Composer : Shri Abhinavapranesha vittala
ವಂದನೆ ಮಾಡಿರೈ ವಸುಧೇಂದ್ರರ ಪಾಡಿರೈ [ಪ]
ಇಂದಿರೆ ಪತಿ-ಪದ ಮಂದಜ ಮಧುಕರ
ಗಂಧ ವಾಹನ ಮತ ಮಂದದಿ ಚಂದಿರ [ಅ.ಪ]
ಗುರು ವಾದೀಂದ್ರರ ಕರಕಮಲೋಭನನೀತ | ವಿಧಿಕುಲಜಾತ
ಧರಣಿಜ ರಮಣನ ಚರಣ ಸುಮರಾರ್ಚಕನೀತ | ಶಾಸ್ತ್ರಕಲಾಪ,
ವರದೇಂದ್ರಾರ್ಯರ ಹೃದಯ ಸರೋರುಹ ನಿಲಯ | ರವಿಗಣಗೇಯ
ವರಹಜ ಕೆಂಡನ ಗಿರ ಬೇಟದೊಳಗೆ ಯಿರುವ |
ಶರಣರ ಪೊರೆವ [೧]
ಮಧ್ವ ಮತಾಗಮ ಪದ್ಮಗಳಿಗೆ ಮಾರ್ತಾಂಡ | ಧೃತ ಕರದಂಡ,
ಅದ್ವೈತಕಾಟವಿ ಕೃದ್ವಾನಲ ಸಮತೇಜ | ನರ ಸುತಭೋಜ
ಸದ್ವಿದ್ಯಾಂಬುಧಿಯೊಳು ವಿಹರಿಪ ಪಾರೀಣ | ತೀರ್ಥ ಪ್ರವೀಣ
ಸದ್ವೈಷ್ಣವತತಿ ಕೈರವವನ ಕರಾಬ್ಜ |
ವಂದ್ಯ ಪದಾಬ್ಜ [೨]
ಆನತ ಭಕ್ತ ಜನಾಮಯ ಧಾರಿತ ಪತಂಗ | ಭರ್ಮ ಸಮಾಂಗ
ದಾನಜ ದಿನಕರ ತನಯನ ಮರೆಸಿದ ದಾತ | ಜಗದೊಳು ಖ್ಯಾತ,
ಆನಕ ದುಂದುಭಿ ಸೂನು ಕಥಾಮೃತ ಸಾರಗರೆದ ಉದಾರ-
ಮಾನದ ಅಭಿನವಪ್ರಾಣೇಶವಿಠಲನ ದಾಸ
ಭೇಷ ಪ್ರಕಾಶ [೩]
vaMdane mADirai vasudhEMdrara pADirai [pa]
iMdire pati-pada maMdaja madhukara
gaMdha vAhana mata maMdadi caMdira [a.pa]
guru vAdIMdrara karakamalOBananIta | vidhikulajAta
dharaNija ramaNana caraNa sumarArcakanIta | SAstrakalApa,
varadEMdrAryara hRudaya sarOruha nilaya | ravigaNagEya
varahaja keMDana gira bETadoLage yiruva |
SaraNara poreva [1]
madhva matAgama padmagaLige mArtAMDa | dhRuta karadaMDa,
advaitakATavi kRudvAnala samatEja | nara sutaBOja
sadvidyAMbudhiyoLu viharipa pArINa | tIrtha pravINa
sadvaiShNavatati kairavavana karAbja |
vaMdya padAbja [2]
Anata Bakta janAmaya dhArita pataMga | Barma samAMga
dAnaja dinakara tanayana maresida dAta | jagadoLu KyAta,
Anaka duMduBi sUnu kathAmRuta sAragareda udAra-
mAnada aBinavaprANESaviThalana dAsa
BESha prakASa [3]
Leave a Reply