Composer : Shri Indiresha ankita
ಹೋಗಿ ಗುಡಿಯೊಳಗುಂಡು ಬೇಗ ಬಾರೋ
ಭೋಗಿ ವರ ಕಾಲಿಂಗ ನಾಗ ಮರ್ದನನೇ [ಪ]
ಸರಸಿಜಾಸನ ಬ್ರಹ್ಮ ಸರಸ್ವತಿಯ ಒಡಗೂಡಿ
ಸಿರಿ ರಮಣ ವೈಕುಂಠ ಗಿರಿವಾಸನೆ
ಸುರ ನದಿಯ ಜಲದಿಂದ ಎರಡು ತುಳಸಿ ಗಂಧ
ಪರಮ ಕುಸುಮಗಳಿಂದ ಪರಿಚರಿಸುತಲಿಹರು [೧]
ಗರುಡ ಬಂದಿಹನು ಸೌಪರ್ಣಿ ದೇವಿಯ ಕೂಡಿ
ಹರನು ಪಾರ್ವತಿ ಸಹಿತ ಬಂದಿಹನು
ಉರಗರಾಜನು ತನ್ನ ತರಣಿ ಸಹ ಬಂದಿಹನು
ಸುರರ ತರುಣಿಯರೆಲ್ಲ ನೆರಹಿಕೊಂಡಿಹರು [೨]
ಸುಂದರಾಂಗಿಯು ಬಕುಲೆ ಮಿಂದು ಪಾಕವ ಮಾಡಿ
ತಂದಿಹಳು ಕ್ಷಿರಾಬ್ಧಿ ನಂದನೆಯು
ಇಂದಿರೇಶಗೆ ಕಾಮಿತೊಂದೊಂದೆ ಬಡಿಸುವಳು
ನಂದ ಸುಕುಮಾರ ಗೋವಿಂದ ಗಜವರದಾ [೩]
hOgi guDiyoLaguMDu bEga bArO
BOgi vara kAliMga nAga mardananE [pa]
sarasijAsana brahma saraswatiya oDagUDi
siri ramaNa vaikuMTha girivAsane
sura nadiya jaladiMda eraDu tuLasi gaMdha
parama kusumagaLiMda paricarisutaliharu [1]
garuDa baMdihanu sauparNi dEviya kUDi
haranu pArvati sahita baMdihanu
uragarAjanu tanna taraNi saha baMdihanu
surara taruNiyarella nerahikoMDiharu [2]
suMdarAMgiyu bakule miMdu pAkava mADi
taMdihaLu kShirAbdhi naMdaneyu
iMdirESage kAmitoMdoMde baDisuvaLu
naMda sukumAra gOviMda gajavaradA [3]
Leave a Reply