Ashtadalakamalada suladi – Vijayadasaru

Smt.Nandini Sripad

ಶ್ರೀವಿಜಯದಾಸಾರ್ಯ ವಿರಚಿತ
ಅಷ್ಟದಳ ಕಮಲದ ಸುಳಾದಿ
(ಅಧ್ಯಾತ್ಮ ಉಪಾಸನ, ಅಷ್ಟದಳ ಕಮಲಗಳಲ್ಲಿ
ದೇವತೆಗಳ ವಿಚಾರ, ಮೂಲೇಶನು ಅಷ್ಟದಳಗಳಲ್ಲಿ
ಸಂಚರಿಸಲು ಜೀವನಿಂದ ಮಾಡಿಸುವ ವ್ಯಾಪಾರ.)
ರಾಗ: ಕಲ್ಯಾಣಿ

ಧ್ರುವತಾಳ

ಅಷ್ಟದಳದಲ್ಲೊಪ್ಪುವ ಕಮಲ ಹೃದಯಾಕಾಶದಲ್ಲಿ
ಅಷ್ಟದಿಕ್ಪಾಲಕರು ತಮ್ಮ ನಿಜದಳದೊಡನೆ
ಅಷ್ಟೈಶ್ವರ್ಯದಿಂದ ಶ್ರೀಶನ್ನ ಪದವಾಲಗ
ತುಷ್ಟರಾಗಿ ಮಾಡಿ ಸುಖಿಸುವರು
ಸ್ಪಷ್ಟನಾಗಿ ನಿರೂಪದಂತೆ ಕಾಲಕಾಲಕೆ ಬಿಡದೆ
ಶಿಷ್ಟಾಚಾರದಲ್ಲಿ ನಡೆಯುತಿದ್ದು
ವಿಷ್ಣು ಅಂಗುಷ್ಟ ಪ್ರಮಾಣ ವಿಶ್ವ ವ್ಯಾಪಕನಾಗಿ
ಅಷ್ಟ ಬಾಹು ಅಷ್ಟ ಆಯುಧ ಅತಿಸಾರ ಸೌಂದರ್ಯ
ಅಷ್ಟ ಪರಿಮಿತ ದ್ವಾತ್ರಿಂಶ ಲಕ್ಷಣ
ಸ್ಪಷ್ಟ ಕರ್ಣಿಕ ಪದ್ಮನಾಳ ಶೋಭಿಸುತಿಪ್ಪ
ಸೃಷ್ಟಿಯೊಳಗೆ ಇದು ತಿಳಿದ ಮನುಜ ಜ್ಞಾನಿ
ಇಷ್ಟಾರ್ಥ ಕೊಡುವ ಶ್ರೀವಿಜಯವಿಟ್ಠಲ
ಕೃಷ್ಣಾ ಅಷ್ಟದಳ ಮಿಕ್ಕಾದಲ್ಲಿ ಸಂಚರಿಪಾ || ೧ ||

ಮಟ್ಟತಾಳ

ಒಂದೊಂದು ದಳದಲ್ಲಿ ಒಬ್ಬೊಬ್ಬ ಪಾಲಕರು
ಪೊಂದಿಕೊಂಡಿಪ್ಪರು ಪ್ರತಿದಿನ ತೊಲಗದಲೆ
ನಂದದಲ್ಲಿ ತಮ್ಮ ಉಚಿತ ಸಾಧನಗಳು
ಅಂದದಿಂದಲಿ ಮಾಡಿ ಅತಿಹರುಷದಲಿದ್ದು
ಇಂದಿರೆ ಭೂ ಸಹಿತ ವಿಶ್ವ ಗುಣಪೂರ್ಣ
ನಿಂದಲ್ಲಿ ನಿಲ್ಲದೇ ನಾನಾವಿಧವನ್ನು
ತಂದು ಕೊಡುವನು ತವಕದಿ ಜೀವಕ್ಕೆ
ಸಿಂಧುಶಯನನಾದ ವಿಜಯವಿಟ್ಠಲ ಹೃದಯ –
ಮಂದಿರದೊಳಗಿದ್ದು ಬಹು ಚರಿತೆಯ ಮಾಳ್ಪಾ || ೨ ||

ತ್ರಿವಿಡಿತಾಳ

ಸುರಪನಲ್ಲಿಗೆ ಬರಲು ಪುಣ್ಯಮತಿಲಿ ಜೀವ –
ನಿರುವ ಪಾವಕನಲ್ಲಿ ಬರಲಾಲಸ್ಯ ನಿದ್ರ
ತೆರಳಿ ಜವನಲ್ಲಿಗೆ ಹರಿ ಸಾಗೆ ಮಹಾಕ್ರೋಧ
ಬರುವದು ಜೀವಕ್ಕೆ ಅಲ್ಲಿಂದತಿ ವೇಗ
ನಿರ‌ಋತಿಯಲ್ಲಿಗೆ ಮೆಟ್ಟಿ ಪಾಪದ ಕೃತ್ಯ
ವರುಣನ್ನ ಬಳಿಯಲ್ಲಿ ನಾನಾ ವಿನೋದ
ಮರುತನಲ್ಲಿ ಹರಿ ಬಂದು ಪೋಗಲು ಜೀವ
ಪರಮ ಗಮನಾಗಮನವಾಗುವದು
ತೆರಳಿ ಕುಬೇರನ ಮನಿಗೆ ಬರಲು ಕೊಡುವನು
ಸ್ಥಿರ ಬುದ್ಧಿಯ ತಪ್ಪದಂತೆ
ಹರನಲ್ಲಿಗೆ ಬರಲು ದ್ರವ್ಯ ಪ್ರದಾನ ಮಾಡಿಸುವ
ನಿರುತ ಈ ಪರಿಯಲ್ಲಿ ಪರಮಪುರುಷನು
ತಿರುಗುತಲಿಪ್ಪನು ಅವರವರ ಯೋಗ್ಯತ
ಇರವ ನೋಡಿ ಫಲವ ತಂದುಕೊಡುವ
ಕರುಣಾಳುಗಳ ಒಡಿಯ ವಿಜಯವಿಟ್ಠಲರೇಯಾ
ಎರಡೊಂದು ವಿಧದವರ ಪೊರೆವ ಕರ್ತನೆನಿಸಿ || ೩ ||

ಅಟ್ಟತಾಳ

ಮಧ್ಯದಲ್ಲಿ ನಿಲ್ಲೆ ವೈರಾಗ್ಯ ಮಾಡುವ
ಬುದ್ಧಿ ಪಾಲಿಸುವನು ಸರ್ವ ಕೇಸರದಲ್ಲಿ
ಪೊದ್ದಲು ಮುಕುಂದ ಜಾಗ್ರತೆ ತೋರುವ
ಸಿದ್ಧವು ಕರ್ಣಿಕೆ ಸೇರೆ ಕನಸುಗಳು
ಪದ್ಧತಿ ತಿಳಿವದು ನಾಳದಿ ಸಾರಲು ಗಾಢ –
ನಿದ್ರೆ ಆಗುವದು ಜೀವಕೆ ಕಾಲ ತಿಳಿಯದೆ
ಶುದ್ಧಾತ್ಮ ಪರಿಚ್ಛಿನ್ನ ಮೂರುತಿ ಇದೆ ಅ –
ನಾದ್ಯ ಅನಾದಿಕರ್ಮಂಗಳ ನೋಡಿ
ಶ್ರದ್ಧೆಯನ್ನು ಕೊಟ್ಟು ಮುಖ್ಯಪ್ರಾಣನ್ನ
ಪೊದ್ದಿ ಬದಕುವಂತೆ ಮಾಡುವನು
ಮುದ್ದು ಮೋಹನರಂಗ ವಿಜಯವಿಟ್ಠಲ ಕರು –
ಣಾಬ್ಧಿಯೆ ಕಾಣೊ ಭಜಕರ ವಂಶಕೆ || ೪ ||

ಆದಿತಾಳ

ಹರಿ ಅಂತರಂಗದಲ್ಲಿ ಸರಿಯದೆ ವಾಸವಾಗಿ
ಇರಳು ಹಗಲು ಇಂಥ ಚರಿಯೆ ಮಾಡಿಸುತಿರೆ
ನರಲೋಕದೊಳಗೆ ಈಶ್ವರ ನಾನೆಂದು ನುಡಿವ
ಪರಮ ದುಃಖಿಷ್ಟರ ಗರ್ವಿಕೆಗೇನೆಂಬೆ ತಾ
ನರಿಯು ಸ್ವಸ್ಥಾನದಲ್ಲಿ ನೆರದು ತನ್ನ ಬಳಗಕ್ಕೆ
ಹರಿಯೆನಗೆನ್ನಿರೆಂದು ವೊರಲಿಕೊಂಡರೆ ಅವು
ಶಿರ ದೂಗುವದಲ್ಲದೆ ಸರಿ ಸರಿ ಎಂದು
ಹಿರಿದಾಗಿ ನೋಡಿದವರು ಪರಿಹಾಸ್ಯವೆಂದನ್ನರೆ
ನರಿಯ ಮಾತುಗಳೆಲ್ಲ ನರಿಗೆ ತಿಳಿದಂತೆ
ದುರುಳರಾಡುವ ಅರ್ಥ ದುರುಳರಿಗೆ ಸರಿಬಹದು
ಹರಿಯ ನರಿಯ ಮೆಚ್ಚುವದೆ ಸರಕೆಂದರೆ ಓಡಿ
ಚರಹಾಕಿ ಪೋಗುವದು ನರಿ ಕೇಸರಿಯಾಗುವದೆ
ಉರಗನ ಕಾಣಲು ಸಾರಿರದೆ ಕೆಲಸಾರುವ
ನರನು ಈಶ್ವರನೇನೊ ಜರ ಮರಣ ಜನನದವ
ಹರಿಯೆಂದು ಒಮ್ಮೆ ಸ್ಮರಿಸೆ ದುರಿತಕೋಟಿಗಳು ಸಂ –
ಹರವೆನ್ನಿರೊ ಇವನ ಸ್ಮರಣೆ ಇಂದೇನಾಹದು
ಸುರರಾದಿಗಳ ಧೊರೆ ವಿಜಯವಿಟ್ಠಲನ್ನ
ಚರಣವ ನೋಡಿದವ ಪರಮ ಜ್ಞಾನಿ ನಿತ್ಯ || ೫ ||

ಜತೆ

ಉದಯಕಾಲದಲೆದ್ದು ವಿಜಯವಿಟ್ಠಲನ್ನ
ಅದುಭೂತ ಕ್ರೀಡೆಯ ನೆನಿಸಿ ಮುಕುತಿಯ ಬಯಸಿ ||


SrIvijayadAsArya viracita
aShTadaLa kamalada suLAdi
(adhyAtma upAsana, aShTadaLa kamalagaLalli
dEvategaLa vicAra, mUlESanu aShTadaLagaLalli
saMcarisalu jIvaniMda mADisuva vyApAra.)
rAga: kalyANi

dhruvatALa

aShTadaLadalloppuva kamala hRudayAkASadalli
aShTadikpAlakaru tamma nijadaLadoDane
aShTaiSvaryadiMda SrISanna padavAlaga
tuShTarAgi mADi suKisuvaru
spaShTanAgi nirUpadaMte kAlakAlake biDade
SiShTAcAradalli naDeyutiddu
viShNu aMguShTa pramANa viSva vyApakanAgi
aShTa bAhu aShTa Ayudha atisAra sauMdarya
aShTa parimita dvAtriMSa lakShaNa
spaShTa karNika padmanALa SOBisutippa
sRuShTiyoLage idu tiLida manuja j~jAni
iShTArtha koDuva SrIvijayaviTThala
kRuShNA aShTadaLa mikkAdalli saMcaripA || 1 ||

maTTatALa

oMdoMdu daLadalli obbobba pAlakaru
poMdikoMDipparu pratidina tolagadale
naMdadalli tamma ucita sAdhanagaLu
aMdadiMdali mADi atiharuShadaliddu
iMdire BU sahita viSva guNapUrNa
niMdalli nilladE nAnAvidhavannu
taMdu koDuvanu tavakadi jIvakke
siMdhuSayananAda vijayaviTThala hRudaya –
maMdiradoLagiddu bahu cariteya mALpA || 2 ||

triviDitALa

surapanallige baralu puNyamatili jIva –
niruva pAvakanalli baralAlasya nidra
teraLi javanallige hari sAge mahAkrOdha
baruvadu jIvakke alliMdati vEga
nira^^Rutiyallige meTTi pApada kRutya
varuNanna baLiyalli nAnA vinOda
marutanalli hari baMdu pOgalu jIva
parama gamanAgamanavAguvadu
teraLi kubErana manige baralu koDuvanu
sthira buddhiya tappadaMte
haranallige baralu dravya pradAna mADisuva
niruta I pariyalli paramapuruShanu
tirugutalippanu avaravara yOgyata
irava nODi Palava taMdukoDuva
karuNALugaLa oDiya vijayaviTThalarEyA
eraDoMdu vidhadavara poreva kartanenisi || 3 ||

aTTatALa

madhyadalli nille vairAgya mADuva
buddhi pAlisuvanu sarva kEsaradalli
poddalu mukuMda jAgrate tOruva
siddhavu karNike sEre kanasugaLu
paddhati tiLivadu nALadi sAralu gADha –
nidre Aguvadu jIvake kAla tiLiyade
SuddhAtma paricCinna mUruti ide a –
nAdya anAdikarmaMgaLa nODi
Sraddheyannu koTTu muKyaprANanna
poddi badakuvaMte mADuvanu
muddu mOhanaraMga vijayaviTThala karu –
NAbdhiye kANo Bajakara vaMSake || 4 ||

AditALa

hari aMtaraMgadalli sariyade vAsavAgi
iraLu hagalu iMtha cariye mADisutire
naralOkadoLage ISvara nAneMdu nuDiva
parama duHKiShTara garvikegEneMbe tA
nariyu svasthAnadalli neradu tanna baLagakke
hariyenagennireMdu voralikoMDare avu
Sira dUguvadallade sari sari eMdu
hiridAgi nODidavaru parihAsyaveMdannare
nariya mAtugaLella narige tiLidaMte
duruLarADuva artha duruLarige saribahadu
hariya nariya meccuvade sarakeMdare ODi
carahAki pOguvadu nari kEsariyAguvade
uragana kANalu sArirade kelasAruva
naranu ISvaranEno jara maraNa jananadava
hariyeMdu omme smarise duritakOTigaLu saM –
haravenniro ivana smaraNe iMdEnAhadu
surarAdigaLa dhore vijayaviTThalanna
caraNava nODidava parama j~jAni nitya || 5 ||

jate

udayakAladaleddu vijayaviTThalanna
aduBUta krIDeya nenisi mukutiya bayasi ||

Leave a Reply

Your email address will not be published. Required fields are marked *

You might also like

error: Content is protected !!