Prarthana suladi 61 – Vijayadasaru

Smt.Nandini Sripad

ಶ್ರೀವಿಜಯದಾಸಾರ್ಯ ವಿರಚಿತ
ಪ್ರಾರ್ಥನಾ ಸುಳಾದಿ
(ಶ್ರೀಹರಿಯೆ, ನಿನ್ನ ನಿಜಭಕ್ತರಾದ ಜ್ಞಾನಿಗಳು
ಮಹಾಮಹಿಮೆಯುಳ್ಳವರು. ಅವರ ಪಾದರಜವು
ಸೋಕಲು ಸಕಲವೂ ಪ್ರಾಪ್ತಿ. ಕಾರಣ ಇಂಥ ಸಜ್ಜನರ
ಸಂಗವನ್ನು ಕೊಡುವದೆಂದು ದೈನ್ಯದಿಂದ ಪ್ರಾರ್ಥನೆ.)
ರಾಗ: ಸಾವೇರಿ

ಧ್ರುವತಾಳ

ಕೊಡು ನಿನ್ನವರ ಸಂಗ ಕೆಡಿಸದಿರೆಲೊ ರಂಗ
ಪೊಡಮಡುವೆ ದುರಿತಭಂಗ ಕಡು ಕಾರುಣ್ಯಾಪಾಂಗ
ಪಿಡಿ ಕರ ಮಂಗಳಾಂಗ ನುಡಿದವರಂತರಂಗ
ಬಿಡದೆ ಹೃದಯಾಬ್ಜ ಭೃಂಗ ಬಿಡಿ ಬೀಸದಲೆ ತುಂಗ
ಧೃಢವುಳ್ಳ ನರಶಿಂಗ ನಡೆಸು ಭಕ್ತಿ ತರಂಗ
ಎಡೆಗೆಡಿಸುವರ ಭಂಗ ತಡಿಗಡಿಯೊ ವಿಹಂಗ
ಮೃಡ ಸುರೇಶ ಅನಂಗರೊಡಲೊಳಗಿಪ್ಪ ಲಿಂಗ
ಕುಡಿಸು ಸುಧಾಪಿಶಂಗ ಉಡಿಗೆಯಲಿಪ್ಪ ರಥಾಂಗ
ಪಿಡಿದ ನಿತ್ಯ ನಿಸ್ಸಂಗ ಕಡುತೇಜಾ ಉತ್ತುಮಾಂಗ
ಬಡವಾರಿಗಂಗ ಸಂಗ ವಿಜಯವಿಟ್ಠಲ ರಂಗ
ಕೊಡು ನಿನ್ನವರ ಸಂಗ ಕೊಡು ನಿನ್ನವರ ಸಂಗ || ೧ ||

ಮಟ್ಟತಾಳ

ಸ್ನಾನವನು ವಲ್ಲೇ ಮೌನವನು ವಲ್ಲೇ
ಮಾನವನು ವಲ್ಲೇ ದಾನವನು ವಲ್ಲೇ
ಧ್ಯಾನವನು ವಲ್ಲೇ ಗಾನವನು ವಲ್ಲೇ
ನಾನಾ ಯಾಗ ಪುರಾಣಗಳು ವಲ್ಲೇ
ಏನೇನು ಚರಿಸುವ ಶ್ರೇಣಿ ಕರ್ಮಂಗಳು
ನಾನೊಲ್ಲೆನು ಜೀಯಾ ಮಾನವೆ ಒಂದುಂಟು
ಶ್ರೀನಾಥನೆ ನಿನ್ನಾರ್ಚನೆ ಮಾಡುವಂಥ
ಜ್ಞಾನಿಗಳ ಪಾದರೇಣು ಎನಗೆ ವಮ್ಮೆ
ಮಾಣದೆ ಸೋಕಿದರು ಅನಂತ ಜನುಮದ ಸಾ –
ಧಾನ ಫಲವೆ ಎಂದು ಅನಂತ ಶೃತಿಯಲ್ಲಿ
ಈ ನುಡಿ ಸಿದ್ಧವಿದೆ ಸಿದ್ಧವಿದೆ ದೇವ
ಶ್ರೀನಿವಾಸ ವಿಜಯವಿಟ್ಠಲ ಇಂದೆ ನಿ –
ರ್ವಾಣ ಕರುಣಿಸಲು ನಾನದು ಹಂಬಲಿಸೆ || ೨ ||

ತ್ರಿವಿಡಿತಾಳ

ಕ್ಷೇತುರ ಉತ್ತಮದಲ್ಲಿ ಜನಿಸಿ ನಿರ್ಮಳ ಕಾಲ
ಗೋತುರನಾಗಿ ಸತಿ ಅನುಕೂಲದಿ
ಪಾತಕರೊಳಗೆ ಯಿಪ್ಪ ಬಹುಕಾಲದಲಿ ತನ್ನ
ನೇತುರ ಕರ್ಣ ಶ್ರೋತುರ ನಾನಾ ಸರ್ವ
ಗಾತುರ ಹರಿ ಸೇವಿಗೆ ತಿಳಿದು ಒಪ್ಪಿಸುವ ಪ –
ವೀತುರ ಮನಸಿನಲಿ ಯಿಪ್ಪ ಪಾಪರಾಶಿಯ
ಕಾತುರವಳಿದು ಕಂಡಕಡೆ ತಿರುಗದೆ
ಮಾತುರ ವ್ಯರ್ಥವೆನದೆ ಎಂದೆಂದಿಗೆ ದೇವ
ಮಾತ ಪಿತುರ ಭ್ರಾತ ನಾನಾಕುಲ ವರ್ಗ
ಮೈತುರ ಪರಿವಾರ ಪರಮ ಮಂಗಳ ಪುತ್ರ ಕ –
ಳಾತುರ ಈ ವಿಧವೆಲ್ಲ ಹರಿಯಿತ್ತದೆಂದರಿದು
ಸ್ತೋತುರ ಮಾಡುತ ಮುದದಿಂದ ಪ್ರತಿದಿನ
ಆತುರದಿಂದಲಿ ಕೂಗಿ ಭಕುತಿಯಿಂದ
ಪ್ರಾತುರದಿ ತೊರೆಯದೇ ಸುತ್ತಲಿದ್ದವರ ಪು –
ನೀತರನ ಮಾಡುವ ಪೂರ್ಣವಾಗೀ
ಗೋತುರಧರ ನಮ್ಮ ವಿಜಯವಿಟ್ಠಲ ಅಣು –
ಮಾತುರ ನಿನ್ನ ಬಿಡದವರ ಸಂಗವಾಗಲಿ || ೩ ||

ಅಟ್ಟತಾಳ

ಕ್ಷಣ ಒಂದರೊಳು ಗಣನೆ ಇಲ್ಲದ ತೀರ್ಥ
ಕ್ಷಣ ಒಂದರೊಳು ಗಣನೆ ಇಲ್ಲದ ಯಾತ್ರಿ
ಕ್ಷಣ ಒಂದರೊಳು ಗಣನೆ ಇಲ್ಲದ ದಾನ
ಕ್ಷಣ ಒಂದರೊಳು ಗಣನೆ ಇಲ್ಲದ ನಾನ
ಅನುಪಮ ವೃತಗಳು ತನಗೆ ತಾನೆ ಬಂದು
ಮನೋಹರವಾಗುವವು ಅನುದಿನ ಬಿಡದಲೆ
ವನಜನಾಭನೆ ನಿನ್ನ ನೆಚ್ಚಿದಾಳಿನ
ಮಿನಗುವಗ ಚರಣ ಕೊನೆಧೂಳಿ ಸೋಕಲಾ –
ವನೆ ಬಲುಧನ್ಯ ಬಲುಧನ್ಯನೋ
ಅನಿಮಿತ್ಯ ಬಂಧು ಶ್ರೀವಿಜಯವಿಟ್ಠಲ ನಿನ್ನ
ಮನಸಿಗೆ ಬಂದ ದಾಸನ ಮಹಿಮೆಯಿಂತೊ || ೪ ||

ಆದಿತಾಳ

ಹಲವು ಅಪೇಕ್ಷಿಸಿ ಹಲುಬುವದ್ಯಾತಕೆ
ಫಲ ಮುಂದಿರಲು ನಭ ತಳವ ಅರಿಸಿದಂತೆ
ಸುಲಭ ಸಾಧನ ತನ್ನ ಬಳಿಯಲ್ಲಿ ಇರಲಿಕ್ಕೆ
ನೆಲಗಾಣೆನೆಂದು ಗಾತ್ರ ಬಳಲಿಸಿಕೊಂಡು ವ್ಯರ್ಥ
ಅಳಲಿ ತೊಳಲಿ ನಿತ್ಯ ಕಳೆಗುಂದಿ ಪೋಗುವದೆ
ತಿಳಿದು ಈ ಪರಿ ಹಂಬಲಗೊಂಬುವದೇನೊ
ನಿಲವರ ಪೇಳು ಎನ್ನಾಮಲ ಮನಸಿಗೆ ಇಂದು
ಬಲುಧಾವಂತಿ ಬಟ್ಟರು ಸಲುವದೆ ಗತಿಮಾರ್ಗ
ಚಲುವ ದೇವರ ದೇವ ವಿಜಯವಿಟ್ಠಲ ನಿನ್ನ
ನೆಲೆಬಲ್ಲವರ ಪಾದರಜ ಭವಹಾರ || ೫ ||

ಜತೆ

ಇದೆ ಇದೆ ಕರುಣಿಸು ಎನಗೆ ನಿರುತದಲ್ಲಿ
ಯದುಪತಿ ವಿಜಯವಿಟ್ಠಲರೇಯ ನೀನೊಲಿದು ||


SrIvijayadAsArya viracita
prArthanA suLAdi
(SrIhariye, ninna nijaBaktarAda j~jAnigaLu
mahAmahimeyuLLavaru. avara pAdarajavu
sOkalu sakalavU prApti. kAraNa iMtha sajjanara
saMgavannu koDuvadeMdu dainyadiMda prArthane.)
rAga: sAvEri

dhruvatALa

koDu ninnavara saMga keDisadirelo raMga
poDamaDuve duritaBaMga kaDu kAruNyApAMga
piDi kara maMgaLAMga nuDidavaraMtaraMga
biDade hRudayAbja BRuMga biDi bIsadale tuMga
dhRuDhavuLLa naraSiMga naDesu Bakti taraMga
eDegeDisuvara BaMga taDigaDiyo vihaMga
mRuDa surESa anaMgaroDaloLagippa liMga
kuDisu sudhApiSaMga uDigeyalippa rathAMga
piDida nitya nissaMga kaDutEjA uttumAMga
baDavArigaMga saMga vijayaviTThala raMga
koDu ninnavara saMga koDu ninnavara saMga || 1 ||

maTTatALa

snAnavanu vallE maunavanu vallE
mAnavanu vallE dAnavanu vallE
dhyAnavanu vallE gAnavanu vallE
nAnA yAga purANagaLu vallE
EnEnu carisuva SrENi karmaMgaLu
nAnollenu jIyA mAnave oMduMTu
SrInAthane ninnArcane mADuvaMtha
j~jAnigaLa pAdarENu enage vamme
mANade sOkidaru anaMta janumada sA –
dhAna Palave eMdu anaMta SRutiyalli
I nuDi siddhavide siddhavide dEva
SrInivAsa vijayaviTThala iMde ni –
rvANa karuNisalu nAnadu haMbalise || 2 ||

triviDitALa

kShEtura uttamadalli janisi nirmaLa kAla
gOturanAgi sati anukUladi
pAtakaroLage yippa bahukAladali tanna
nEtura karNa SrOtura nAnA sarva
gAtura hari sEvige tiLidu oppisuva pa –
vItura manasinali yippa pAparASiya
kAturavaLidu kaMDakaDe tirugade
mAtura vyarthavenade eMdeMdige dEva
mAta pitura BrAta nAnAkula varga
maitura parivAra parama maMgaLa putra ka –
LAtura I vidhavella hariyittadeMdaridu
stOtura mADuta mudadiMda pratidina
AturadiMdali kUgi BakutiyiMda
prAturadi toreyadE suttaliddavara pu –
nItarana mADuva pUrNavAgI
gOturadhara namma vijayaviTThala aNu –
mAtura ninna biDadavara saMgavAgali || 3 ||

aTTatALa

kShaNa oMdaroLu gaNane illada tIrtha
kShaNa oMdaroLu gaNane illada yAtri
kShaNa oMdaroLu gaNane illada dAna
kShaNa oMdaroLu gaNane illada nAna
anupama vRutagaLu tanage tAne baMdu
manOharavAguvavu anudina biDadale
vanajanABane ninna neccidALina
minaguvaga caraNa konedhULi sOkalA –
vane baludhanya baludhanyanO
animitya baMdhu SrIvijayaviTThala ninna
manasige baMda dAsana mahimeyiMto || 4 ||

AditALa

halavu apEkShisi halubuvadyAtake
Pala muMdiralu naBa taLava arisidaMte
sulaBa sAdhana tanna baLiyalli iralikke
nelagANeneMdu gAtra baLalisikoMDu vyartha
aLali toLali nitya kaLeguMdi pOguvade
tiLidu I pari haMbalagoMbuvadEno
nilavara pELu ennAmala manasige iMdu
baludhAvaMti baTTaru saluvade gatimArga
caluva dEvara dEva vijayaviTThala ninna
neleballavara pAdaraja BavahAra || 5 ||

jate

ide ide karuNisu enage nirutadalli
yadupati vijayaviTThalarEya nInolidu ||

Leave a Reply

Your email address will not be published. Required fields are marked *

You might also like

error: Content is protected !!