Composer : Shri Shyamasundara dasaru
ಗುರುಜಗನ್ನಾಥಾರ್ಯ ಕರುಣಿಸಯ್ಯ
ಮೊರೆ ಹೊಕ್ಕೆ ತ್ವತ್ ಪದಕೆ ಮರೆಯದಲೆ ಪಿಡಿ ಕೈಯ್ಯ |ಪ|
ಪ್ರಹ್ಲಾದನನುಗ್ರಹವು ಎಲ್ಲ ಕಾಲದಿ ತಾನೆ
ನಿನ್ನಲ್ಲಿ ಸಂಪೂರ್ಣವಾಗಿರುವುದಯ್ಯ, ಎಂಬಾ
ಸೊಲ್ಲು ಲಾಲಿಸಿ ನಿನ್ನ ಪಲ್ಲವಾಂಘ್ರಿಗೆ ನಮಿಪೆ,
ಬಲ್ಲಿದನೆ ಹರಿ ಧ್ಯಾನದಲ್ಲಿ ನಿಲ್ಲಿಸು ಮನವ [೧]
ಜನಕಾಗ್ರ-ಜಾಚಾರ್ಯನೆನಿಸಿ ಜಪಿಸುತ ಮಂತ್ರ
ಘನ ಮಂತ್ರ ನಿಲಯ ಶ್ರೀ ಗುರು ರಾಯರಾ,
ಗುಣಸ್ತವನ ವಿರಚಿಸುತ ಪಠಿಸುತ್ತ ಪ್ರಣತರಿಗೆ
ಮನದಿಚ್ಛೆ ಪಡೆವದಕ್ಕೆ ಅನುಗ್ರಹಿಸಿದ ಜ್ಞಾನಿ [೨]
ಶ್ರೀ ಶಾಮಸುಂದರನ ದಾಸಾರ್ಯರುಪದೇಶ
ಬೇಸರದೆ ಕೈಕೊಂಡು ಉಪಾಸನೆಯನು,
ಲೇಸಾಗಿ ಬಿಡದೆ ಪ್ರತಿವಾಸರದಿ ಗೈದಂಥ
ಭೂಸುರಾಗ್ರಣಿಯಾದ ಕೋಶಿಗಿ ನಿಲಯ [೩]
gurujagannAthArya karuNisayya
more hokke tvat padake mareyadale piDi kaiyya |pa|
prahlAdananugrahavu ella kAladi tAne
ninnalli saMpUrNavAgiruvudayya, eMbA
sollu lAlisi ninna pallavAMGrige namipe,
ballidane hari dhyAnadalli nillisu manava [1]
janakAgra-jAchAryanenisi japisuta maMtra
ghana maMtra nilaya SrI guru rAyarA,
guNastavana viracisuta paThisutta praNatarige
manadicCe paDevadakke anugrahisida j~jAni [2]
SrI SAmasuMdarana dAsAryarupadESa
bEsarade kaikoMDu upAsaneyanu,
lEsAgi biDade prativAsaradi gaidaMtha
BUsurAgraNiyAda kOshigi nilaya [3]
Leave a Reply