Tag: Barabeko rangayya nee

  • Barabeko rangayya nee

    Composer : Shri Purandara dasaru ಬರಬೇಕೋ ರಂಗಯ್ಯ ನೀ ಬರಬೇಕೋ ||ಪ||ಬರಬೇಕೋ ಬಂದು ಒದಗಬೇಕೋ ಮಮ ಗುರುನರಹರಿ ನಾರಾಯಣ ನೀನಾ ಸಮಯಕ್ಕೆ ||ಅ.ಪ|| ಕಂಠಕ್ಕೆ ಪ್ರಾಣ ಬಂದಾಗ ಎನ್ನನೆಂಟರಿಷ್ಟರು ಬಂದಳುವಾಗಗಂಟು ಹುಟ್ಟಿನ ಕಾಲಭಂಟರು ಕವಿದೆನ್ನಗಂಟಲೌಕುವಾಗ ವೈಕುಂಠ ನಾರಾಯಣ |೧| ನಾರಿಯು ಪುತ್ರ ಮಿತ್ರರು ಬಂಧುಗಳು-ಆರೆನ್ನ ಸಂಗಡ ಬಾರರುಆರಿಗಾರಿಲ್ಲ ಯಮನಾರು ಭಟಕೆ ಅಸುರಾರಿ ಮೈ ಮರೆದಾಗ ನೀರೇರುಹನಾಭ |೨| ಕರಿ ಪ್ರಹ್ಲಾದಾದಿ ಭಕ್ತರ ಪತಿಕರಿಸಲು ಒದಗಿದೆ ಶ್ರೀಧರ | ನೆರೆಹೀನನೆನ್ನ ಉದ್ಧರಿಸಿ ಅಚ್ಯುತ ನಿನ್ನಚರಣದೊಳಿಂಬಿಡೊ ಪುರಂದರವಿಠಲ |೩|…

error: Content is protected !!