-
Gurujagannatharya karunisayya
Composer : Shri Shyamasundara dasaru ಗುರುಜಗನ್ನಾಥಾರ್ಯ ಕರುಣಿಸಯ್ಯಮೊರೆ ಹೊಕ್ಕೆ ತ್ವತ್ ಪದಕೆ ಮರೆಯದಲೆ ಪಿಡಿ ಕೈಯ್ಯ |ಪ| ಪ್ರಹ್ಲಾದನನುಗ್ರಹವು ಎಲ್ಲ ಕಾಲದಿ ತಾನೆನಿನ್ನಲ್ಲಿ ಸಂಪೂರ್ಣವಾಗಿರುವುದಯ್ಯ, ಎಂಬಾಸೊಲ್ಲು ಲಾಲಿಸಿ ನಿನ್ನ ಪಲ್ಲವಾಂಘ್ರಿಗೆ ನಮಿಪೆ,ಬಲ್ಲಿದನೆ ಹರಿ ಧ್ಯಾನದಲ್ಲಿ ನಿಲ್ಲಿಸು ಮನವ [೧] ಜನಕಾಗ್ರ-ಜಾಚಾರ್ಯನೆನಿಸಿ ಜಪಿಸುತ ಮಂತ್ರಘನ ಮಂತ್ರ ನಿಲಯ ಶ್ರೀ ಗುರು ರಾಯರಾ,ಗುಣಸ್ತವನ ವಿರಚಿಸುತ ಪಠಿಸುತ್ತ ಪ್ರಣತರಿಗೆಮನದಿಚ್ಛೆ ಪಡೆವದಕ್ಕೆ ಅನುಗ್ರಹಿಸಿದ ಜ್ಞಾನಿ [೨] ಶ್ರೀ ಶಾಮಸುಂದರನ ದಾಸಾರ್ಯರುಪದೇಶಬೇಸರದೆ ಕೈಕೊಂಡು ಉಪಾಸನೆಯನು,ಲೇಸಾಗಿ ಬಿಡದೆ ಪ್ರತಿವಾಸರದಿ ಗೈದಂಥಭೂಸುರಾಗ್ರಣಿಯಾದ ಕೋಶಿಗಿ ನಿಲಯ [೩]…
