Composer : Shri Lakumeesha
ಶ್ರೀ ಗುರು ಸುಮತೀಂದ್ರ ಯೋಗಿಗಳಿಗಭಿನಮಿಪೆ
ಭಾಗವತ ಜನ ಸಂಗ ಯೋಗ ಕರುಣಿಸಲೀ [ಪ]
ನೀಗಿ ದುರ್ಜನ ಸಂಗ ಭಾಗವತ ಶ್ರವಣದಲಿ
ಭೋಗದಾಶೆಯ ಭವದ ರೋಗವಾ ಬಿಡಿಸೆಂದೂ |ಅ.ಪ|
ಮಧ್ವರಾಯರ ಪ್ರೀಯ ಶ್ರೀರಾಘವೇಂದ್ರರಡಿಯ
ಪದ್ಮ ಮಧು ಕರರಾದ ಮುದ್ದು ವೆಂಕಟ ಕೃಷ್ಣ
ಇದ್ದು ಇವರಲಿ ಆರ್ಯ ಅಧ್ಯಯನ ಮಾಡುತ್ತ ಶುದ್ಧ
ಪಂಡಿತರೆನಿಸಿ ಮುದ್ದಾಗಿ ಮೆರೆದಂಥ ||೧||
ಸೂರೀಂದ್ರತೀರಥರು ಮೇರು ಕರುಣವ ಮಾಡಿ
ಏರಿಸೇ ಪಟ್ಟದಲಿ ವೇದಾಂತ ರಾಜ್ಯ ಭಾರವನು ತಾ
ವಹಿಸಿ ಮೂಲ ರಾಮನ ಪದವ
ಆರಾಧಿಸೀ ಜಗದಿ ರಾರಾಜಿಸೀದಂಥ ||೨||
ಮಧುರೆ ರಾಣಿ ಅಂದು ಮಂಗಮ್ಮ ಮತತ್ರಯದ
ಸದಮಲ ಸಮ್ಮೇಳ ವಿಧಿಯಿಂದ ರಚಿಸೇ |
ಒದಗೆ ಮಠ ತ್ರಯಮೌನಿಗಳು ಅಧಮ
ದುರ್ಮತದವರ ಚದುರ ವಾಕ್ಯಾರ್ಥದಲಿ
ಇವರೆ ಗೆದ್ದರು ನೋಡಿ ||೩||
ಸತ್ಯಪೂರ್ಣರಿವರ ಸತ್ವ ಪಾಂಡಿತ್ಯಕ್ಕೆ
ನಿತ್ಯ ಆರೋಹಿಸಲು ಚಿತ್ರಾಸನೀಯೇ |
ರತ್ನಮಯ ವೈಕುಂಠ ವಾಸುದೇವನ ಮೂರ್ತಿ
ಇತ್ತು ಕಲ್ಪವೃಕ್ಷ ರಾಣಿ ಮನ್ನೀಸಿದಳು ||೪||
ಕ್ರೂರ ಮಾಂತ್ರಿಕನೊಬ್ಬ ಶ್ರೀರಂಗನಾಥ ಕಳೆಯೆ
ಚೋರತನದಲಿ ಇವನು ಆಕರ್ಷ ಮಾಡುತಿರೇ |
ಸಾರಿ ಅರ್ಚಕರಿದನ ಧೀರರಿವರಿಗೆ ಪೇಳೆ ಸೂರಿ
ಮಂತ್ರವ ಜಪಿಸಿ ಕಿಡಗೇಡಿ ನೋಡಿಸಿದಾ ||೫||
ನಿಲಿಸಿ ಮಂಗೇಶನನು ರಂಗನಾಥನ ಮುಂದೆ
ನಲಿದು ಭಾವ್ರತ್ನಕೋಶ ಅಧಿಕರ್ಣ ರತ್ನಮಾಲೆ |
ಹಲವಾರು ಗ್ರಂಥಗಳ ವ್ಯಾಖ್ಯಾನ ರಚಿಸುತಲಿ
ಇಳೆಯ ಸಜ್ಜನಕಿತ್ತು ಉಪಕಾರ ಗೈದಂಥ ||೬||
ಸುಖ ಮುನಿಯ ಶಾಸ್ತ್ರದ ಸುಖ ಜ್ಞಾನ ಕರುಣಿಸುತ
ವಿಖನಸಾರ್ಚಿತ ಮೂಲ ಲಕುಮೀಶ ರಂಗನ್ನ
ಸುಖದಿ ನೆನೆದು ಆಶ್ವಿಜ ವದ್ಯ ದ್ವಾದಶಿಯಂದು
ಸಕಲ ಮಂಗಳ ಕೊಡುತ ಶ್ರೀರಂಗದಲಿ ಮೆರೆವಾ ||೭||
SrI guru sumatIMdra yOgigaLigaBinamipe
BAgavata jana saMga yOga karuNisalI [pa]
nIgi durjana saMga BAgavata SravaNadali
BOgadASeya Bavada rOgavA biDiseMdU |a.pa|
madhvarAyara prIya SrIrAGavEMdraraDiya
padma madhu kararAda muddu veMkaTa kRuShNa
iddu ivarali Arya adhyayana mADutta Suddha
paMDitarenisi muddAgi meredaMtha ||1||
sUrIMdratIratharu mEru karuNava mADi
ErisE paTTadali vEdAMta rAjya BAravanu tA
vahisi mUla rAmana padava
ArAdhisI jagadi rArAjisIdaMtha ||2||
madhure rANi aMdu maMgamma matatrayada
sadamala sammELa vidhiyiMda racisE |
odage maTha trayamaunigaLu adhama
durmatadavara cadura vAkyArthadali
ivare geddaru nODi ||3||
satyapUrNarivara satva pAMDityakke
nitya ArOhisalu citrAsanIyE |
ratnamaya vaikuMTha vAsudEvana mUrti
ittu kalpavRukSha rANi mannIsidaLu ||4||
krUra mAMtrikanobba SrIraMganAtha kaLeye
cOratanadali ivanu AkarSha mADutirE |
sAri arcakaridana dhIrarivarige pELe sUri
maMtrava japisi kiDagEDi nODisidA ||5||
nilisi maMgESananu raMganAthana muMde
nalidu BAvratnakOSa adhikarNa ratnamAle |
halavAru graMthagaLa vyAKyAna racisutali
iLeya sajjanakittu upakAra gaidaMtha ||6||
suKa muniya SAstrada suKa j~jAna karuNisuta
viKanasArcita mUla lakumISa raMganna
suKadi nenedu ASvija vadya dvAdaSiyaMdu
sakala maMgaLa koDuta SrIraMgadali merevA ||7||
Leave a Reply