Sadhana suladi 84 – Vijayadasaru

Smt.Nandini Sripad

ಶ್ರೀವಿಜಯದಾಸಾರ್ಯ ವಿರಚಿತ
ಸಾಧನ ಸುಳಾದಿ ೮೪
(ಜಡವಾದ ಒಡವೆಗಳಲ್ಲಿ ವೈರಾಗ್ಯ ತಾಳಿ,
ಉತ್ತಮಗುಣವಾದ ಗುಣಾತಿಶಯವುಳ್ಳ
ಶ್ರೀಹರಿಯ ನಾಮವೆಂಬ ಒಡವೆ ಇಡುವದು.)
ರಾಗ: ಕಲ್ಯಾಣಿ

ಧ್ರುವತಾಳ

ಒಡವೆಗಳಿಡುವದು ಬಿಡದೆ ಪತಿ ಭಕುತಿ
ಪಿಡಿವ ನಡಿವ ಗುಣದ ಮಡದೇರು ಸರ್ವರು
ಪೊಡವಿಯೊಳಗೆ ವುಳ್ಳ ಜಡವಾದ ದ್ರವ್ಯದಿಂದ
ಜಡಿತ ವಸ್ತದ ನಿಬಿಡ ಧರಿಸಿದರದು
ಕೆಡಿಸುವದು ಸ್ವರೂಪ ತಡಿಯದೆ ಕಾಮಜನರು
ಇಡುವರು ಮನಕ್ಲೇಶ ಬಡುವರು ತಮ್ಮೊಳಗೆ
ಬಡಿವಾರ ಬಪ್ಪದು ಒಡನೆ ಅಹಂಕಾರ ಮಮತೆ
ಕಡು ಪೆಚ್ಚುವರು ಬಲು ಕಡೆ ಮೊದಲಿಲ್ಲದೆ
ಅಡಿಗಡಿಗೆ ಭಯಬಡಬೇಕು ಒಬ್ಬರಿಗೆ
ಕೊಡಬೇಕು ಕಡುದುಃಖ ಬಡಬೇಕು ಈಯದಿರೆ
ಎಡಬಲ ರಿಪುಜನರು ಘುಡಿಘುಡಿಸುವರು ಬ –
ಚ್ಚಿಡಬೇಕು ನಾನಾ ತೊಡಕು ಬಂದಾಗಲೂ
ಬಡತನ ಮಿಕ್ಕಾದ ತೊಡರು ಒದಗಿದಾಗ
ಮಿಡುಕಬೇಕು ವತ್ತೆ ಇಡುವಾಗ ಮಾರುವಾಗ
ಬಿಡು ಬಿಡು ವಸ್ತದ ಗೊಡಿವೆ ನಿಮಗ್ಯಾತಕೆ
ದೃಢ ಮಾಡಿ ಮನ ಸಂಗಡಲೆ ಕೈವಲ್ಯಕೆ
ತಡಿಯುಂಟು ತೀವ್ರವಾಗಿ ಒಡೆತನ ಘನವೆನ್ನಿ
ಕಡಲಶಯನ ನಮ್ಮ ವಿಜಯವಿಟ್ಠಲನ್ನ ನಾಮವೆಂಬೊ
ಒಡವೆ ವಸ್ತ ಇಟ್ಟು ನಡೆ ಪತಿವೃತರಾಗಿ || ೧ ||

ಮಟ್ಟತಾಳ

ವಾಲಿಭಂಜನನೆಂಬೊ ವಾಲಿಯನ್ನು ಧರಿಸಿ
ಬಾಲಲೋಲನೆಂಬೊ ಕಾನಬಾವಲಿ ಇಡಿ
ಹಾಲಸಾಗರ ಸದನನೆಂಬೊ ಮೇಲಾದ ಬುಗುಡಿ
ಕಾಳಿಂಗ ಭಂಗನೆಂಬ ಕಠಾಣಿಯ ಕಟ್ಟಿ
ಭೂಲೋಲನೆಂಬೊ ಭುಜಕೀರ್ತಿಯ ಧರಿಸಿ
ಮೂಲಮೂರುತಿ ನಮ್ಮ ವಿಜಯವಿಟ್ಠಲನ್ನ
ಆಳಾದವನ ನಿಜ ತೋಳಿಲಿ ನಲಿದಾಡಿ || ೨ ||

ರೂಪಕತಾಳ

ಕಮಲನಾಭನೆಂಬೊ ಕಡಗ ಕಂಕಣ ವಿಡಿ
ಅಮರಪಾಲಕನೆಂಬೊ ಅಚ್ಚ ಮೋಹನ ಹಾರ
ತಮಹರನೆಂದೆಂಬೊ ತಳಕು ಪದಕ ಹಾಕಿ
ರಮಾರಮಣನೆಂದೆಂಬೊ ರಾಜಿಪ ಉಂಗುರ
ಉಮೆಯರಸವಂದ್ಯ ಸಿರಿ ವಿಜಯವಿಟ್ಠಲನಂಘ್ರಿ
ಕಮಲವ ನೆನೆದು ಸಂತತ ಸುಖಿಯಾಗಿ || ೩ ||

ಝಂಪೆತಾಳ

ಶೇಷಹಾಸಿಕೆ ಎಂಬೊ ಸರಿಗೆಯನು ಧರಿಸುವದು
ದೋಷನಾಶನವಾದ ದೋರೆಯನ್ನು
ವಾಸುದೇವನೆಂಬೊ ವಾಲಿಯ ಸರಪಳಿ
ಕೇಶವಾನೆಂಬೊ ಕಾಲಂದಿಗಿಯಾ
ಸಾಸಿರನಾಮವೆಂಬೊ ಸರದ ಮುತ್ತನೆ ಕಟ್ಟಿ
ದೇಶಾಧಿಪತಿ ಎಂಬೊ ಕಾಂಚಿದಾಮಾ
ಲೇಸಾಗಿ ವರವೀವ ವಿಜಯವಿಟ್ಠಲರೇಯನ
ದಾಸನಾದವನ ಸಂತೋಷವನು ಬಡಿಸಿ || ೪ ||

ತ್ರಿವಿಡಿತಾಳ

ಪರಮಪುರುಷನೆಂಬೊ ಹರಡಿಯ ಕೈ ಕಟ್ಟು
ಮುರವಿರೋಧಿ ಎಂಬೊ ಮುತ್ತಿನ ಸರವೊ
ಪುರುಷೋತ್ತಮನೆಂಬೊ ಪುಣಗು ಸಾದಿನ ಬೊಟ್ಟು
ಕರಿವರದನೆಂಬೊ ನ್ಯಾವಳದ ಸರ
ಪರದೈವ ಹರಿ ಎಂಬೊ ಮುತ್ತಿನ ಮೂಗುತಿಯು
ತರಣಿಭಾಸನೆಂಬೊ ಮುತ್ತಿನ ಚಿಂತಾಕ
ಸರುವ ದೇವರದೇವ ವಿಜಯವಿಟ್ಠಲನ್ನ
ಸ್ಮರಣೆ ಮಾಡುತ ಸಂಚರಿಸೋದು ಪ್ರತಿದಿನ || ೫ ||

ಅಟ್ಟತಾಳ

ಪಿನಾಕಿಸಖನೆಂಬ ಪಿಲ್ಲೆಯ ಇಡುವದು
ಶ್ರೀನಾಥನೆಂದಂಬೊ ಕಾಲುಂಗರನಿಟ್ಟು
ಪ್ರಾಣನಾಯಕನೆಂಬೊ ಕಿರಿಪಿಲ್ಲೆಯನು ಇಟ್ಟು
ವಾಣೀಪತಿ ಪಿತನೆಂಬೊ ಮೆಂಟಿಕಿಯಾ
ಬಾಣಾಂತಕನೆಂಬೊ ಬಣ್ಣಬಣ್ಣದ ಸರ
ಕ್ಷೋಣಿಧರನೆಂಬೊ ಚಂದ್ರ ಸೂರ್ಯರ ಕಾಂತಿ
ಮಾನದೊಡಿಯ ನಮ್ಮ ವಿಜಯವಿಟ್ಠಲನ್ನ
ಜ್ಞಾನ(ಧ್ಯಾನ)ದಲ್ಲಿಪ್ಪದೆ ಮಂಗಳಸೂತ್ರ || ೬ ||

ಆದಿತಾಳ

ಪತಿದೈವವೆಂದು ತಿಳಿದು ಸತತ ನಡಿಯಬೇಕು
ಪತಿ ದರುಶನವೆ ಶ್ರೀಪತಿ ದರುಶನವೆನ್ನಿ
ಪತಿಯ ಸಲ್ಲಾಪವೆ ಶ್ರುತಿವಚನ ಎನಬೇಕು
ಪತಿ ಉಪಚಾರ ಲಕ್ಷ್ಮೀಪತಿ ಸೇವೆ ಎನಬೇಕು
ಪತಿಪಾದಜಲ ತೀರಥ ಜಲವೆನಬೇಕು
ಪತಿ‌ಉಚ್ಛಿಷ್ಠ ಅಮೃತ ಪ್ರಾಶನೆನಬೇಕು
ಪತಿ ಅಂಗ ಸಂಗ ಉನ್ನತಗತಿ ಎನಬೇಕು
ಪತಿಯಲ್ಲದನ್ಯತ್ರ ದೈವವಿಲ್ಲೆನಬೇಕು
ಪತಿ ಮಾತಿಗೆ ನಿತ್ಯ ಪ್ರತಿಕೂಲವಾಗದೆ
ಹಿತದಲ್ಲಿ ನಡೆದು ಭಕುತಿ ಪಡಿಯಲುಬೇಕು
ಪತಿ ಅಂತರ್ಗತನಾದ ವಿಜಯವಿಟ್ಠಲ ಹರಿಯ
ನುತಿಸಿ ಸಾಧನದಿಂದ ಮತಿವಂತರಾಗುವದೂ || ೭ ||

ಜತೆ

ವೈರಾಗ್ಯವೆಂಬೊ ಭಾಗ್ಯದಲ್ಲಿ ಲೋಲಾಡಿ
ವೀರನಾದ ವಿಜಯವಿಟ್ಠಲನ್ನ ನೆನೆಸೋದು ||


SrIvijayadAsArya viracita
sAdhana suLAdi 84
(jaDavAda oDavegaLalli vairAgya tALi,
uttamaguNavAda guNAtiSayavuLLa
SrIhariya nAmaveMba oDave iDuvadu.)
rAga: kalyANi

dhruvatALa

oDavegaLiDuvadu biDade pati Bakuti
piDiva naDiva guNada maDadEru sarvaru
poDaviyoLage vuLLa jaDavAda dravyadiMda
jaDita vastada nibiDa dharisidaradu
keDisuvadu svarUpa taDiyade kAmajanaru
iDuvaru manaklESa baDuvaru tammoLage
baDivAra bappadu oDane ahaMkAra mamate
kaDu peccuvaru balu kaDe modalillade
aDigaDige BayabaDabEku obbarige
koDabEku kaDuduHKa baDabEku Iyadire
eDabala ripujanaru GuDiGuDisuvaru ba –
cciDabEku nAnA toDaku baMdAgalU
baDatana mikkAda toDaru odagidAga
miDukabEku vatte iDuvAga mAruvAga
biDu biDu vastada goDive nimagyAtake
dRuDha mADi mana saMgaDale kaivalyake
taDiyuMTu tIvravAgi oDetana Ganavenni
kaDalaSayana namma vijayaviTThalanna nAmaveMbo
oDave vasta iTTu naDe pativRutarAgi || 1 ||

maTTatALa

vAliBaMjananeMbo vAliyannu dharisi
bAlalOlaneMbo kAnabAvali iDi
hAlasAgara sadananeMbo mElAda buguDi
kALiMga BaMganeMba kaThANiya kaTTi
BUlOlaneMbo BujakIrtiya dharisi
mUlamUruti namma vijayaviTThalanna
ALAdavana nija tOLili nalidADi || 2 ||

rUpakatALa

kamalanABaneMbo kaDaga kaMkaNa viDi
amarapAlakaneMbo acca mOhana hAra
tamaharaneMdeMbo taLaku padaka hAki
ramAramaNaneMdeMbo rAjipa uMgura
umeyarasavaMdya siri vijayaviTThalanaMGri
kamalava nenedu saMtata suKiyAgi || 3 ||

JaMpetALa

SEShahAsike eMbo sarigeyanu dharisuvadu
dOShanASanavAda dOreyannu
vAsudEvaneMbo vAliya sarapaLi
kESavAneMbo kAlaMdigiyA
sAsiranAmaveMbo sarada muttane kaTTi
dESAdhipati eMbo kAMcidAmA
lEsAgi varavIva vijayaviTThalarEyana
dAsanAdavana saMtOShavanu baDisi || 4 ||

triviDitALa

paramapuruShaneMbo haraDiya kai kaTTu
muravirOdhi eMbo muttina saravo
puruShOttamaneMbo puNagu sAdina boTTu
karivaradaneMbo nyAvaLada sara
paradaiva hari eMbo muttina mUgutiyu
taraNiBAsaneMbo muttina ciMtAka
saruva dEvaradEva vijayaviTThalanna
smaraNe mADuta saMcarisOdu pratidina || 5 ||

aTTatALa

pinAkisaKaneMba pilleya iDuvadu
SrInAthaneMdaMbo kAluMgaraniTTu
prANanAyakaneMbo kiripilleyanu iTTu
vANIpati pitaneMbo meMTikiyA
bANAMtakaneMbo baNNabaNNada sara
kShONidharaneMbo caMdra sUryara kAMti
mAnadoDiya namma vijayaviTThalanna
j~jAna(dhyAna)dallippade maMgaLasUtra || 6 ||

AditALa

patidaivaveMdu tiLidu satata naDiyabEku
pati daruSanave SrIpati daruSanavenni
patiya sallApave Srutivacana enabEku
pati upacAra lakShmIpati sEve enabEku
patipAdajala tIratha jalavenabEku
pati^^ucCiShTha amRuta prASanenabEku
pati aMga saMga unnatagati enabEku
patiyalladanyatra daivavillenabEku
pati mAtige nitya pratikUlavAgade
hitadalli naDedu Bakuti paDiyalubEku
pati aMtargatanAda vijayaviTThala hariya
nutisi sAdhanadiMda mativaMtarAguvadU || 7 ||

jate

vairAgyaveMbo BAgyadalli lOlADi
vIranAda vijayaviTThalanna nenesOdu ||

Leave a Reply

Your email address will not be published. Required fields are marked *

You might also like

error: Content is protected !!