivaryArO |
vyALaSayana veMkaTESane enna manake |
kAlakAlake ninna leelegaLa tOrO ||5||

Leave a Reply

Your email address will not be published. Required fields are marked *

You might also like

error: Content is protected !!