Composer : Shri Vijayadasaru
ನಮೋ ನಮೋ ನಾರಾಯಣ ನಮೋ ಶ್ರುತಿ ನಾರಾಯಣ
ನಮೋ ಬಾದರಾಯಣ ನರನ ಪ್ರಾಣ ||ಪ||
ಶಿವನ ಮೋದದಲಿ ಪಡೆದೆ
ಶಿವರೂಪದಲಿ ನಿಂದೆ
ಶಿವನೊಳಗೆ ಏರಿದೆ ಶಿವನಿಗೊಲಿದೆ
ಶಿವಗೆ ನೀ ಮಗನಾದೆ ಶಿವ ತಾತನೆನೆಸಿದೆ
ಶಿವನ ಮಗನಾ ಪಡೆದೆ ಶಿವನ ಕಾಯ್ದೆ (೧)
ಶಿವಗೆ ಸಹಾಯಕನಾದೆ ಶಿವನ ಕಂಗಡಿಸಿದೆ
ಶಿವನ ಧನುವನು ಮುರಿದೆ ಶಿವನೊಲಿಸಿದೆ
ಶಿವನ ಜಡ ಮಾಡಿದೆ
ಶಿವನ ಒಡನೆ ಬಂದೆ ಶಿವಮುನಿಗೆ
ಉಣಿಸಿದೇ ಕೇಶವನೆನಿಸಿದೇ (೨)
ಶಿವನ ಜಡೆಯೊಳಗಿದ್ದ
ಶಿವಗಂಗೆಯ ಪೆತ್ತೆ
ಶಿವನ ಕೊಡಲಿ ಕಾದಿದವನ ಭಾವ
ಶಿವ ಭಕ್ತನ್ನ ನಿನ್ನವನಿಂದ ಕೊಲ್ಲಿಸಿದೆ
ಶಿವನ ಶೈಲವನೆತ್ತಿದವನ ವೈರಿ (೩)
ಶಿವ ನುಂಗಿದದ ನುಂಗಿದವನ ಒಡನಾಡುವ
ಶಿವ ಪರಾಶಿವ ನಿನ್ನ ಶಿವ ಬಲ್ಲನೇ
ಶಿವ ಕೊಳದವರ ಉದ್ಭವ ಮಾಡುವೆನೆಂದು
ಯವೆ ಇಡುವನಿತರೊಳಗೆ ಧವಳ ಹಾಸಾ (೪)
ಶಿವನ ಮೇಲಿದ್ದ ಸಹಭವೆ ರಮಣ ಸರ್ವದಾ
ಶಿವನೊಳಗಿಳಿದ ಶಿಷ್ಯನಿವ ಹರಾತೀ
ಶಿವ ಭೂಷಣ ತಲ್ಪ ಶಿವ ಸಮಾನಿಕ ರೂಢ
ಶಿವನ ಮನೆ ತೊಲಗಿಸುವ ಶಿವ ಬಾಂಧವಾ (೫)
ಶಿವನ ಧೊರಿಯೆ ಜ್ಞಾನ ಶಿವ ಹಚ್ಚುವದೆ ಕೊಡು
ಶಿವಮಣಿ ಎನಿಸುವ ಸ್ತವ ಪ್ರಿಯನೇ
ಶಿವನು ವಾಹನ ವೈರ ಶಿರವ ತರಿಸಿದೆ ದೇವ
ಶಿವ ಪ್ರತಿಷ್ಠಿಸಿದೆ ಶಿವಗೆ ಕಾಣಿಸದಿಪ್ಪೆ (೬)
ಶಿವನ ಸೋಲಿಸಿದವನ ಜವಗೆಡಿಸಿದೆ
ಶಿವನು ಕುದರಿಯ ಹೆರವ
ಅವನು ಕಾಯಿದ ಗೋವ
ಶಿವನವತಾರ ಶಸ್ತ್ರವನು ಹಳಿದೆ (೭)
ಶಿವನಧರನಾಗಿ ದಾನವನು ಕೊಂದ ಮಹಿಮಾ
ಶಿವಋಷಿ ಪೇಳಿದ ಯುವತಿ ರಮಣಾ
ಶಿವನ ವೀರ್ಯವ ಧರಿಸಿದವನ ಮುಖದಲಿ ಉಂಬ
ಅವರ ಬೆಂಬಲವೇ ಯಾದವ ಕುಲೇಶಾ (೮)
ಶಿವಗೆ ತ್ವಂಚ ಬಾಹುಯೆಂದು ಪೇಳಿ ಮೋಹ
ದಿವಿಜಾರಿಗಳ ತಮಸಿಗೆ ಹಾಕುವೆ
ಶಿವಮೂರುತಿ ನಮ್ಮ ವಿಜಯವಿಠ್ಠಲರೇಯ
ಶಿವನಾಳು ಮಾಡಿ ಆಳುವ ದೈವವೇ (೯)
namO namO nArAyaNa namO Sruti nArAyaNa
namO bAdarAyaNa narana prANa ||pa||
Sivana mOdadali paDede
SivarUpadali niMde
SivanoLage Eride Sivanigolide
Sivage nI maganAde Siva tAtaneneside
Sivana maganA paDede Sivana kAyde (1)
Sivage sahAyakanAde Sivana kaMgaDiside
Sivana dhanuvanu muride Sivanoliside
Sivana jaDa mADide
Sivana oDane baMde Sivamunige
uNisidE kESavanenisidE (2)
Sivana jaDeyoLagidda
SivagaMgeya pette
Sivana koDali kAdidavana BAva
Siva Baktanna ninnavaniMda kolliside
Sivana Sailavanettidavana vairi (3)
Siva nuMgidada nuMgidavana oDanADuva
Siva parASiva ninna Siva ballanE
Siva koLadavara udBava mADuveneMdu
yave iDuvanitaroLage dhavaLa hAsA (4)
Sivana mElidda sahaBave ramaNa sarvadA
SivanoLagiLida SiShyaniva harAtI
Siva BUShaNa talpa Siva samAnika rUDha
Sivana mane tolagisuva Siva bAMdhavA (5)
Sivana dhoriye j~jAna Siva haccuvade koDu
SivamaNi enisuva stava priyanE
Sivanu vAhana vaira Sirava tariside dEva
Siva pratiShThiside Sivage kANisadippe (6)
Sivana sOlisidavana javageDiside
Sivanu kudariya herava
avanu kAyida gOva
SivanavatAra Sastravanu haLide (7)
SivanadharanAgi dAnavanu koMda mahimA
SivaRuShi pELida yuvati ramaNA
Sivana vIryava dharisidavana muKadali uMba
avara beMbalavE yAdava kulESA (8)
Sivage tvaMca bAhuyeMdu pELi mOha
divijArigaLa tamasige hAkuve
SivamUruti namma vijayaviThThalarEya
SivanALu mADi ALuva daivavE (9)
Leave a Reply