Composer : Shri Indiresha ankita
ಬ್ರಹ್ಮ ದೇವರು
ಕರುಣಿಸೊ ಕೋಮಲಾಂಗನೆ ನಾರಾಯಣ ಸುತನೆ ಕರುಣಿಸೊ [ಪ]
ಕರುಣಿಸು ಎನ್ನನು ಸುರಸೇವಿತ ಪಾದ ಪರಮೇಷ್ಠಿಯ
ನಿನ್ನ ಶರಣು ಬಂದಿಹೆನು [ಅ.ಪ.]
ವಾಣಿರಮಣ ನಿನ್ನ ಗಾನ ಮಾಡುವೆ
ಸಿರಿಮಾನಿನಿ ಅರಸನ ಧ್ಯಾನದೊಳಿರಿಸೊ [೧]
ಶಿವಜನಕನೆ ನಿನ್ನ ಕವನ ಮಾಡುವ ಹೃದ್-
ಭವನದೊಳಗೆ ಮಾಧವನ ತೋರಿಸೊ [೨]
ಇಂದಿರೇಶನ ಮನವಿಂದು ಬೋಧಿಸಿ ಭವ
ಬಂಧನ ಬಿಡಿಸಿ ಶರ ವೃಂದಾಸನ ಗುರು [೩]
brahma dEvaru
karuNiso kOmalAMgane nArAyaNa sutane karuNiso [pa]
karuNisu ennanu surasEvita pAda paramEShThiya
ninna SaraNu baMdihenu [a.pa.]
vANiramaNa ninna gAna mADuve
sirimAnini arasana dhyAnadoLiriso [1]
Sivajanakane ninna kavana mADuva hRud-
BavanadoLage mAdhavana tOriso [2]
iMdirESana manaviMdu bOdhisi Bava
baMdhana biDisi Sara vRuMdAsana guru [3]
Leave a Reply