Barabeko rangayya nee

Composer : Shri Purandara dasaru

By Smt.Shubhalakshmi Rao

ಬರಬೇಕೋ ರಂಗಯ್ಯ ನೀ ಬರಬೇಕೋ ||ಪ||
ಬರಬೇಕೋ ಬಂದು ಒದಗಬೇಕೋ ಮಮ ಗುರು
ನರಹರಿ ನಾರಾಯಣ ನೀನಾ ಸಮಯಕ್ಕೆ ||ಅ.ಪ||

ಕಂಠಕ್ಕೆ ಪ್ರಾಣ ಬಂದಾಗ ಎನ್ನ
ನೆಂಟರಿಷ್ಟರು ಬಂದಳುವಾಗ
ಗಂಟು ಹುಟ್ಟಿನ ಕಾಲಭಂಟರು ಕವಿದೆನ್ನ
ಗಂಟಲೌಕುವಾಗ ವೈಕುಂಠ ನಾರಾಯಣ |೧|

ನಾರಿಯು ಪುತ್ರ ಮಿತ್ರರು ಬಂಧುಗಳು-
ಆರೆನ್ನ ಸಂಗಡ ಬಾರರು
ಆರಿಗಾರಿಲ್ಲ ಯಮನಾರು ಭಟಕೆ ಅಸು
ರಾರಿ ಮೈ ಮರೆದಾಗ ನೀರೇರುಹನಾಭ |೨|

ಕರಿ ಪ್ರಹ್ಲಾದಾದಿ ಭಕ್ತರ ಪತಿ
ಕರಿಸಲು ಒದಗಿದೆ ಶ್ರೀಧರ | ನೆರೆ
ಹೀನನೆನ್ನ ಉದ್ಧರಿಸಿ ಅಚ್ಯುತ ನಿನ್ನ
ಚರಣದೊಳಿಂಬಿಡೊ ಪುರಂದರವಿಠಲ |೩|


barabEkO raMgayya nI barabEkO ||pa||
barabEkO baMdu odagabEkO mama guru
narahari nArAyaNa nInA samayakke ||a.pa||

kaMThakke prANa baMdAga enna
neMTariShTaru baMdaLuvAga
gaMTu huTTina kAlaBaMTaru kavidenna
gaMTalaukuvAga vaikuMTha nArAyaNa |1|

nAriyu putra mitraru baMdhugaLu-
Arenna saMgaDa bAraru
ArigArilla yamanAru BaTake asu
rAri mai maredAga nIrEruhanABa |2|

kari prahlAdAdi Baktara pati
karisalu odagide SrIdhara | nere
hInanenna uddharisi acyuta ninna
caraNadoLiMbiDo puraMdaraviThala |3|

Leave a Reply

Your email address will not be published. Required fields are marked *

You might also like

error: Content is protected !!