Sweekarisennaya poojeya tulasi

Composer : Shri Vidyaprasanna Teertharu

By Smt.Shubhalakshmi Rao

ಸ್ವೀಕರಿಸೆನ್ನಯ ಪೂಜೆಯ ತುಳಸೀ
ಲೋಕೋತ್ತರನರಸೀ ||ಪ||

ಈ ಕರಗಳು ಧನ್ಯಗಳಾಗಲಿ ಮನ
ವ್ಯಾಕುಲ ಪರಿಹರಿಸಮ್ಮ ಜನನಿ ||ಅ.ಪ||

ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ
ಫುಲ್ಲ ಕುಸುಮವಿರಲು
ಒಲ್ಲನು ಹರಿ ನೀನಿಲ್ಲದ ಪೂಜೆಯ
ಬಲ್ಲರಿದನು ಜ್ಞಾನಿ ಗಳು ಮಾತೆ ||೧||

ವಂದಿಸಿ ನಿನ್ನಯ ಚರಣಗಳಿಗೆ ಫಲ
ಗಂಧ ಪುಷ್ಪಗಳನರ್ಪಿಸುವೆ
ಬೃಂದಾವನ ಲೋಲನ ವಲ್ಲಭೆ ಮೃದು
ಮಂದ ಹಾಸವನು ತೋರೆ ಮಾತೆ ||೨||

ನೀನಿದ್ದೆಡೆ ಹರಿ ತಾನಿರುವನು ಅನು
ಮಾನವಿಲ್ಲವೆನಗೆ
ದಾನ ಧರ್ಮಗಳ ಫಲಕೆ ಕಾರಣಳು
ನೀನಾಗಿರುವೆ ಪ್ರಸನ್ನ ವದನೆ ||೩||


svIkarisennaya pUjeya tuLasI
lOkOttaranarasI ||pa||

I karagaLu dhanyagaLAgali mana
vyAkula pariharisamma janani ||a.pa||

mallige saMpige jAji sEvaMtige
Pulla kusumaviralu
ollanu hari nInillada pUjeya
ballaridanu j~jAni gaLu mAte ||1||

vaMdisi ninnaya caraNagaLige Pala
gaMdha puShpagaLanarpisuve
bRuMdAvana lOlana vallaBe mRudu
maMda hAsavanu tOre mAte ||2||

nIniddeDe hari tAniruvanu anu
mAnavillavenage
dAna dharmagaLa Palake kAraNaLu
nInAgiruve prasanna vadane ||3||

Leave a Reply

Your email address will not be published. Required fields are marked *

You might also like

error: Content is protected !!