Composer : Shri Vijayadasaru
ನುತಿಸಿ ಬೇಡುವೆ ವರವ ಕರವ ಮುಗಿದು
ಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ||ಪ||
ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣ
ಬದ ರಮಂಗಳಗಾತ್ರ ಬಲು ಸುಲಭ
ಬುದ್ಧನಾಗಿ ಶಿಷ್ಯರ್ಗೆ ಸುಧೆಯ ಪೇಳುವ ಮೌನಿ
ಎದಿರಿಲ್ಲ ನಿಮಗೆಲ್ಲಿ ಗುರುವೆ ಸುರತರುವೆ [೧]
ಅಂದವಾದ ಕಾವ್ಯ ಸಾಮಥ್ರ್ಯಧೀರುವೆ
ಮಂದಹಾಸದಿ ನೋಳ್ಪ ಭಕುತ ಜನರ
ಒಂದೊಂದು ಪದಾರ್ಥ ಪಿಡಿವ ಗಂಟಲೆ ರಾಹು
ನಂದತೀರ್ಥರ ಮತಕೆ ಕೇತುಸ್ಥಾನಿಯ ನಿತ್ಯ [೨]
ವಾದಿಗಳ ಎದೆಯ ಶೂಲ ಸತ್ಯಪ್ರಿಯ ಕರಜಾತ
ಸಾಧು ಸಜ್ಜನಗೇಯ ಸತ್ಯಬೋಧ
ಮೋದಿ ಹಯವದನ ರಾಮ ಶ್ರೀ ವಿಜಯವಿಠ್ಠಲ
ಅನಾದಿದೈವವೆಂದು ಎಣಿಸುವ ಜಪಶೀಲ [೩]
nutisi bEDuve varava karava mugidu
satata lakumipatiya Bakuti oMdE irali ||pa||
madanaSara timirArka sujanavArdhige pUrNa
bada ramaMgaLagAtra balu sulaBa
buddhanAgi SiShyarge sudheya pELuva mauni
edirilla nimagelli guruve surataruve [1]
aMdavAda kAvya sAmathryadhIruve
maMdahAsadi nOLpa Bakuta janara
oMdoMdu padArtha piDiva gaMTale rAhu
naMdatIrthara matake kEtusthAniya nitya [2]
vAdigaLa edeya SUla satyapriya karajAta
sAdhu sajjanagEya satyabOdha
mOdi hayavadana rAma shree vijayaviThThala
anAdidaivaveMdu eNisuva japaSIla [3]
Leave a Reply