-
Ballavagille paramatma
Composer : Shri Vijayadasaru ಬಲ್ಲವಾಗಿಲ್ಲೆ ಪರಮಾತ್ಮಾಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ಇರುತಿಪ್ಪ [ಪ] ನೋಡಿದವೆಲ್ಲ ಶ್ರೀಹರಿಯ ಪ್ರತಿಮೆಗಳೆಂದುಆಡಿದವೆಲ್ಲ ಹರಿಯ ರೂಪವೆಂದುಮಾಡಿದದ್ದೆಲ್ಲ ಶ್ರೀಹರಿಯ ಸೇವೆ ಎಂದುಕೂಡಿದದ್ದೆಲ್ಲ ಹರಿ ಭಕ್ತರೆಂದು [೧] ತಾಪತ್ರಯಗಳೆಲ್ಲ ಮಹಾ ತಪಸು ಎಂದುರೂಪಗಳೆಲ್ಲ ಹರಿಕಾಂತಿ ಎಂದುಪೋಪದು ಬರುವುದೆಲ್ಲವ್ಯಾಪಾರ ಹರಿ ಅಧೀನವೆಂದು [೨] ತಾರತಮ್ಯಕಿದು ಪರಲೋಕದಿ ಸರಿಯಿಲ್ಲಸಿರಿ ಹರಿಯದೊರೆ ತನಗೆ ಎಂದೆನುತಾಇರುಳು ಹಗಲು ಏಕ ಭಕ್ತಿಯಿಂದಲಿ ನಿತ್ಯ ಕಾಲಕಾಲಕೆಹರಿಯ ವ್ಯಾಪಾರ ಸ್ಮರಿಸುತ್ತ ಓಡ್ಯಾಡುತ [೩] ಒಲಿಸಿ ಒಲಿಸಿ ಒಲಿದು ಒಲಿದುಖಳರೊಳಗಾಡದಲೆ ವಿಜಯವಿಠ್ಠಲವೆಂಕಟ ಶೈಲ ನಿವಾಸಾಸರ್ವೋತ್ತಮನೆ ಗತಿ ಎಂದು…
