Composer : Shri Karpara narahari dasaru
ಶ್ರೀಮದ್ರಾಮ ಪದಾರ್ಚಕ ನಿರ್ಜಿತ
ಕಾಮ ಸುಗುಣ ಧಾಮ ನಮೋ |
ಮಾಮವನುತ ಜನಕಾಮಿತ ಫಲದ
ಜಿತಾಮಿತ್ರಾಖ್ಯ ಮುನೀಂದ್ರ ನಮೋ || ೧ ||
ನಂದತೀರ್ಥ ವಂಶೋದ್ಭವ ಗುರು
ವಿಬುಧೇಂದ್ರ ಕುಮಾರ ಯತೀಂದ್ರ ನಮೋ |
ಇಂದು ಮೌಳಿ ಭೂ ವೃಂದಾರಕ
ಭವ ಬಂಧ ವಿಮೋಚಕ ನಮೋ ನಮೋ || ೨ ||
ಭೂತನಾಥ ಪುರುಹೂತ ಮುಖಸುರ
ವ್ರಾತ ವಿನುತ ತೇ ನಮೋ ನಮೋ |
ವಾತ ಮತಾಂಬುಧಿ ಶೀತ ಕಿರಣ
ಪ್ರಖ್ಯಾತ ಜಿತಾಹಿತ ಪಾಲಯ ಮಾಂ || ೩ ||
ಶರಣಾಗತ ಜನ ದುರಿತ ತಿಮಿರ
ಭಾಸ್ಕರ ಕರುಣಾಕರ ನಮೋ ನಮೋ |
ಗುರುವರೇಣ್ಯ ಶಿವಪುರ ಗ್ರಾಮಸ್ಥಿತ
ವರ ದ್ವಿಜ ಕುಲ ಸಂಜಾತ ನಮೋ || ೪ ||
ಭಕ್ತ ಜನಾವನತಪ್ತಂ ಕೃಷ್ಣಾ
ಪೂರ್ಣ ಪ್ರವಾಹಂತಸ್ಥ ನಮೋ |
ಸಪ್ತ ವಾಸರ ಮುಷಿತ್ವಾಭೋ
ಪುನರುತ್ಥಿತ ಪರಮ ಸಮರ್ಥ ನಮೋ || ೫ ||
ಆನಮಿಪೆ ಕೃಷ್ಣವೇಣೀ ತಟಸ್ಥಿತ
ಗೋನದ ತರು ಸುಸ್ಥಾನಗತ |
ಆನತಜನ ಸುರಧೇನು ಸಮಾನ
ಮಹಾನುಭಾವ ತೇ ನಮೋ ನಮೋ || ೬ ||
ಶ್ರೀಮತ್ಕಾರ್ಪರ ಧಾಮ ನರಹರೇ
ಪ್ರೇಮಪಾತ್ರ ಸುಚರಿತ್ರ ನಮೋ |
ಕಾಮಾದಿ ರಿಪುಸ್ತೋಮ ಭಯಾಪಹ
ಮಾಮುದ್ಧರ ತೇ ನಮೋ ನಮೋ || ೭ ||
SrImadrAma padArcaka nirjita
kAma suguNa dhAma namO |
mAmavanuta janakAmita Palada
jitAmitrAKya munIMdra namO || 1 ||
naMdatIrtha vaMSOdBava guru
vibudhEMdra kumAra yatIMdra namO |
iMdu mauLi BU vRuMdAraka
Bava baMdha vimOcaka namO namO || 2 ||
BUtanAtha puruhUta muKasura
vrAta vinuta tE namO namO |
vAta matAMbudhi SIta kiraNa
praKyAta jitAhita pAlaya mAM || 3 ||
SaraNAgata jana durita timira
BAskara karuNAkara namO namO |
guruvarENya Sivapura grAmasthita
vara dvija kula saMjAta namO || 4 ||
Bakta janAvanataptaM kRuShNA
pUrNa pravAhaMtastha namO |
sapta vAsara muShitvABO
punarutthita parama samartha namO || 5 ||
Anamipe kRuShNavENI taTasthita
gOnada taru susthAnagata |
Anatajana suradhEnu samAna
mahAnuBAva tE namO namO || 6 ||
SrImatkArpara dhAma naraharE
prEmapAtra sucaritra namO |
kAmAdi ripustOma BayApaha
mAmuddhara tE namO namO || 7 ||
Leave a Reply