Composer : Shri Vijayadasaru
ಬಲ್ಲವಾಗಿಲ್ಲೆ ಪರಮಾತ್ಮಾ
ಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ಇರುತಿಪ್ಪ [ಪ]
ನೋಡಿದವೆಲ್ಲ ಶ್ರೀಹರಿಯ ಪ್ರತಿಮೆಗಳೆಂದು
ಆಡಿದವೆಲ್ಲ ಹರಿಯ ರೂಪವೆಂದು
ಮಾಡಿದದ್ದೆಲ್ಲ ಶ್ರೀಹರಿಯ ಸೇವೆ ಎಂದು
ಕೂಡಿದದ್ದೆಲ್ಲ ಹರಿ ಭಕ್ತರೆಂದು [೧]
ತಾಪತ್ರಯಗಳೆಲ್ಲ ಮಹಾ ತಪಸು ಎಂದು
ರೂಪಗಳೆಲ್ಲ ಹರಿಕಾಂತಿ ಎಂದು
ಪೋಪದು ಬರುವುದೆಲ್ಲ
ವ್ಯಾಪಾರ ಹರಿ ಅಧೀನವೆಂದು [೨]
ತಾರತಮ್ಯಕಿದು ಪರಲೋಕದಿ ಸರಿಯಿಲ್ಲ
ಸಿರಿ ಹರಿಯದೊರೆ ತನಗೆ ಎಂದೆನುತಾ
ಇರುಳು ಹಗಲು ಏಕ ಭಕ್ತಿಯಿಂದಲಿ ನಿತ್ಯ ಕಾಲಕಾಲಕೆ
ಹರಿಯ ವ್ಯಾಪಾರ ಸ್ಮರಿಸುತ್ತ ಓಡ್ಯಾಡುತ [೩]
ಒಲಿಸಿ ಒಲಿಸಿ ಒಲಿದು ಒಲಿದು
ಖಳರೊಳಗಾಡದಲೆ ವಿಜಯವಿಠ್ಠಲ
ವೆಂಕಟ ಶೈಲ ನಿವಾಸಾ
ಸರ್ವೋತ್ತಮನೆ ಗತಿ ಎಂದು [೪]
ballavAgille paramAtmA
ellelli nODidaru allalli irutippa [pa]
nODidavella SrIhariya pratimegaLeMdu
ADidavella hariya rUpaveMdu
mADidaddella SrIhariya sEve eMdu
kUDidaddella hari BaktareMdu [1]
tApatrayagaLella mahA tapasu eMdu
rUpagaLella harikAMti eMdu
pOpadu baruvudella
vyApAra hari adhInaveMdu [2]
tAratamyakidu paralOkadi sariyilla
siri hariyadore tanage eMdenutA
iruLu hagalu Eka BaktiyiMdali nitya kAlakAlake
hariya vyApAra smarisutta ODyADuta [3]
olisi olisi olidu olidu
KaLaroLagADadale vijayaviThThala
veMkaTa Saila nivAsA
sarvOttamane gati eMdu [4]
Leave a Reply