Haribhaktisara – Dirgha kriti

Composer : Shri Kanakadasaru

By Smt.Shubhalakshmi Rao

ಶ್ರೀಯರಸ ಗಾಂಗೇಯ-ನುತ ಕೌಂ-ತೇಯ ವಂದಿತಚರಣ ಕಮಲದ
ಳಾಯತಾಂಬಕರೂಪ ಚಿನ್ಮಯ ದೇವಕೀ-ತನಯ ||
ರಾಯ ರಘುಕುಲವರ್ಯ ಭೂಸುರ ಪ್ರಿಯ ಸುರ ಪುರ ನಿಲಯ ಚೆನ್ನಿಗ
ರಾಯ ಚತುರೋಪಾಯ ರಕ್ಷಿಸು ನಮ್ಮನನವರತ || ೧ ||

ದೇವದೇವ ಜಗದ್ಭರಿತ ವಸು ದೇವಸುತ ಜಗದೇಕ-ನಾಥ ರ
ಮಾವಿನೋದಿತ ಸಜ್ಜನಾನತ ನಿಖಿಲ ಗುಣಭರಿತ ||
ಭಾವಜಾರಿ ಪ್ರಿಯ ನಿರಾಮಯ ರಾವಣಾಂತಕ ರಘುಕುಲಾನ್ವಯ
ದೇವ ಅಸುರ ವಿರೋಧಿ ರಕ್ಷಿಸು ನಮ್ಮನನವರತ || ೨ ||

ಅನುಪಮಿತ ಚಾರಿತ್ರ ಕರುಣಾ ವನಧಿ ಭಕ್ತ ಕುಟುಂಬಿ ಯೋಗೀ
ಜನ ಹೃದಯ ಪರಿಪೂರ್ಣ ನಿತ್ಯಾನಂದ ನಿಗಮ ನುತ ||
ವನಜನಾಭ ಮುಕುಂದ ಮುರಮರ್ದನ ಜನಾರ್ದನ ತ್ರೈ ಜಗತ್ಪಾ
ವನ ಸುರಾರ್ಚಿತ ದೇವ ರಕ್ಷಿಸು ನಮ್ಮನನವರತ || ೩ ||

ಕಮಲಸಂಭವ ವಿನುತ ವಾಸವ ನಮಿತ ಮಂಗಳ ಚರಿತ ದುರಿತ
ಕ್ಷಮಿತ ರಾಘವ ವಿಶ್ವ ಪೂಜಿತ ವಿಶ್ವ ವಿಶ್ವಮಯ ||
ಅಮಿತ ವಿಕ್ರಮ ಭೀಮ ಸೀತಾ ರಮಣ ವಾಸುಕಿ ಶಯನ ಖಗಪತಿ
ಗಮನ ಕಂಜಜನಯ್ಯ ರಕ್ಷಿಸು ನಮ್ಮನನವರತ || ೪ ||

ಕ್ಷೀರವಾರಿಧಿ ಶಯನ ಶಾಂತಾ ಕಾರಾ ವಿವಿಧ ವಿಚಾರ ಗೋಪೀ
ಜಾರ ನವನೀತ ಚೋರ ಚಕ್ರಾಧಾರ ಭವ ದೂರ ||
ಮಾರಪಿತ ಗುಣಹಾರ ಸರಸಾ ಕಾರ ರಿಪು ಸಂಹಾರ ತುಂಬುರ
ನಾರದಪ್ರಿಯ ವರದ ರಕ್ಷಿಸು ನಮ್ಮನನವರತ || ೫ ||

ತಾಮರಸದಳ ನಯನ ಭಾರ್ಗವ ರಾಮ ಹಲಧರರಾಮ ದಶರಥ
ರಾಮ ಮೇಘಶ್ಯಾಮ ಸದ್ಗುಣಧಾಮ ನಿಸ್ಸೀಮ ||
ಸಾಮಗಾನ ಪ್ರೇಮ ಕಾಂಚನ ಧಾಮಧರ ಸುತ್ರಾಮ ವಿರಚಿತ
ನಾಮ ರವಿಕುಲ ಸೋಮ ರಕ್ಷಿಸು ನಮ್ಮನನವರತ || ೬ ||

ವೇದಗೋಚರ ವೇಣುನಾದವಿ ನೊದ ಮಂದರಶೈಲಧರ ಮಧು
ಸೂದನಾಚ್ಯುತ ಕಂಸದಾನವರಿಪು ಮಹಾಮಹಿಮ ||
ಯಾದವೇಂದ್ರ ಯಶೋದೆ ನಂದನ ನಾದಬಿಂದು ಕಳಾತಿಶಯ ಪ್ರ
ಹ್ಲಾದ ರಕ್ಷಕ ವರದ ರಕ್ಷಿಸು ನಮ್ಮನನವರತ || ೭ ||

ಅಕ್ಷಯಾಶ್ರಿತ ಸುಜನ ಜನ ಸಂ-ರಕ್ಷಣ ಶ್ರೀವತ್ಸ ಕೌಸ್ತುಭ
ಮೋಕ್ಷದಾಯಕ ಕುಟಿಲ ದಾನವ ಶಿಕ್ಷ ಕುಮುದಾಕ್ಷ ||
ಪಕ್ಷಿವಾಹನ ದೇವ ಸಂಕುಲ ಪಕ್ಷ ನಿಗಮಾಧ್ಯಕ್ಷ ವರನಿಟಿ
ಲಾಕ್ಷ ಸಖ ಸರ್ವೇಶ ರಕ್ಷಿಸು ನಮ್ಮನನವರತ || ೮ ||

ಚಿತ್ರಕೂಟ ನಿವಾಸ ವಿಶ್ವಾ-ಮಿತ್ರ ಕ್ರತು ಸಂರಕ್ಷಕ ರವಿ ಶಶಿ
ನೇತ್ರ ಭವ್ಯ ಚರಿತ್ರ ಸದ್ಗುಣಗಾತ್ರ ಸತ್ಪಾತ್ರ ||
ಧಾತ್ರಿಜಾಂತಕ ಕಪಟನಾಟಕ ಸೂತ್ರ ಪರಮ ಪವಿತ್ರ ಫಲ್ಗುಣ
ಮಿತ್ರ ವಾಕ್ಯವಿಚಿತ್ರ ರಕ್ಷಿಸು ನಮ್ಮನನವರತ || ೯ ||

ಮಂಗಳಾತ್ಮಕ ದುರಿತತಿಮಿರ ಪ-ತಂಗ ಗರುಡ ತುರಂಗ ರಿಪುಮದ
ಭಂಗ ಕೀರ್ತಿ ತರಂಗ ಪುರಹರ ಸಂಗ ನೀಲಾಂಗ ||
ಅಂಗದಪ್ರಿಯನಂಗಪಿತ ಕಾಳಿಂಗ-ಮರ್ದನ ಅಮಿತಾ ಕರುಣಾ
ಪಾಂಗ ಶ್ರೀನರಸಿಂಗ ರಕ್ಷಿಸು ನಮ್ಮನನವರತ || ೧೦ ||

ದಾಶರಥಿ ವೈಕುಂಠ ನಗರ ನಿ ವಾಸ ತ್ರೈಜಗದೀಶ ಪಾಪ ವಿ
ನಾಶ ಪರಮ ವಿಲಾಸ ಹರಿ ಸರ್ವೇಶ ದೇವೇಶ ||
ವಾಸುದೇವ ದಿನೇಶ ಶತಸಂ ಕಾಶ ಯದುಕುಲ-ವಂಶತಿಲಕ ಪ
ರಾಶರಾನತ ದೇವ ರಕ್ಷಿಸು ನಮ್ಮನನವರತ || ೧೧ ||

ಕುಂದ ಕುಟ್ಮಲ ರದನ ಪರಮಾ ನಂದ ಹರಿ ಗೋವಿಂದ ಸನಕ
ಸನಂದ ವಂದಿತ ಸಿಂಧು ಬಂಧನ ಮಂದರಾದ್ರಿಧರ ||
ಇಂದಿರಾಪತ ವಿಜಯಸಖ ಅರ ವಿಂದನಾಭ ಪುರಂದರಾರ್ಚಿತ
ನಂದ-ಕಂದ ಮುಕುಂದ ರಕ್ಷಿಸು ನಮ್ಮನನವರತ || ೧೨ ||

ಬಾಣ ಬಾಹುಚ್ಛೇದ ರಾವಣ ಪ್ರಾಣ-ನಾಶನ ಪುಣ್ಯ-ನಾಮ ಪು
ರಾಣ ಪುರುಷೋತ್ತಮ ನಿಪುಣ ಅಣುರೇಣು ಪರಿಪೂರ್ಣ ||
ಕ್ಷೋಣಿಪತ ಸುಲಲಿತ ಸುದರ್ಶನ ಪಾಣಿ ಪಾಂಡವ ರಾಜಕಾರ್ಯ ಧು
ರೀಣ ಜಗ ನಿರ್ಮಾಣ ರಕ್ಷಿಸು ನಮ್ಮನನವರತ || ೧೩ ||

ನೀಲವರ್ಣ ವಿಶಾಲ ಶುಭಗುಣ ಶೀಲ ಮುನಿಕುಲಪಾಲ ಲಕ್ಷ್ಮೀ
ಲೋಲ ರಿಪು ಶಿಶುಪಾಲ ಮಸ್ತಕಶೂಲ ವನಮಾಲ ||
ಮೂಲಕಾರಣ ವಿಮಲ ಯಾದವ ಜಾಲಹಿತ ಗೋಪಾಲ ಅಗಣಿತ
ಲೀಲ ಕೋಮಲಕಾಯ ರಕ್ಷಿಸು ನಮ್ಮನನವರತ || ೧೪ ||

ನಾಗನಗರಿ ಧರಿತ್ರಿ ಕೋಶ ವಿ-ಭಾಗ ತಂತ್ರ ನಿಯೋಗ ಗಮನ
ಸರಾಗ ಪಾಂಡವ ರಾಜ ಜಿತ ಸಂಗ್ರಾಮ ನಿಸ್ಸೀಮ ||
ಯೋಗಗಮ್ಯ ಭವಾಬ್ಧಿ ವಿಷಧರ ನಾಗ ಗಾರುಡ-ಮಂತ್ರವಿದ ಭವ
ರೋಗವೈದ್ಯ ವಿಚಿತ್ರ ರಕ್ಷಿಸು ನಮ್ಮನನವರತ || ೧೫ ||

ಶ್ರೀಮದುತ್ಸಹ ದೇವನುತ ಶ್ರೀ ರಾಮ ನಿನ್ನಯ ಚರಣಸೇವಕ
ಪ್ರೇಮದಿಂ ಸಾಷ್ಟಾಂಗ-ವೆರಗಿಯೆ ಮಾಳ್ಪೆ ಬಿನ್ನಪವ ||
ಈ ಮಹಿಯೊಳೀವರಗೆ ನಾವು ಸು ಕ್ಷೀಮಿಗಳು ನಿನ್ನಯ ಪದಾಬ್ಜ
ಕ್ಷೇಮ ವಾರ್ತೆಯನರುಹಿ ರಕ್ಷಿಸು ನಮ್ಮನನವರತ || ೧೬ ||

ಈಗಲೀ ಮರ್ಯಾದೆಯಲಿ ಶರ-ಣಾಗತರ ಸೇವೆಯೊಳು ಹೊಂಪುಳಿ
ಯಾಗಿ ಬಾಳುವರೇನು ಧನ್ಯರೊ ಹರ ಮಹಾದೇವ ||
ಭೋಗ ಭಾಗ್ಯವ ಬಯಸಿ ಮುಕ್ತಿಯ ನೀಗಿ ನಿಮ್ಮನು ಭಜಿಸಲರಿಯದ
ಯೋಗಿಗಳ ಮಾತೇನು ರಕ್ಷಿಸು ನಮ್ಮನನವರತ || ೧೭ ||

ಭಕ್ತಿಸಾರದ ಚರಿತೆಯನು ಹರಿ ಭಕ್ತರಾಲಿಸುವಂತೆ ರಚಿಸುವೆ
ಯುಕ್ತಿಯಲಿ ಬರೆದೋದಿದವ-ರಿಷ್ಟಾರ್ಥ ಸಿದ್ಧಿಪುದು ||
ಮುಕ್ತಿಗಿದು ನೆಲೆದೋರುವುದು ಹರಿ ಭಕ್ತರನು ಲಾಲಿಪುದು ನಿಜಮತಿ
ಭಕ್ತಿಗೊಲಿವಂದದಲಿ ರಕ್ಷಿಸು ನಮ್ಮನನವರತ || ೧೮ ||

ನಳಿನಲೋಚನ ನಿನ್ನ ಮೂರ್ತಿಯ ಕಳೆ ಬೆಳಗುತಿದೆ ಲಹರಿಯಲಿ ಭೂ
ತಳದೊಚ್ಚರಿಯಾದ ನಾಮಾಮೃತ ಸಮುದ್ರದಲಿ ||
ಬಳಸುವರು ಸತ್ಕವಿಗಳಿವ-ರಗ್ಗಳಿಕೆ ಎನಗಿನಿತಿಲ್ಲ ಸನ್ಮತಿ
ಗಳಿಗೆ ಮಂಗಳವಿತ್ತು ರಕ್ಷಿಸು ನಮ್ಮನನವರತ || ೧೯ ||

ಗಿಳಿಯ ಮರಿಯನು ತಂದು ಪಂಜರ-ದೊಳಗೆ ಪೋಷಿಸಿ ಕಲಿಸಿ ಮೃದು
ನುಡಿಗಳನು ಲಾಲಿಸಿ ಕೇಳ್ವ ಪರಿಣತರಂತೆ ನೀನೆನಗೆ ||
ತಿಳುಹು ಮತಿಯನು ಎನ್ನ ಜಿಹ್ವೆಗೆ ಮೊಳಗುವಂದದಿ ನಿನ್ನ ನಾಮಾ
ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ || ೨೦ ||

ಬಣ್ಣೀಸಲಳೆವೇ ನಿನ್ನ ನಾಮವ ಸುಗುಣ ಸಚ್ಚಾರಿತ್ರ ಕಥನವ
ನಗಣಿತೋಪಮ ಅಮಿತ ವಿಕ್ರಮಗಮ್ಯ ನೀನೆಂದು ||
ನಿಗಮತತಿ ಕೈವಾರಿಸುತ ಪದ ಯುಗವ ಕಾಣದೆ ಬಳಲುತಿದೆ ವಾ
ಸುಕಿಶಯನ ಸರ್ವೇಶ ರಕ್ಷಿಸು ನಮ್ಮನನವರತ || ೨೧ ||

ವೇದಶಾಸ್ತ್ರ ಪುರಾಣ ಪುಣ್ಯದ ಹಾದಿಯನು ನಾನರಿಯೆ ತರ್ಕದ
ವಾದದಲಿ ಗುರು ಹಿರಿಯರರಿಯದ ಮೂಢಮತಿ ಎನಗೆ ||
ಆದಿಮೂರುತಿ ನೀನು ನೆರೆ ಕರುಣೊ ದಯವನು ಹೃದಯಾಂಗಣದಿ ಜ್ಞಾ
ನೋದಯವೆನಗಿತ್ತು ರಕ್ಷಿಸು ನಮ್ಮನನವರತ || ೨೨ ||

ಹರಿವರಿತು ತಾಯ್ತನ್ನ ಶಿಶುವಿಗೆ ಒಸೆದು ಮೊಲೆ ಕೊಡುವಂತೆ ನೀ ಪೋ
ಷಿಸದೇ ಬೇರಿನ್ನಾರು ಪೋಷಕರಾಗಿ ಸಲಹುವರು ||
ಬಸಿರೊಳಗೆ ಬ್ರಹ್ಮಾಂಡಕೋಟಿಯ ಪಸರಿಸಿದ ಪರಮಾತ್ಮ ನೀನೆಂ
ದುಸುರುತಿವೆ ವೇದಗಳು ರಕ್ಷಿಸು ನಮ್ಮನನವರತ || ೨೩ ||

ಇಬ್ಬರಣುಗರು ನಿನಗೆ ಅವರೊಳ ಗೊಬ್ಬ ಮಗನೀರೇಳು ಲೋಕದ
ಹೆಬ್ಬ್-ಹಲಸು ಬೆಳೆವಂತೆ ಕಾರಣ ಕರ್ತನಾದವನು ||
ಒಬ್ಬ ಮಗನದ ಬರೆದ ಕರಣಿಕ ರಿಬ್ಬರೀ ಲೋಕಪ್ರಸಿದ್ಧರು
ಹಬ್ಬಿಸಿದೆ ಪ್ರಾಣಿಗಳ ರಕ್ಷಿಸು ನಮ್ಮನನವರತ || ೨೪ ||

ಸಿರಿಯು ಕುಲಸತಿ ಸುತನು ಕಮಲಜ ಹಿರಿಯ ಸೊಸೆ ಶಾರದೆ ಸಹೋದರಿ
ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು ||
ನಿರುತ ಮಾಯೆಯು ದಾಸಿ ನಿಜ ಮಂದಿರವಜಾಂಡವು ಜಂಗಮ ಸ್ಥಾ
ವರ ಕುಟುಂಬಿಗ ನೀನು ರಕ್ಷಿಸು ನಮ್ಮನನವರತ || ೨೫ ||

ಸಾಗರನ ಮಗಳರಿಯದಂತೆ ಸ-ರಾಗದಲಿ ಸಂಚರಿಸುತಿಹ ಉ
ದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲಿ ||
ಭಾಗವತರಾದವರ ಸಲಹುವ ನಾಗಿ ಸಂಚರಿಸುವುದು ಈ ಭವ
ಸಾಗರದಿ ಮುಳುಗಿಸದೆ ರಕ್ಷಿಸು ನಮ್ಮನನವರತ || ೨೬ ||

ಹಸ್ತಿವಾಹನನಾದಿಯಾದ ಸ-ಮಸ್ತ ದೇವ ನಿಕಾಯಾದೊಳಗೆ ಪ್ರ
ಶಸ್ತನಾವನು ನಿನ್ನ ವೋಲ್ ಶರಣಾಗತರ ಪೊರೆವ ||
ಹಸ್ತ ಕಲಿತ ಸುದರ್ಶನದೊಳರಿ ಮಸ್ತಕವ-ನಿಳುಹುವ ಪರಾತ್ಪರ
ವಸ್ತುವಲ್ಲವೆ ನೀನು ರಕ್ಷಿಸು ನಮ್ಮನನವರತ || ೨೭ ||

ಹಗೆಯರಿಗೆ ವರವೀವರಿಬ್ಬರು ತೆಗೆಯಲರಿಯರು ಕೊಟ್ಟ ವರಗಳ
ತೆಗೆದು ಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ ||
ಸುಗುಣರಿನ್ನಾರುಂಟು ಕದನವ ಬಗೆದು ನಿನ್ನೊಳು ಜೈಸುವವರೀ
ಜಗದೊಳುಂಟೇ ದೇವ ರಕ್ಷಿಸು ನಮ್ಮನನವರತ || ೨೮ ||

ಸುಮನರಸ ವೈರದಲಿ ಕೆಲಬರು ಕುಮತಿಗಳು ತಪದಿಂದ ಭರ್ಗನ
ಕಮಲಜನ ಪದಯುಗವ ಮೆಚ್ಚಿರಿ ವರವ ಪಡೆದಿಹರು ||
ಸಮರಮುಖದೊಳ-ಗುಪಮೆಯಲಿ ವಿಕ್ರಮದಿ ವೈರವ
ಮಾಡಿದವರಿಗೆ ಅಮರ ಪದವಿಯನಿತ್ತೆ ರಕ್ಷಿಸು ನಮ್ಮನನವರತ || ೨೯ ||

ಬಲಿಯ ಬಂಧಿಸಿ ಮೊರೆಯಿಡುವ ಸತಿ-ಗೊಲಿದು ಅಕ್ಷಯವಿತ್ತು ಕರುಣದಿ
ಮೊಲೆಯುಣಿಸಿದ ಬಾಲಕಿಯ ಪಿಡಿಸುವನಪಹರಿಸಿ ||
ಶಿಲೆಯ ಸತಿಯಳ ಮಾಡಿ ತ್ರಿಪುರದ ಲಲನೆಯರ ವ್ರತಗೆಡಿಸಿ ಕೂಡಿದ
ಕೆಲಸ-ವುತ್ತಮವಾಯ್ತು ರಕ್ಷಿಸು ನಮ್ಮನನವರತ || ೩೦ ||

ಕರಿಯ ಕಾಯ್ದಾ ಜಲದಿ ಮಕರಿಯ ತರಿದು ಹಿರಣ್ಯಾಕ್ಷಕನ ಸೀಳ್ದಾ
ತರಳನನು ತಲೆಗಾಯ್ದು ಶಕಟಾಸುರನ ಹತಮಾಡಿ ||
ದುರುಳ ಕಂಸನ ಕೊಂದು ಮಗಧನ ಮುರಿದು ವತ್ಸನ ಸಂಹರಿಸಿ
ಖರ ಹರಣವನು ಹಿಂಗಿಸಿದೆ ರಕ್ಷಿಸು ನಮ್ಮನನವರತ || ೩೧ ||

ಶಿಶುತನದ ಸಾಮರ್ಥ್ಯದಲಿ ಕೆಲ-ರಸುರರನು ಸಂಹರಿಸಿ ಚಕ್ರವ
ಬಿಸುಟು ಯೌವನ ಕಾಲದಲಿಯಾ ಪಾಂಡು ಸುತರಿಂದ ||
ವಸುಮತಿಯ ಭಾರವನಿಳುಹಿ ಸಾ-ಹಸದಿ ಮೆರೆದವನಾಗೆ ನೀ ಮೆ
ಚ್ಚಿಸಿದೆ ತ್ರಿಜಗವನ್ನೆಲ್ಲ ರಕ್ಷಿಸು ನಮ್ಮನನವರತ || ೩೨ ||

ಎಲ್ಲರಲಿ ನೀನಾಗಿ ಸುಮನಸರಲ್ಲಿ ಅತಿ ಹಿತಿನಾಗಿ ಯಾದವ
ರಲ್ಲಿ ಬಾಂಧವನಾಗಿ ದಾನವರಲ್ಲಿ ಹಗೆಯಾಗಿ ||
ಕೊಲ್ಲಿಸಿದೆ ಭೀಮಾರ್ಜುನರ ಕೈ ಯಲ್ಲಿ ಕೌರವ ಕುಲವನೆಲ್ಲವ
ಬಲ್ಲಿದನು ನೀನಹುದು ರಕ್ಷಿಸು ನಮ್ಮನನವರತ || ೩೩ ||

ನರಗೆ ಸಾರಥಿಯಾಗಿ ರಣದೊಳು ತುರಗ ನೀರಡಿಸಿದರೆ ವಾರಿಯ
ಸರಸಿಯನು ನಿರ್ಮಿಸಿ ಕಿರೀಟಿಯ ಕೈಲಿ ಸೈಂಧವನ ||
ಶಿರವನು ಕೆಡುಹಿಸಿ ಅವನ ತಂದೆಯ ಕರತಲಕೆ ನೀಡಿಸಿದೆ ಹರಹರ
ಪರಮ ಸಾಹಸಿ ನೀನು ರಕ್ಷಿಸು ನಮ್ಮನನವರತ || ೩೪ ||

ಬವರದಲಿ ಖತಿಗೊಂಡು ಗದೆಯೊಳು ಕವಿದು ನಿನ್ನ ಶತಾಯಧನು ಹೊ
ಕ್ಕವಘಡಿಸಿ ಹೊಯ್ದಾಡಿ ತನ್ನಾಯುಧದಿ ತಾ ಮಡಿದ ||
ವಿವರವೇನೋ ತಿಳಿಯೆ ಈ ಮಾಯವನು ನೀನೇ ಬಲ್ಲೆ ನಿನ್ನಾ
ಯುವನು ಬಲ್ಲವರುಂಟೆ ರಕ್ಷಿಸು ನಮ್ಮನನವರತ || ೩೫ ||

ಇಳೆಗೆ ಪತಿಯಾದವನು ಯಾದವ-ರೊಳಗೆ ಬಾಂಧವ ನಿನಗೆ ಸೋದರ
ದಳಿಯನಾ-ದಭಿಮನ್ಯುವನು ಕೊಲ್ಲಿಸಿದೆ ಕೊಳಗುಳದಿ ||
ಅಳಲಿನಬುಧಿಯಳದ್ದಿ ತಂಗಿಯ ಬಳಲಿಸಿದೆ ಕುಲಗೋತ್ರ ಬಾಂಧವ
ರೊಳಗೆ ಕೀರ್ತಿಯ ಪಡೆದೆ ರಕ್ಷಿಸು ನಮ್ಮನನವರತ || ೩೬ ||

ತಾಯನಗಲಿದ ತನಯನೀ ರಾ-ಧೇಯನೊಳು ರಹಸ್ಯದಲಿ ಕುಲ
ತಾಯವನು ನೆರೆ ತಿಳುಹಿ ಅರ್ಜುನನಿಂದ ಕೊಲ್ಲಿಸಿದೆ ||
ಮಾಯಾಮಂತ್ರದ ಕುಟಿಲ ಗುಣದ ನ್ಯಾಯವೋ ಇದನ್ಯಾಯವೋ ನೀ
ನ್ಯಾಯವನು ನೀ ಬಲ್ಲೆ ರಕ್ಷಿಸು ನಮ್ಮನನವರತ || ೩೭ ||

ಕೊಲ್ಲು ಬಗೆದವನಾಗಿ ನೀ ಹಗೆ-ಯಲ್ಲಿ ಸಖ್ಯವ ಬೆಳೆಸದು ಹಿತ
ವಲ್ಲ ನಿನ್ನಯ ಗುಣವ ಬಲ್ಲವರಿಲ್ಲ ಯದುಕುಲದಿ ||
ಗೊಲ್ಲ ನಾರಿಯರೊಳು ಪ್ರವರ್ತಕ ನಲ್ಲವೇ ಭಾವಿಸಲು ಲೋಕದೊ
ಳೆಲ್ಲರೂ ಸರಿ ನಿನಗೆ ರಕ್ಷಿಸು ನಮ್ಮನನವರತ || ೩೮ ||

ಮಗನ ಕೊಂದವನಾಳುವಂತಹ ಸುಗುಣೆಯರು ಹದಿನಾರು ಸಾವಿರ
ಸೊಗಸುಗಾತಿಯವರ ಮೋಹದ ಬಲೆಗೆ ವಿಟನಾಗಿ ||
ಬಗೆ ಬಗೆಯ ರತಿಕಲೆಗಳಲಿ ಕೂ-ರುಗರ ನಾಟಿಸಿ ಮೆರೆದು ನೀನಿ
ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ || ೩೯ ||

ಏನು ಮಾಡಿದರೇನು ಕರ್ಮವ ನೀನೊಲಿಯದಿನ್ನಿದಿಲ್ಲ ಅದಕನು
ಮಾನವುಂಟೇ ಭ್ರಮರ ಕೀಟನ್ಯಾಯದಂದಲಿ ||
ನೀನೊಲಿಯೆ ತೃಣ ಪರ್ವತವು ಪುಸಿ ಯೇನು ನೀ ಪತಿಕರಿಸೆ ಬಳಿಕಿ
ನ್ನೇನು ಚಿಂತಿಸಲೇಕೆ ರಕ್ಷಿಸು ನಮ್ಮನನವರತ || ೪೦ ||

ಎಷ್ಟು ಮಾಡಲು ಮುನ್ನತಾ ಪಡ-ದಷ್ಟು ಎಂಬುದು ಲೋಕದೊಳು ಮತಿ
ಗೆಟ್ಟ ಮಾನವ-ರಾಡುತಿಹರಾ ಮಾತದಂತಿರಲಿ ||
ಪಟ್ಟವಾರಿಂದಾಯ್ತು ದ್ರುವನಿಗೆ ಕೊಟ್ಟ ವರ ತಪ್ಪಿತೇ ಕುಚೇಲನೀ
ಗಿಷ್ಟ ಬಾಂಧವ ನೀನು ರಕ್ಷಿಸು ನಮ್ಮನನವರತ || ೪೧ ||

ತನ್ನ ದೇಹಾತುರದೊ-ಳಡವಿಯೊ-ಳನ್ಯರನು ಸಂಹರಿಸುತಿರುತಿರೆ
ನಿನ್ನ ನಾಮದೊಳಧಿಕ ವೆರಡಕ್ಷರವ ಬಣ್ಣಿಸುತ ||
ಧನ್ಯನಾದನೆ ಮುನಿ ಕುಲದಿ ಸಂಪನ್ನ-ನಾದನು ನೀನೊಲಿದ ಬಳಿ
ಕಿನ್ನು ಪಾತಕವುಂಟೆ ರಕ್ಷಿಸು ನಮ್ಮನನವರತ || ೪೨ ||

ನಿನ್ನ ಸತಿಗಳುಕಿದ ದುರಾತ್ಮನ ಬೆನ್ನಿನಲಿ ಬಂದವನ ಕರುಣದಿ
ಮನ್ನಿಸಿದ ಕಾರನ ದಯಾಪರಾಮೂರ್ತಿ ಎಂದೆನುತ ||
ನಿನ್ನ ಭಜಿಸಿದ ಸಾರ್ವಭೌಮರಿ ಗಿನ್ನು ಇಹಪರವುಂಟು ಸದ್ಗುಣ
ರನ್ನ ಸಿರಿ ಸಂಪನ್ನ ರಕ್ಷಿಸು ನಮ್ಮನನವರತ || ೪೩ ||

ವೀರ ರಾವಣನೊಡನೆ ಹೋರಿದ ವೀರರಗ್ಗದ ಕಪಿಗಳವರೊಳು
ಮಾರುತನ ಮಗನೇನು ಧನ್ಯನೋ ಬ್ರಹ್ಮ ಪಟ್ಟದಲಿ ||
ಸೇರಿಸಿದೆ ನಿನ್ನಂತೆ ಕೊಡುವ ಉ-ದಾರಿಯಾವನು ತ್ರಿಜಗದೊಳಗಾ
ಕಾರಣದಿ ನಂಬಿದೆನು ರಕ್ಷಿಸು ನಮ್ಮನನವರತ || ೪೪ ||

ಶಿವಶಿವಾ ನೀ ಮಾಡಿದುಪಕಾರವನು ಮರೆತವರುಂಟೆ ಪಾಪದಿ
ನವೆದಜಾಮಿಳಗೊಲಿದು ಪ್ರಾಣ ವಿಯೊಗಕಾಲದಲಿ ||
ಜವನವರ ಕೈಗೊಪ್ಪಿಸದೆ ಕಾಯ್ದವನು ನೀ ಮಾಧವನು ಮಿಕ್ಕಾ
ದವರಿಗುಂಟೇ ಕರುಣ ರಕ್ಷಿಸು ನಮ್ಮನನವರತ || ೪೫ ||

ಹೆತ್ತ ಮಗಳನು ಮದುವೆಯಾದವ ನುತ್ತಮನು ಗುರು ಪತ್ನಿಗಳುಪಿದ
ಚಿತ್ತಜನು ಮಾವನ ಕೃತಘ್ನನು ನಿನಗೆ ಮೈದುನನು ||
ಹೊತ್ತು ತಪ್ಪಿಸಿ ಕಾಮದಲಿ ಮುನಿ ಪೋತ್ತಮನ ಮಡದಿಯನು ನೆರೆದವ
ಗಿತ್ತೆ ಕೈವಲ್ಯವನು ರಕ್ಷಿಸು ನಮ್ಮನನವರತ || ೪೬ ||

ಇಲ್ಲಿಹನು ಅಲ್ಲಿಲ್ಲವೆಂಬೀ ಸೊಲ್ಲು ಸಲ್ಲದು ಹೊರಗೊಳಗೆ ನೀ
ನಲ್ಲ-ದಿಲ್ಲನ್ಯತ್ರ-ವೆಂಬುದನೆಲ್ಲ ಕೆಲಕೆಲರು ||
ಬಲ್ಲರಿಳೆಯೊಳು ಭಾಗವತರಾ ದೆಲ್ಲರಿಗೆ ವಂದಿಸಿದ ಕುಜನರಿ
ಗಿಲ್ಲ ಸದ್ಗತಿ ನೋಡಿ ರಕ್ಷಿಸು ನಮ್ಮನನವರತ || ೪೭ ||

ಸಿರಿ ಸಂಪತ್ತಿನಲಿ ನೀ ಮೈ ಮರೆದು ಮದ ಗರ್ವದಲಿ ದೀನರ
ಕರುಣದಿಂದೀಕ್ಷಿಸದೆ ಕಡೆಗಣ್ನಿಂದ ನೋಡುವರೇ ||
ಹರಹರ ಅನಾಥರನು ಪಾಲಿಸಿ ವರವ ಕೊಡುವ ಉದಾರಯೆಂಬೀ
ಬಿರುದ ಬಿಡುವರೆ ತಂದೆ ರಕ್ಷಿಸು ನಮ್ಮನನವರತ || ೪೮ ||

ದೀನ ನಾನು ಸಮಸ್ತ ಲೋಕಕೆ ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು ||
ಏನ ಬಲ್ಲೆನು ನಾನು ನೆರೆ ಸುಜ್ಂಆನ ಮೂರುತಿ ನೀನು ನಿನ್ನ ಸ
ಮಾನರುಂಟೇ ದೇವ ರಕ್ಷಿಸು ನಮ್ಮನನವರತ || ೪೯ ||

ತರಳತನದಲಿ ಕೆಲವು ದಿನ ದುರು ಭರದ ಗರ್ವದಿ ಕೆಲವು ದಿನ ಮೈ
ಮರೆದು ನಿನ್ನಡಿ-ಗೆರಗದಾದೆನು ವಿಷಯ ಕೇಳಿಯಲಿ ||
ನರಕ ಭಾಜನನಾಗಿ ಕಾಮಾ ತುರದಿ ಪರಧನ ಪರಸತಿಗೆ ಮನ
ಹರಿದ ಪಾಪವ ಕಳೆದು ರಕ್ಷಿಸು ನಮ್ಮನನವರತ || ೫೦ ||

ಮರೆದ-ನಭ್ಯುದಯಲಿ ನಿನ್ನನು ಮರೆಯೆ-ನಾಪತ್ತಿನಲಿ ಹರಿಯೆಂ
ದೊರೆಯುವೆನು ಮನವೇಕ ಭಾವದೊಳಿಲ್ಲ ನಿನ್ನಡಿಯ ||
ಮರೆದು ಬಾಹಿರನಾದವ ನೀ ಮರೆವರೇ ಹಸು ತನ್ನ ಕಂದನ
ಮರೆವುದೇ ಮಮತೆಯಲಿ ರಕ್ಷಿಸು ನಮ್ಮನನವರತ || ೫೧ ||

ದಾರುಣಿಗೆ ವರಚಕ್ರವರ್ತಿಗ-ಳಾರುಮಂದಿ ನೃಪಾಲಕರು ಹದಿ
ನಾರು ಮಂದಿಯು ಧರಣಿಯನು ಮುನ್ನಾಳ್ದ ನೃಪರೆನಿತೋ ||
ವೀರರನು ಮೆಚ್ಚಿದಳೆ ಧರಣೀ ನಾರಿ ಬಹು ಮೋದದೊಳು ನಿನ್ನನು
ಸೇರಿ ಓಲೈಸುವಳು ರಕ್ಷಿಸು ನಮ್ಮನನವರತ || ೫೨ ||

ಭಾರಕರ್ತನು ನೀನು ಬಹು ಸಂ-ಸಾರಿಯೆಂಬುದು ನಿಗಮತತಿ ಕೈ
ವಾರಿಸುತಿದೆ ದಿವಿಜ ಮನುಜ ಭುಜಂಗರೊಳಗಿನ್ನು ||
ಆರಿಗುಂಟು ಸ್ವತಂತ್ರ ನಿನ್ನಂತಾರು ಮುಕ್ತಿಯನೀವ ಸದ್ಗುರು
ವಾರು ಜಗದಧ್ಯಕ್ಷ ರಕ್ಷಿಸು ನಮ್ಮನನವರತ || ೫೩ ||

ಗತಿ ವಿಹೀನರಿಗಾರು ನೀನೇ ಗತಿಕಣಾ ಪತಿಕರಿಸಿ ಕೊಡು ಸ
ದ್ಗತಿಯ ನೀನೆಲೆ ದೇವ ನಿನಗಪರಾಧಿ ನಾನಲ್ಲ ||
ಶ್ರುತಿ ವಚನವಾಡುವುದು ಶರಣಾಗತರ ಸೇವಕನೆಂದು ನಿನ್ನನು
ಮತಿವಿಡಿದು ನಂಬಿದೆನು ರಕ್ಷಿಸು ನಮ್ಮನನವರತ || ೫೪ ||

ಈಗಲೋ ಈ ದೇಹವಿನ್ಯಾ-ವಾಗಲೋ ನಿಜವಿಲ್ಲವೆಂಬುದ
ನೀಗ ತಿಳಿಯದೆ ಮಡದಿ ಮನೆ ಮನೆವಾರ್ತೆ ಎಂದೆಂಬ ||
ರಾಗ ಲೋಭದಿ ಮುಳುಗಿ ಮುಂದಣ ತಾಗು ಬಾಗುಗಳರಿಯೆ ನಿನ್ನ ಸ
ಮಾಗಮವ ಬಯಸುವೆನು ರಕ್ಷಿಸು ನಮ್ಮನನವರತ || ೫೫ ||

ಮಾಂಸ ರಕ್ತದ ಮಡುವಿನಲ್ಲಿ ನವಮಾಸ ಜನನಿಯ ಜಠರದೊಳಗಿರು-ವಾ
ಸಮಯದಲಿ ವೃತ್ತಿಯನು ಕಲ್ಪಿಸಿದ ಪ್ರಭುವಾರು ||
ನೀ ಸಲಹಿದವನಲ್ಲವೇ ಕರುಣಾ ಸಮುದ್ರನು ನೀನಿರಲು ಕಮ
ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ || ೫೬ ||

ಬಲು ಮೃಗವು ಮರ ಪಕ್ಷಿ ಕೀಟಕ ಜಲಷರೌಘದಿ ಜನಿಸಿದೆನು ಕೋ
ಟಲೆ ಗೊಳಿಸ-ಬೇಡ ಕಟ ಮಾನವನಾದ ಬಳಿಕಿನ್ನು ||
ಕೊಲಿಸದಿರು ಯಮನಿಂದ ಮುರಹರ ಒಲಿದು ನಿನ್ನನು ಭಜಿಸುವವರ
ಕೊಲುವ ಕಾರಣವೇನು ರಕ್ಷಿಸು ನಮ್ಮನನವರತ || ೫೭ ||

ಪಂಚಭೂತದ ಕಾಯದೊಳು ನೀ ವಂಚಿಸದೆ ಇರುತಿರಲು ಪೂರ್ವದ
ಸಂಚಿತದ ಫಲವೆನ್ನಲೇಕಿದು ಮರುಳುತನದಿಂದ ||
ಮಿಂಚುವವರಿನ್ನುಂಟೆ ತಿಳಿಯೆ ಪ್ರ-ಪಂಚವೆಲ್ಲಕೆ ತಪ್ಪಿದವನೀ
ಕೊಂಚಗಾರನೆ ಕೃಷ್ಣ ರಕ್ಷಿಸು ನಮ್ಮನನವರತ || ೫೮ ||

ಹಲವು ಕರ್ಮಗಳಿಂದ ಮೂತ್ರದ ಬಿಲಗಳಲಿ ಸಂಚರಿಸಿ ಪದವಿಯ
ಫಲವ ಕಾಣದೆ ಹೊಲಪು ತಪ್ಪಿದೆನೆನ್ನ ದೇಹದಲಿ ||
ಒಲಿದು ನೀನಿರೆ ನಿನ್ನ ಸಲುಗೆಯ ಒಲುಮೆಯಲಿ ಬರಸೆಳೆವ ಮುಕುತಿಯ
ಲಲನೆಯನೆ ತಳುವಿಲ್ಲ ರಕ್ಷಿಸು ನಮ್ಮನನವರತ || ೫೯ ||

ಎತ್ತಿದೆನು ನಾನಾ ಶರೀರವ ಹೊತ್ತು ಹೊತ್ತಲಿಸಿದೆನು ಸಲೆ ಬೇ
ಸತ್ತು ನಿನ್ನಯ ಪದವ ಕಾಣದೆ ತೊಳಲಿ ಬಳಲಿದೆನು ||
ಸತ್ತು ಹುಟ್ಟುವ ಹುಟ್ಟಿ ಹಿಂಗುವ ಸುತ್ತ ತೊಡಕನು ಮಾಣಿಸಲೆ ಪುರು
ಷೋತ್ತಮನೆ ಮನವೊಲಿದು ರಕ್ಷಿಸು ನಮ್ಮನನವರತ || ೬೦ ||

ಇಂದು ಈ ಜನ್ಮದಲಿ ನೀನೇ ಬಂಧು ಹಿಂದಣ ಜನ್ಮದಲಿ ಬಳಿ
ಸಂದು ಮುಂದಣ ಜನ್ಮಕಧಿ-ಪತಿಯಾಗಿ ಇರುತಿರಲು ||
ಎಂದಿಗೂ ತನಗಿಲ್ಲ ತನು ಸಂ-ಬಂಧ ನಿನ್ನದು ಎನಗೆ ನೀ ಗತಿ
ಯೆಂದು ಬಿನ್ನೈಸಿದೆನು ರಕ್ಷಿಸು ನಮ್ಮನನವರತ || ೬೧ ||

ಗಣನೆಯಿಲ್ಲದ ಜನನಿಯರು ಮೊಲೆ ಯುಣಿಸಲಾಪಯ ಬಿಂದು-ಗಳನದ
ನೆಣಿಸಲಳವೇ ಸಪ್ತ ಸಾಗರ-ಕಧಿಕ-ವೆನಿಸುವುದು ||
ಬಣಗು ಕಮಲಜನದಕೆ ತಾನೇ ಮಣೆಯಗಾರನು ಈತ ಮಾಡಿದ
ಕುಣಿಕೆಗಳ ನೀ ಬಿಡಿಸಿ ರಕ್ಷಿಸು ನಮ್ಮನನವರತ || ೬೨ ||

ಲೇಸ ಕಾಣೆನು ಜನನ ಮರಣದಿ ಘಾಸಿಯಾದೆನು ನೊಂದೆನಕಟಾ
ಲೇಸೆನಿಸಿ ನೋಡಲು ಪರಾಪರವಸ್ತು ನೀನಾಗಿ ||
ನೀ ಸಲಹುವವನಲ್ಲವೇ ಕರುಣಾ ಸಮುದ್ರನು ನೀನಿರಲು ಕಮ
ಲಾಸನನ ಹಂಗೇನು ರಕ್ಷಿಸು ನಮ್ಮನನವರತ || ೬೩ ||

ಕಾಪುರುಷರೈದಾರು ಮಂದಿ ಸಮೀಪದಲಿ ಕಾಡುವರು ಎನ್ನೆನು
ನೀ ಪರಾಮರಿಸದೆ ಪರಾಕಾಗಿಹುದು ಲೇಸಲ್ಲ ||
ಶ್ರೀಪದಾಬ್ಜದ ಸೇವೆಯಲಿ ನೆರೆ ಪಾಪವನು ಪರಿಹರಿಸೇ ನೀ ನಿಜ
ರೂಪಿನಲಿ ಬಂದೊಳಿದು ರಕ್ಷಿಸು ನಮ್ಮನನವರತ || ೬೪ ||

ಐದು ತತ್ವಗಳಾದ-ವೊಂದಕ್ಕೈದು ಕಡೆಯಲಿ ತತ್ವವಿಪ್ಪ
ತ್ತೈದು ಕೂಡಿದ ತನುಳೆನಲಿ ವಂಚಿಸದೆ ನೀನಿರಲು ||
ಭೇದಿಸದೆ ಜೀವಾತ್ಮ ತಾ ಸಂ-ಪಾದಿಸಿದ ಸಂಚಿತ ಸುಕರ್ಮವ
ನಾದರಸಿ ಕೈಕೊಂಡು ರಕ್ಷಿಸು ನಮ್ಮನನವರತ || ೬೫ ||

ಎಂಟುಗೇಣಿನ ದೇಹ ರೋಮಗ-ಳೆಂಟು ಕೋಟಿಯ ಕೀಲ್ಗಳರವ
ತ್ತೆಂಟು ಮಾಂಸ-ಗಳಿಂದ ಮಾಡಿದ ಮನವೊಲಿದು ||
ನೆಂಟ ನೀನಿರ್ದಗಲಿದೊಡೆ ಒಣ ಹೆಂಟೆಯಲಿ ಮುಚ್ಚುವರು ದೇಹದ
ಲುಂಟೆ ಫಲ ಪುರುಷಾರ್ಥ ರಕ್ಷಿಸು ನಮ್ಮನನವರತ || ೬೬ ||

ಸ್ನಾನಸಂಧ್ಯಾ ಧ್ಯಾನ ಜಪತಪ ದಾನ ಧರ್ಮ ಪರೋಪಕಾರ ವಿ
ಹೀನ ಕರ್ಮದೊಳುಲಿವನಲ್ಲದೆ ಬೇರೆ ಗತಿಯುಂಟೆ ||
ಏನು ಮಾಡಿದಡೇನು ಮುಕ್ತಿಜ್ಞಾನವಿಲ್ಲದಡಿಲ್ಲ ಭಕ್ತಿಗೆ
ನೀನೆ ಕಾರಣನಾಗಿ ರಕ್ಷಿಸು ನಮ್ಮನನವರತ || ೬೭ ||

ಕೋಪವೆಂಬುದು ತನುವಿನಲಿ ನೆರೆ ಪಾಪ ಪಾತಕದಿಂದ ನರಕದ
ಕೂಪದಲಿ ಮುಳುಗುವುದು ತಪ್ಪದು ಶಾಸ್ತ್ರ ಸಿದ್ಧವಲೇ ||
ರಾಪು ಮಾಡದೆ ಬಿಡನು ಯಮನು ನಿ-ರಾಪರಾಧಿಯ ನೋಡಿ ಕೀರ್ತಿ ಕ
ಲಾಪವನು ನೀ ಕಾಯ್ದು ರಕ್ಷಿಸು ನಮ್ಮನನವರತ || ೬೮ ||

ನಿನ್ನ ಸೂತ್ರದೊಳಾಡುವವು ಚೈತನ್ಯ ಸಚರಾಚರಗಳೆಲ್ಲವು
ನಿನ್ನ ಸೂತ್ರವು ತಪ್ಪಿದರೆ ಮೊಗ್ಗುಪವು ಹೂಹೆಗಳು ||
ಇನ್ನು ನಮಗೆ ಸ್ವತಂತ್ರವೆಲ್ಲಿಯ ದನ್ಯ ಕರ್ಮ ಸುಕರ್ಮವೆಲ್ಲವು
ನಿನ್ನದೆಂದೊಪ್ಪಿಸಿದೆ ರಕ್ಷಿಸು ನಮ್ಮನನವರತ || ೬೯ ||

ಒಡೆಯ ನೀನೆಂದರಿತು ನಾ ನೀ ನಿನ್ನಡಿಯ ಭಜಿಸದೆ ದುರುಳನಾದೆನು
ಮಡದಿ ಮಕ್ಕಳ ಮೋಹದಲಿ ಮನ ಸಿಲುಕಿತಡಿಗಡಿಗೆ ||
ಮಡದಿಯಾರೀ ಮಕ್ಕಳಾರೀ ಒಡಲಿಗೊಡೆಯನು ನೀನು ನೀ ಕೈ
ಪಿಡಿದು ಮುದದಲಿ ಬಿಡದೆ ರಕ್ಷಿಸು ನಮ್ಮನನವರತ || ೭೦ ||

ವಂಟಿಸಿದ ಮದ ಮುಖರು ಕೆಲಗಲರುಂಟು ರಿಪುಗಳು ದಂಟಿಸುತ
ಬಲು ಕಂಟಕದಿ ಕಾಡುವರು ಕಾಯೈ ಕಲುಷ ಸಂಹಾರ ||
ಬಂಟನಲ್ಲವೆ ನಾನು ದೀನರ ನೆಂಟನಲ್ಲವೆ ನೀನು ನನ್ನೊಳ
ಗುಂಟೆ ನಿರ್ದಯ ನೋಡಿ ರಕ್ಷಿಸು ನಮ್ಮನನವರತ || ೭೧ ||

ದಂಡ ಧರನುಪಟಲದಿ ಮಿಗೆ ಮುಂ-ಕೊಂಡು ಮೊರೆಯಾಗುವವರ ಕಾಣೆನು,
ಪುಂಡರೀಕೋದ್ಭವನ ಶಿರವನು ಕಡಿದು ತುಂಡಿಸಿದ ||
ಖಂಡಪರಶವು ರುದ್ರ ಭೂಮಿಯೊ-ಳಂಡಲೆದು ತಿರುಗುವನು ನೀನು
ದ್ದಂಡ ದೇವರ ದೇವ ರಕ್ಷಿಸು ನಮ್ಮನನವರತ || ೭೨ ||

ಶಕ್ತಿಯೆಂಬುದು ಮಾಯೆ ಮಾಯಾ ಶಕ್ತಿಯದು ತನುವಿನಲಿ ನೀ ನಿಜ
ಮುಕ್ತಿ ದಾಯಕನಿರಲು ಸುಖ ದುಃಖಾದಿಗಳಿಗಾರು ||
ಯುಕ್ತಿಯೊಳಗಿದ-ನರಿತು ಮನದಿ ವಿರಕ್ತಿಯಲಿ ಭಜಿಸುವಗೆ ಮುಕ್ತಿಗೆ
ಭಕ್ತಿಯೇ ಕಾರಣವು ರಕ್ಷಿಸು ನಮ್ಮನನವರತ || ೭೩ ||

ಮೂರು ಗುಣ ಮೊಳೆದೋರಿತ-ದರೊಳು ಮೂರು ಮೂರ್ತಿಗಳಾಗಿ
ರಂಜಿಸಿ ತೋರಿ ಸೃಷ್ಟಿ ಸ್ಥಿತಿ ಲಯಂಗಳ ರಚಿಸಿ ವಿಲಯದಲಿ ||
ಮೂರು ರೂಪೊಂದಾಗಿ ಪ್ರಳಯದ ವಾರಿಯಲಿ ವಟಪತ್ರ ಶಯನದಿ
ಸೇರಿದವ ನೀನೀಗ ರಕ್ಷಿಸು ನಮ್ನನನವರತ || ೭೪ ||

ನೀರಮೇಲಣ ಗುಳ್ಳೆಯಂದದಿ ತೋರಿಯಡಗುವ ದೇಹದೀ ಸಂ
ಸಾರ ಬಹಳಾರ್ಣವ-ದೊಳಗೆ ಮುಳುಗಿದೆನು ಪತಿಕರಿಸಿ ||
ತೋರಿಸಚಲಾನಂದ ಪದವಿಯ ಸೇರಿ ಸಕಟಾ ನಿನ್ನವೋಲ್ ನಮ
ಗಿನ್ನಾರು ಬಾಂಧವರುಂಟು ರಕ್ಷಿಸು ನಮ್ಮನನವರತ || ೭೫ ||

ಹೊದ್ದಿ ನಿಲುವುದೆ ದರ್ಪಣದ ಮೇಲುದ್ದುರುಳಿ ಬೀಳ್ವಂತೆ ನಿಮಿಷದಿ
ಬಿದ್ದು ಹೋಗುವ ಕಾಯವೀ ತನುವೆಂಬ ಪಾಶದಲಿ ||
ಬದ್ಧನಾದೆನು ಮಮತೆಯಲಿ ನೀ ನಿರ್ದ್ದುದಕೆ ಫಲವೇನು ಭಕ್ತವಿ
ರುದ್ಧವಾಗದ-ಪೋಲು ರಕ್ಷಿಸು ನಮ್ಮನನವರತ || ೭೬ ||

ಕೇಳುವುದು ಕಡುಕಷ್ಟ ಕಷ್ಟದ ಬಾಳುವೆಯ ಬದುಕೇನು ಸುಡುಸುಡು
ಗಾಳಿಗೊಡ್ಡಿದ ಸೊಡರು ಈ ಸಂಸಾರದೇಳಿಗೆಯು ||
ಬಾಳ ಬೇಕೆಂಬವಗೆ ನೆರೆ ನೀನ್ನೂಳಿಗವ ಮಿಗೆ ಮಾಡಿ ಭಕ್ತಿಯೊ
ಳಾಳಿ ಬದುಕುವುದುಚಿತ ರಕ್ಷಿಸು ನಮ್ಮನನವರತ || ೭೭ ||

ದೇಹಧಾರಕನಾಗಿ ಬಹುವಿಧ ಮೋಹದೇಳಿಗೆಯಾಗಿ ಮುಕುತಿಗೆ
ಬಾಹಿರನು ತಾನಾಗಿ ವಿಷಯಾದಿ-ಗಳಿ-ಗೊಳಗಾಗಿ ||
ದೇಹವೀ ಸಂಸಾರವೆನ್ನದೆ ಮೋಹಿಸುವ ಮತಿಗೇಡಿ ಮಾನವ
ಸಾಹಸಿಯೆ ಸಟೆಮಾತು ರಕ್ಷಿಸು ನಮ್ಮನನವರತ || ೭೮ ||

ಅಳಿವ ಒಡಲನು ನೆಚ್ಚಿ ವಿಷಯಂಗಳಿಗೆ ಕಾತುರನಾಗಿ ಮಿಗೆ ಕಳ
ವಳಿಸಿ ಕಾಲನ ಬಳಿಗೆ ಹಂಗಿಗನಾಗಿ ಬಾಳುವರೆ ||
ತಿಳಿದು ಮನದೊಳು ನಿನ್ನ ನಾಮಾವಳಿಯ ಜಿಹ್ವೆಗೆ ತಂದು ಪಾಪವ
ಕಳೆದ ಬದುಕೇ ಲೇಸು ರಕ್ಷಿಸು ನಮ್ಮನನವರತ || ೭೯ ||

ವರುಷ ನೂರಾಯುಷ್ಯ-ವದರೊಳ-ಗಿರುಳು ಕಳೆದೈವತ್ತು ಐವ
ತ್ತರಲಿ ವಾರ್ಧಿಕ ಬಾಲ್ಯ ಕೌಮಾರದಲಿ ಮೂವತ್ತು ||
ಇರದೆ ಸಂದದು ಬಳಿಕ ಇಪ್ಪ ತ್ವರುಷ-ವದರೊಳಗಾದು-ದಂತಃ
ಕರಣ ನಿನ್ನೊಳು ತೋರಿ ರಕ್ಷಿಸು ನಮ್ಮನನವರತ || ೮೦ ||

ಊರು ತನಗೊಂದಿಲ್ಲ ಹೊತ್ತ ಶರೀರಗಳ ಮಿತಿಯಿಲ್ಲ ತಾ ಸಂ
ಸಚ್ಚಾರಿಸ್ಥ ದಳವಿಲ್ಲ ನುಡಿಯದ ಭಾಷೆ ಮತ್ತಿಲ್ಲ ||
ಬೇರೆ ಹೊಸತೊಂದಿಲ್ಲ ಉಣ್ಣದ ಸಾರ ವಸ್ತುಗಳಿಯ ತನು ಸಂ
ಚಾರವೀ ಬಗೆಯಾಯ್ತು ರಕ್ಷಿಸು ನಮ್ಮನನವರತ || ೮೧ ||

ಗೋಪುರದ ಭಾರವನು ಗಾರೆಯ ರೂಪದೋರಿದ ಪ್ರತಿಮೆಯಂದದೋ-
ಳೀಪರಿಯ ಸಂಸಾರ ಭಾರವನಾರು ತಾಳುವರು ||
ತಾ ಪರಾಕ್ರಮಿಯೆಂದು ಮನುಜನು ಕಾಪಥವ ನೈದುವನು ವಿಶ್ವ
ವ್ಯಾಪಕನು ನೀನಹುದು ರಕ್ಷಿಸು ನಮ್ಮನನವರತ || ೮೨ ||

ಬೀಜ ವೃಕ್ಷದೊಳಾಯ್ತು ವೃಕ್ಷಕೆ ಬೀಜ ವಾರಿಂದಾಯ್ತು ಲೋಕದಿ
ಬೀಜವೃಕ್ಷ ನ್ಯಾಯವಿದ ಭೇದಿಸುವರಾರಿನ್ನು ||
ಸೋಜಿಗವ ನೀ ಬಲ್ಲೆ ನಿನ್ನೊಳು ರಾಜಿಸುತ ಮೊಳೆ ದೋರುವದು ಸುರ
ರಾಜನಂದ ನನಮಿತ ರಕ್ಷಿಸು ನಮ್ಮನನವರತ || ೮೩ ||

ತೊಗಲು ಬೊಂಬೆಗಳಂತೆ ನಾಲಕು ಬಗೆಯ ನಿರ್ಮಾಣದಲಿ ಇದರೊಳು
ನೆಗಳದೀ ಚೌಷಷ್ಟಿ ಲಕ್ಷಣ ಜಾತಿ ಧರ್ಮದಲಿ ||
ಬಗೆ ಬಗೆಯ ನಾಮಾಂಕಿತದ ಜೀವಿಗಳದೆಲ್ಲವು ನಿನ್ನ ನಾಮದಿ
ಜಗಕೆ ತೋರುತ್ತಿಹುದು ರಕ್ಷಿಸು ನಮ್ಮನನವರತ || ೮೪ ||

ಹೂಡಿದೆಲು ಮರಮಟ್ಟು ಮಾಂಸದ ಗೋಡೆ ಚರ್ಮದ ಹೊದಿಕೆ ನರಗಳ,
ಕೂಡೆ ಹಿಂಡಿಗೆ ಬಿಗಿದ ಮನೆಯೊಳಗಾತ್ಮ ನೀನಿರಲು ||
ಬೀಡು ತೊಲಗಿದ ಬಳಿಕಲಾ ಸುಡು-ಗಾಡಿನಲಿ ಬೆಂದುರಿವ ಕೊಂಪೆಯ
ನೋಡಿ ನಂಬಿರ ಬಹುದೆ ರಕ್ಷಿಸು ನಮ್ಮನನವರತ || ೮೫ ||

ಬೀಗ ಮುದ್ರೆಗಳಿಲ್ಲ ದೂರಿಗೆ ಬಾಗಿಲುಗಳೊಂಬತ್ತು ಹಗಲಿರು
ಳಾಗಿ ಮುಚ್ಚದೆ ತೆರದಿಹುದು ಜೀವಾತ್ಮ ತಾನಿರುತ ||
ನೀಗಿ ಎಲ್ಲವ ಬಿಸುಟ್ಟು ಬೇಗದಿ ಹೋಗುತಿಹ ಸಮಯದಲಿ ಇವರವ
ರಾಗಬಲ್ಲರೆ ನೀನೆ ರಕ್ಷಿಸು ನಮ್ಮನನವರತ || ೮೬ ||

ಕೀಲು ಬಲಿದಿಹದೈದು ತಿರುಗುವ ಗಾಲಿಯರಡರ ರಥಕೆ ತ್ರೈಗುಣ
ಶೀಲನೋರ್ವನು ಸಂಚರಿಸುತಿಹನಾ ರಥಾಗ್ರದಲಿ ||
ಕೀಲು ಕಡೆಗೊಂದೂಡಿ ಬೀಳಲು ಕಾಲಗತಿ ತಪ್ಪುವುದು ಅದರನು
ಕೂಲ ನಿನ್ನೊಳಗಿಹುದು ರಕ್ಷಿಸು ನಮ್ಮನನವರತ || ೮೭ ||

ಬಿಗಿದ ರಕುತದ ರೋಮಕೂಪದ ತೊಗಲ ಕೋಟೆಯ ನಂಬಿ ರೋಗಾ
ದಿಗಳ ಮುತ್ತಿಗೆ ಬಲಿದು ಜೀವನ ಪಿಡಿಯಲನುವಾಯ್ತು ||
ವಿಗಡ ಯಮನಾಳುಗಳು ಬರುತಿರೆ ತೆಗೆಸು ಕಾಲನ ಬಲವ ಬಲು ಮು
ತ್ತಿಗೆಯನಿದ ಪರಿಹರಿಸಿ ರಕ್ಷಿಸು ನಮ್ಮನನವರತ || ೮೮ ||

ವಾರುಣಗಳೆಂಟೆಸೆವ ನಗರಕೆ ದ್ವಾರವೊಂಬತ್ತದಕೆ ಬಲು ಮೊನೆ
ಗಾರರಾದಾಳುಗಳು ಕಾವಲುಗಾರರನು ಮಾಡಿ ||
ಆರರಿಯದಂತರೊಳಗೆ ಹೃದ ಯಾರವಿಂದದಿ ನೀನಿರಲು ಬರಿ
ದೂರು ಜೀವನಿಗುಂಟೆ ರಕ್ಷಿಸು ನಮ್ಮನನವರತ || ೮೯ ||

ಪೇಳಲಿನ್ನಳವಲ್ಲವೀ ಯಮ ನಾಳುಗಳು ನೆರೆಯಂಗ ದೇಶವ
ದಾಳಿ ಮಾಡುವರಕಟಕಟ ಸೆರೆ ಸೂರೆಗಳ ಪಿಡಿದು ||
ಕಾಳು ಮಾಡುವರಿನ್ನು ತನುವಿದು ಬಾಳಲರಿಯದು ಕೋಟೆಯವರಿಗೆ
ಕೋಳು ಹೋಗದ ಮುನ್ನ ರಕ್ಷಿಸು ನಮ್ಮನನವರತ || ೯೦ ||

ನಾಲಿಗೆಯು ನಾಸಿಕವು ನಯನ ಕಪಾಲ ಪದ ಪಾಣಿಗಳು ತನುವಿನ
ಮೂಲ ಕರ್ತವಿನಲಿ ಪರಿಚಾರಕರು ತಾವಾಗಿ ||
ಲೀಲೆಯಿಂದಿರುತಿರ್ದ ಕಡೆಯಲಿ ಕಾಲ ತೀರಿದ ಬಳಿಕಲದರನು
ಕೂಲ ನಿನ್ನೊಳಗಿಹುದು ರಕ್ಷಿಸು ನಮ್ಮನನವರತ || ೯೧ ||

ಸತ್ತವರಿಗಲಲೇಕೆ ತನ್ನನು ಹೊತ್ತವರು ಹೆತ್ತವರುಗಳು ತಾ
ಸತ್ತು ಹೋಗುವರಲ್ಲ-ದುಳಿವರೆ ಮರುಗಲೇಕಿನ್ನು ||
ಮೃತ್ಯು ಬೆನ್ನಿನೊಲಿಹುದು ತಾವಿನ್ನತ್ತು ಮಾಡುವುದೇನು ಪೂರ್ವದ
ತೆತ್ತಿಗನು ನೀನೀಗ ರಕ್ಷಿಸು ನಮ್ಮನನವರತ || ೯೨ ||

ಮಣ್ಣು ಮಣ್ಣಿನೊಳುದಿಸಲದರಲಿ ಮಣ್ಣು ಗೊಂಬೆಗಳಾಗಿ ರಂಜಿಸಿ
ಮಣ್ಣಿ-ನಾಹಾರದಲಿ ಜೀವವ ಪೊರೆದು ಉಪಚರಿಸಿ ||
ಮಣ್ಣಿನಲಿ ಬಂಧಿಸಿದ ದೇಹವ ಮಣ್ಣು ಗೂಡಿಸಬೇಡ ಜ್ಞಾನದ
ಕಣ್ಣ ದೃಷ್ಟಿಯನ್ನಿತ್ತು ರಕ್ಷಿಸು ನಮ್ಮನನವರತ || ೯೩ ||

ಬೀಯವಾಗುವ ತನುವಿನಲಿ ನಿರ್ದಾಯಕನು ನೀನಿರ್ದು ಅತಿ ಹಿರಿ
ದಾಯ ಸಂಬಡಿಸುವರೆ ನೀನನುಕೂಲನಾಗಿರ್ದು ||
ತಾಯನಗಲಿದ ಶಿಶುವಿನಂದದಿ ಬಾಯ ಬಿಡುವಂ-ತಾಯ್ತಲೇ ಚಿಂತಾ
ಯಕನೆ ಬಿಡಬೇಡ ರಕ್ಷಿಸು ನಮ್ಮನನವರತ || ೯೪ ||

ಮೊದಲು ಜನನವನರಿಯೆ ಮರಣದ ಹದನ ಕಡೆಯಲಿ ತಿಳಿಯೆ ನಾ
ಮಧ್ಯದಲಿ ನೆರೆ ನಿಪುಣನೆಂಬುದು ಬಳಿಕ ನಗೆಗೇಡು ||
ಮೊದಲು ಕಡೆ ಮಧ್ಯಗಳ ಬಲ್ಲವ ಮದನ ಜನಕನು ನೀನು
ನಿನ್ನಯ ಪದಯುಗವ ಬಯಸುವೆನು ರಕ್ಷಿಸು ನಮ್ಮನನವರತ || ೯೫ ||

ಸಾರವಿಲ್ಲದ ದೇಹವಿದು ನಿಸ್ಸಾರವಾಗಿಹ ತನುವಿನಲಿ ಸಂ
ಚಾರಿಯಹ ನೀನಿರ್ದು ಕಡೆಯಲಿ ತೊಲಗಿ ಹೋಗುತಲಿ ||
ದೂರ ತಪ್ಪಿಸಿಕೊಂಡು ಬರಿಯಪದೂರ ಹೊರಿಸಿದ ಜೀವನಲಿ ಇದ
ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ || ೯೬ ||

ಅಂಡವೆರಡುದ್-ಭವಿಸಿದವು ಬ್ರಹ್ಮಾಂಡವದ-ರೋಪಾದಿಯಲಿ ಪಿಂ
ಡಾಂಡವೆಸೆದುದು ಸ್ಥೂಲ ಕಾರಣ ಸೂಕ್ಷ್ಮ ತನುವಿನಲಿ ||
ಅಂಡ ನಿನ್ನಯ ರೋಮ ಕೂಪದೊಳಂಡಲೆದ-ವಖಿಲಾಂಡವಿದು ಬ್ರ
ಹ್ಮಾಂಡ ನಾಯಕ ನೀನು ರಕ್ಷಿಸು ನಮ್ಮನನವರತ || ೯೭ ||

ಒಂದು ದಿನ ತನುವಿನಲಿ ನಡೆವುದು ಇಂದು ಭಾಸ್ಕರ ಸ್ವರಗಳಿಪ್ಪ
ತ್ತೊಂದು ಸಾವಿರದಾನೂರನು ಏಳು ಭಾಗದಲಿ ||
ಬಂದದನು ಉಡು ಚಕ್ರದಲ್ಲಿಗೆ ತಂದು ಧಾರೆಯನೆರೆದ ಮುನಿಕುಲ
ವೃಂದ ಹೃದಯನು ನೀನು ರಕ್ಷಿಸು ನಮ್ಮನನವರತ || ೯೮ ||

ತೊಲಗುವರು ಕಡೆ ಕಡೆಗೆ ತಾ ಹೊಲೆ ಹೊಲೆಯೆನುತ ಕಳವಳಿಸಿ ಮೂತ್ರದ
ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು ||
ಜಲದೊಳಗೆ ಮುಳುಗಿದರೆ ತೊಲಗದು ಹೊಲಗೆಲಸವೀ ದೇಹದೊಳು ನೀ
ನೆಲೆಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ || ೯೯ ||

ಬರಿದಹಂಕಾರದಲಿ ತತ್ವದ ಕುರುಹ ಕಾಣದೆ ನಿನ್ನ ದಾಸರ
ಜರೆದು ವೇದ ಪುರಾಣ ಶಾಸ್ತ್ರಗಳೋದಿ ಫಲವೇನು ||
ನರರು ದುಷ್ ಕರ್ಮದಲಿ ಮಾಡಿದ ದುರಿತವಡಗಲು ನಿನ್ನ ನಾಮ
ಸ್ಮರಣೆಯೊಂದೇ ಸಾಕು ರಕ್ಷಿಸು ನಮ್ಮನನವರತ || ೧೦೦ ||

ಎಂಜಲೆಂಜಲು ಎಂಬರಾನುಡಿ ಎಂಜಲಲ್ಲವೆ ವಾರಿ ಜಲಚರ
ಎಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ ||
ಎಂಜಲೆಲ್ಲಿಯದೆಲ್ಲಿಯುಂ ಪರ-ರೆಂಜಲಲ್ಲದೆ ಬೇರೆ ಭಾವಿಸ
ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ || ೧೦೧ ||

ಕೇಳುವುದು ಹರಿಕಥೆಯ ಕೇಳಲು ಹೇಳುವುದು ಹರಿಭಕ್ತಿ ಮನದಲಿ
ತಾಳುವುದು ಹಿರಿದಾಗಿ ನಿನ್ನಯ ಚರಣಸೇವೆಯಲಿ ||
ಊಳಿಗವ ಮಾಡುವುದು ವಿಷಯವ ಹೂಳುವುದು ನಿಜಮುಕ್ತಿ ಕಾಂತೆಯ
ನಾಳುವುದು ಕೃಪೆ ಮಾಡಿ ರಕ್ಷಿಸು ನಮ್ಮನನವರತ || ೧೦೨ ||

ಈ ತೆರೆದೊಳಚ್ಚುತನ ನಾಮವ ನೂತನದಿ ವಸುಧಾ ತಲದಿ ವಿ
ಖ್ಯಾತಿಯಲಿ ಬಣ್ಣಿಸಿದ ಕನ್ನಡ ಕುಸುಮ ಷಟ್ಪದಿಯ ||
ನೀತಿ ಕೋವಿದರಾಲಿಸುವದತಿ ಪ್ರೀತಿಯಲಿ ಕೇಳ್ದರಿಗೆ ಅಸುರಾ
ರಾತಿ ಚೆನ್ನಿಗರಾಯ ಸುಖಗಳನೀವ-ನನವರತ || ೧೦೩ ||

ಬಾದರಾಯಣ ಪೇಳ್ದ ಭಾರತಕಾದಿ ಕರ್ತನು ದಾರ ಶ್ರೀಪುರ
ದಾದಿ ಕೇಶವ ಮೂರ್ತಿಗಂಕಿತವಾದ ಚರಿತೆಯನು ||
ಮೇದಿನಿಯೊಳಿದನಾರು ಹೃದಯದೋಳಾದರಿಸಿ ಕೇಳ್ದಪರು ಮುದದಲಿ
ಆದಿ ಮೂರುತಿ ವರ ಪುರಾಧಿಪ-ನೊಲಿವನನವರತ || ೧೦೪ ||

ಕುಲಗಿರಿಗಳನ್ವಯವ ಧಾರುಣಿ ಜಲಧಿ ಪಾವಕ ಮರುತ ಜಲ ನಭ
ಜಲಜ ಸಖ ಶೀತಾಂಶು ತಾರೆಗಳುಳ್ಳ ಪರಿಯಂತ ||
ಚಲನೆಯಿಲ್ಲದೆ ನಿನ್ನ ಚರಿತೆಯು ಒಲಿದು ಧರೆಯೊಳ-ಗೊಪ್ಪುವಂದದಿ
ಚಲುವ ಚೆನ್ನಿಗರಾಯ ರಕ್ಷಿಸು ನಮ್ಮನನವರತ || ೧೦೫ ||

ನೂರು ಕನ್ಯಾದಾನವನು ಭಾಗೀರಥಿ ಸ್ನಾನವನು ಮಿಗೆ ಕೈ
ಯಾರ ಗೋವ್ಗಳ ಪ್ರೇಮದಿಂದಲಿ ಭೂಸುರರಿಗೊಲಿದು ||
ಊರುಗಳ ನೂರಗ್ರಹಾರವ ಧಾರೆಯೆರದಿತ್ತಂತೆ ಫಲ ಕೈ
ಸೇರುವುದು ಹರಿಭಕ್ತಿಸಾರದ ಕಥೆಯ ಕೇಳ್ದರಿಗೆ || ೧೦೬ ||

ಮೇರು ಮಂದರ ನಿಭ ಸುವರ್ಣವ ವಾರಿ ಮಧ್ಯದೊಳಿರುವ ಅವನಿಯ
ನಾರಿಯರ ಗಾಯತ್ರಿ ಪಶುಗಳನ್ನಿತ್ತ ಫಲವಹುದು ||
ಧಾರುಣಿಯೊಳೀ ಭಕ್ತಿಸಾರವ ನಾರು ಓದುವ-ರವರಿಗನುದಿನ
ಚಾರುವರಗಳನ್ನಿತ್ತು ರಕ್ಷಿಪನಾದಿಕೇಶವನು || ೧೦೭ ||

ಲೋಕದೊಳಗತ್ಯಧಿಕ-ನೆನಿಸುವ ಕಾಗಿನೆಲೆ ಸಿರಿಯಾದಿಕೇಶವ
ತಾ ಕೃಪೆಯೊಳಗೆ ನುಡಿಸಿದನು ಈ ಭಕ್ತಿಸಾರವನು ||
ಜೋಕೆಯಲಿ ಬರೆದೋದಿ ಕೇಳ್ದರ ನಾಕುಲದಿ ಮಾಧವನು ಕರುಣಿಪ
ಶ್ರೀ ಕಮಲವಲ್ಲಭನು ಮಿಗೆ ಬಡದಾದಿಕೇಶವನು || ೧೦೮ ||

ಮಂಗಳಂ ಸರ್ವಾದಿಭೂತಗೆ
ಮಂಗಳಂ ಸರ್ವವನು ಪೊರೆವಗೆ
ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಂಬುವಗೆ
ಮಂಗಳಂ ಸರ್ವ ಸ್ವತಂತ್ರಗೆ
ಮಂಗಳಂ ಸತ್ಯ ಸ್ವರೂಪಗೆ
ಮಂಗಳಂ ಸಿರಿಗೊಡೆಯ ಚೆನ್ನಿಗರಾಯ ಕೇಶವಗೆ |

ಮಂಗಳಂ ಜಗದಾದಿ ಮೂರ್ತಿಗೆ
ಮಂಗಳಂ ಶ್ರಿತ ಪುಣ್ಯಕೀರ್ತಿಗೆ
ಮಂಗಳಂ ಕರಕಲಿತ ಚಕ್ರವಿದಳಿತ-ನಕ್ರನಿಗೆ
ಮಂಗಳಂ ದ್ರೌಪದಿಯ ಪೊರೆದಗೆ
ಮಂಗಳಂ ಧ್ರುವರಾಜಗೊಲಿದಗೆ
ಮಂಗಳಂ ಬೇಲೂರ ಚೆನ್ನಿಗರಾಯ ಕೇಶವಗೆ |

ಜಯ ಸುರೇಂದ್ರವರಾರ್ಚಿತಾಂಘ್ರಿಯೆ
ಜಯ ಪುರಾಧಿಪ ಸಂಸ್ತುತಾತ್ಮನೆ
ಜಯ ಮಹಾಮುನಿ ಯೋಗಗಮ್ಯನೆ ಮೇಘ ಮೇಚಕನೆ |
ಜಯ ಜಾನಕಜೆ ಮುಖಾಬ್ಜ ಮಿತ್ರನೆ
ಜಯ ಕಲಾಧಿಪ ಸೂರ್ಯ ನೇತ್ರನೆ
ಜಯ ಜಯ ಜಗನ್ನಾಥ ದೇವನೆ ಚೆನ್ನಕೇಶವನೆ ||

ಶ್ರೀ ಕೃಷ್ಣಾರ್ಪಣಮಸ್ತು !!


SrIyarasa gAMgEya-nuta kauM-tEya vaMditacaraNa kamalada
LAyatAMbakarUpa cinmaya dEvakI-tanaya ||
rAya raGukulavarya BUsura priya sura pura nilaya cenniga
rAya caturOpAya rakShisu nammananavarata || 1 ||

dEvadEva jagadBarita vasu dEvasuta jagadEka-nAtha ra
mAvinOdita sajjanAnata niKila guNaBarita ||
BAvajAri priya nirAmaya rAvaNAMtaka raGukulAnvaya
dEva asura virOdhi rakShisu nammananavarata || 2 ||

anupamita cAritra karuNA vanadhi Bakta kuTuMbi yOgI
jana hRudaya paripUrNa nityAnaMda nigama nuta ||
vanajanABa mukuMda muramardana janArdana trai jagatpA
vana surArcita dEva rakShisu nammananavarata || 3 ||

kamalasaMBava vinuta vAsava namita maMgaLa carita durita
kShamita rAGava viSva pUjita viSva viSvamaya ||
amita vikrama BIma sItA ramaNa vAsuki Sayana Kagapati
gamana kaMjajanayya rakShisu nammananavarata || 4 ||

kShIravAridhi Sayana SAMtA kArA vividha vicAra gOpI
jAra navanIta cOra cakrAdhAra Bava dUra ||
mArapita guNahAra sarasA kAra ripu saMhAra tuMbura
nAradapriya varada rakShisu nammananavarata || 5 ||

tAmarasadaLa nayana BArgava rAma haladhararAma daSaratha
rAma mEGaSyAma sadguNadhAma nissIma ||
sAmagAna prEma kAMcana dhAmadhara sutrAma viracita
nAma ravikula sOma rakShisu nammananavarata || 6 ||

vEdagOcara vENunAdavi noda maMdaraSailadhara madhu
sUdanAcyuta kaMsadAnavaripu mahAmahima ||
yAdavEMdra yaSOde naMdana nAdabiMdu kaLAtiSaya pra
hlAda rakShaka varada rakShisu nammananavarata || 7 ||

akShayASrita sujana jana saM-rakShaNa SrIvatsa kaustuBa
mOkShadAyaka kuTila dAnava SikSha kumudAkSha ||
pakShivAhana dEva saMkula pakSha nigamAdhyakSha varaniTi
lAkSha saKa sarvESa rakShisu nammananavarata || 8 ||

citrakUTa nivAsa viSvA-mitra kratu saMrakShaka ravi SaSi
nEtra Bavya caritra sadguNagAtra satpAtra ||
dhAtrijAMtaka kapaTanATaka sUtra parama pavitra PalguNa
mitra vAkyavicitra rakShisu nammananavarata || 9 ||

maMgaLAtmaka duritatimira pa-taMga garuDa turaMga ripumada
BaMga kIrti taraMga purahara saMga nIlAMga ||
aMgadapriyanaMgapita kALiMga-mardana amitA karuNA
pAMga SrInarasiMga rakShisu nammananavarata || 10 ||

dASarathi vaikuMTha nagara ni vAsa traijagadISa pApa vi
nASa parama vilAsa hari sarvESa dEvESa ||
vAsudEva dinESa SatasaM kASa yadukula-vaMSatilaka pa
rASarAnata dEva rakShisu nammananavarata || 11 ||

kuMda kuTmala radana paramA naMda hari gOviMda sanaka
sanaMda vaMdita siMdhu baMdhana maMdarAdridhara ||
iMdirApata vijayasaKa ara viMdanABa puraMdarArcita
naMda-kaMda mukuMda rakShisu nammananavarata || 12 ||

bANa bAhucCEda rAvaNa prANa-nASana puNya-nAma pu
rANa puruShOttama nipuNa aNurENu paripUrNa ||
kShONipata sulalita sudarSana pANi pAMDava rAjakArya dhu
rINa jaga nirmANa rakShisu nammananavarata || 13 ||

nIlavarNa viSAla SuBaguNa SIla munikulapAla lakShmI
lOla ripu SiSupAla mastakaSUla vanamAla ||
mUlakAraNa vimala yAdava jAlahita gOpAla agaNita
lIla kOmalakAya rakShisu nammananavarata || 14 ||

nAganagari dharitri kOSa vi-BAga taMtra niyOga gamana
sarAga pAMDava rAja jita saMgrAma nissIma ||
yOgagamya BavAbdhi viShadhara nAga gAruDa-maMtravida Bava
rOgavaidya vicitra rakShisu nammananavarata || 15 ||

SrImadutsaha dEvanuta SrI rAma ninnaya caraNasEvaka
prEmadiM sAShTAMga-veragiye mALpe binnapava ||
I mahiyoLIvarage nAvu su kShImigaLu ninnaya padAbja
kShEma vArteyanaruhi rakShisu nammananavarata || 16 ||

IgalI maryAdeyali Sara-NAgatara sEveyoLu hoMpuLi
yAgi bALuvarEnu dhanyaro hara mahAdEva ||
BOga BAgyava bayasi muktiya nIgi nimmanu Bajisalariyada
yOgigaLa mAtEnu rakShisu nammananavarata || 17 ||

BaktisArada cariteyanu hari BaktarAlisuvaMte racisuve
yuktiyali baredOdidava-riShTArtha siddhipudu ||
muktigidu neledOruvudu hari Baktaranu lAlipudu nijamati
BaktigolivaMdadali rakShisu nammananavarata || 18 ||

naLinalOcana ninna mUrtiya kaLe beLagutide lahariyali BU
taLadoccariyAda nAmAmRuta samudradali ||
baLasuvaru satkavigaLiva-raggaLike enaginitilla sanmati
gaLige maMgaLavittu rakShisu nammananavarata || 19 ||

giLiya mariyanu taMdu paMjara-doLage pOShisi kalisi mRudu
nuDigaLanu lAlisi kELva pariNataraMte nInenage ||
tiLuhu matiyanu enna jihvege moLaguvaMdadi ninna nAmA
vaLiya pogaLikeyittu rakShisu nammananavarata || 20 ||

baNNIsalaLevE ninna nAmava suguNa saccAritra kathanava
nagaNitOpama amita vikramagamya nIneMdu ||
nigamatati kaivArisuta pada yugava kANade baLalutide vA
sukiSayana sarvESa rakShisu nammananavarata || 21 ||

vEdaSAstra purANa puNyada hAdiyanu nAnariye tarkada
vAdadali guru hiriyarariyada mUDhamati enage ||
AdimUruti nInu nere karuNo dayavanu hRudayAMgaNadi j~jA
nOdayavenagittu rakShisu nammananavarata || 22 ||

harivaritu tAytanna SiSuvige osedu mole koDuvaMte nI pO
ShisadE bErinnAru pOShakarAgi salahuvaru ||
basiroLage brahmAMDakOTiya pasarisida paramAtma nIneM
dusurutive vEdagaLu rakShisu nammananavarata || 23 ||

ibbaraNugaru ninage avaroLa gobba maganIrELu lOkada
hebb-halasu beLevaMte kAraNa kartanAdavanu ||
obba maganada bareda karaNika ribbarI lOkaprasiddharu
habbiside prANigaLa rakShisu nammananavarata || 24 ||

siriyu kulasati sutanu kamalaja hiriya sose SArade sahOdari
girije maiduna SaMkaranu surarella kiMkararu ||
niruta mAyeyu dAsi nija maMdiravajAMDavu jaMgama sthA
vara kuTuMbiga nInu rakShisu nammananavarata || 25 ||

sAgarana magaLariyadaMte sa-rAgadali saMcarisutiha u
dyOgavEnu nimitta kAraNavilla lOkadali ||
BAgavatarAdavara salahuva nAgi saMcarisuvudu I Bava
sAgaradi muLugisade rakShisu nammananavarata || 26 ||

hastivAhananAdiyAda sa-masta dEva nikAyAdoLage pra
SastanAvanu ninna vOl SaraNAgatara poreva ||
hasta kalita sudarSanadoLari mastakava-niLuhuva parAtpara
vastuvallave nInu rakShisu nammananavarata || 27 ||

hageyarige varavIvaribbaru tegeyalariyaru koTTa varagaLa
tegedu koDuva samartharArI jagake ninnaMte ||
suguNarinnAruMTu kadanava bagedu ninnoLu jaisuvavarI
jagadoLuMTE dEva rakShisu nammananavarata || 28 ||

sumanarasa vairadali kelabaru kumatigaLu tapadiMda Bargana
kamalajana padayugava mecciri varava paDediharu ||
samaramuKadoLa-gupameyali vikramadi vairava mADidavarige
amara padaviyanitte rakShisu nammananavarata || 29 ||

baliya baMdhisi moreyiDuva sati-golidu akShayavittu karuNadi
moleyuNisida bAlakiya piDisuvanapaharisi ||
Sileya satiyaLa mADi tripurada lalaneyara vratageDisi kUDida
kelasa-vuttamavAytu rakShisu nammananavarata || 30 ||

kariya kAydA jaladi makariya taridu hiraNyAkShakana sILdA
taraLananu talegAydu SakaTAsurana hatamADi ||
duruLa kaMsana koMdu magadhana muridu vatsana saMharisi
Kara haraNavanu hiMgiside rakShisu nammananavarata || 31 ||

SiSutanada sAmarthyadali kela-rasuraranu saMharisi cakrava
bisuTu yauvana kAladaliyA pAMDu sutariMda ||
vasumatiya BAravaniLuhi sA-hasadi meredavanAge nI me
cciside trijagavannella rakShisu nammananavarata || 32 ||

ellarali nInAgi sumanasaralli ati hitinAgi yAdava
ralli bAMdhavanAgi dAnavaralli hageyAgi ||
kolliside BImArjunara kai yalli kaurava kulavanellava
ballidanu nInahudu rakShisu nammananavarata || 33 ||

narage sArathiyAgi raNadoLu turaga nIraDisidare vAriya
sarasiyanu nirmisi kirITiya kaili saiMdhavana ||
Siravanu keDuhisi avana taMdeya karatalake nIDiside harahara
parama sAhasi nInu rakShisu nammananavarata || 34 ||

bavaradali KatigoMDu gadeyoLu kavidu ninna shatAyadhanu ho
kkavaGaDisi hoydADi tannAyudhadi tA maDida ||
vivaravEnO tiLiye I mAyavanu nInE balle ninnA
yuvanu ballavaruMTe rakShisu nammananavarata || 35 ||

iLege patiyAdavanu yAdava-roLage bAMdhava ninage sOdara
daLiyanA-daBimanyuvanu kolliside koLaguLadi ||
aLalinabudhiyaLaddi taMgiya baLaliside kulagOtra bAMdhava
roLage kIrtiya paDede rakShisu nammananavarata || 36 ||

tAyanagalida tanayanI rA-dhEyanoLu rahasyadali kula
tAyavanu nere tiLuhi arjunaniMda kolliside ||
mAyAmaMtrada kuTila guNada nyAyavO idanyAyavO nI
nyAyavanu nI balle rakShisu nammananavarata || 37 ||

kollu bagedavanAgi nI hage-yalli saKyava beLesadu hita
valla ninnaya guNava ballavarilla yadukuladi ||
golla nAriyaroLu pravartaka nallavE BAvisalu lOkado
LellarU sari ninage rakShisu nammananavarata || 38 ||

magana koMdavanALuvaMtaha suguNeyaru hadinAru sAvira
sogasugAtiyavara mOhada balege viTanAgi ||
bage bageya ratikalegaLali kU-rugara nATisi meredu nIni
jagake pAvananAde rakShisu nammananavarata || 39 ||

Enu mADidarEnu karmava nInoliyadinnidilla adakanu
mAnavuMTE Bramara kITanyAyadaMdali ||
nInoliye tRuNa parvatavu pusi yEnu nI patikarise baLiki
nnEnu ciMtisalEke rakShisu nammananavarata || 40 ||

eShTu mADalu munnatA paDa-daShTu eMbudu lOkadoLu mati
geTTa mAnava-rADutiharA mAtadaMtirali ||
paTTavAriMdAytu druvanige koTTa vara tappitE kucElanI
giShTa bAMdhava nInu rakShisu nammananavarata || 41 ||

tanna dEhAturado-LaDaviyo-Lanyaranu saMharisutirutire
ninna nAmadoLadhika veraDakSharava baNNisuta ||
dhanyanAdane muni kuladi saMpanna-nAdanu nInolida baLi
kinnu pAtakavuMTe rakShisu nammananavarata || 42 ||

ninna satigaLukida durAtmana benninali baMdavana karuNadi
mannisida kArana dayAparAmUrti eMdenuta ||
ninna Bajisida sArvaBaumari ginnu ihaparavuMTu sadguNa
ranna siri saMpanna rakShisu nammananavarata || 43 ||

vIra rAvaNanoDane hOrida vIraraggada kapigaLavaroLu
mArutana maganEnu dhanyanO brahma paTTadali ||
sEriside ninnaMte koDuva u-dAriyAvanu trijagadoLagA
kAraNadi naMbidenu rakShisu nammananavarata || 44 ||

SivaSivA nI mADidupakAravanu maretavaruMTe pApadi
navedajAmiLagolidu prANa viyogakAladali ||
javanavara kaigoppisade kAydavanu nI mAdhavanu mikkA
davariguMTE karuNa rakShisu nammananavarata || 45 ||

hetta magaLanu maduveyAdava nuttamanu guru patnigaLupida
cittajanu mAvana kRutaGnanu ninage maidunanu ||
hottu tappisi kAmadali muni pOttamana maDadiyanu neredava
gitte kaivalyavanu rakShisu nammananavarata || 46 ||

illihanu allillaveMbI sollu salladu horagoLage nI
nalla-dillanyatra-veMbudanella kelakelaru ||
ballariLeyoLu BAgavatarA dellarige vaMdisida kujanari
gilla sadgati nODi rakShisu nammananavarata || 47 ||

siri saMpattinali nI mai maredu mada garvadali dInara
karuNadiMdIkShisade kaDegaNniMda nODuvarE ||
harahara anAtharanu pAlisi varava koDuva udArayeMbI
biruda biDuvare taMde rakShisu nammananavarata || 48 ||

dIna nAnu samasta lOkake dAni nInu vicArisalu mati
hIna nAnu mahAmahima kaivalyapati nInu ||
Ena ballenu nAnu nere sujMAna mUruti nInu ninna sa
mAnaruMTE dEva rakShisu nammananavarata || 49 ||

taraLatanadali kelavu dina duru Barada garvadi kelavu dina mai
maredu ninnaDi-geragadAdenu viShaya kELiyali ||
naraka BAjananAgi kAmA turadi paradhana parasatige mana
harida pApava kaLedu rakShisu nammananavarata || 50 ||

mareda-naByudayali ninnanu mareye-nApattinali hariyeM
doreyuvenu manavEka BAvadoLilla ninnaDiya ||
maredu bAhiranAdava nI marevarE hasu tanna kaMdana
marevudE mamateyali rakShisu nammananavarata || 51 ||

dAruNige varacakravartiga-LArumaMdi nRupAlakaru hadi
nAru maMdiyu dharaNiyanu munnALda nRuparenitO ||
vIraranu meccidaLe dharaNI nAri bahu mOdadoLu ninnanu
sEri OlaisuvaLu rakShisu nammananavarata || 52 ||

BArakartanu nInu bahu saM-sAriyeMbudu nigamatati kai
vArisutide divija manuja BujaMgaroLaginnu ||
AriguMTu svataMtra ninnaMtAru muktiyanIva sadguru
vAru jagadadhyakSha rakShisu nammananavarata || 53 ||

gati vihInarigAru nInE gatikaNA patikarisi koDu sa
dgatiya nInele dEva ninagaparAdhi nAnalla ||
Sruti vacanavADuvudu SaraNAgatara sEvakaneMdu ninnanu
mativiDidu naMbidenu rakShisu nammananavarata || 54 ||

IgalO I dEhavinyA-vAgalO nijavillaveMbuda
nIga tiLiyade maDadi mane manevArte eMdeMba ||
rAga lOBadi muLugi muMdaNa tAgu bAgugaLariye ninna sa
mAgamava bayasuvenu rakShisu nammananavarata || 55 ||

mAMsa raktada maDuvinalli navamAsa jananiya jaTharadoLagiru-vA
samayadali vRuttiyanu kalpisida praBuvAru ||
nI salahidavanallavE karuNA samudranu nIniralu kama
lAsanana haMgEke rakShisu nammananavarata || 56 ||

balu mRugavu mara pakShi kITaka jalaSharauGadi janisidenu kO
Tale goLisa-bEDa kaTa mAnavanAda baLikinnu ||
kolisadiru yamaniMda murahara olidu ninnanu Bajisuvavara
koluva kAraNavEnu rakShisu nammananavarata || 57 ||

paMcaBUtada kAyadoLu nI vaMcisade irutiralu pUrvada
saMcitada PalavennalEkidu maruLutanadiMda ||
miMcuvavarinnuMTe tiLiye pra-paMcavellake tappidavanI
koMcagArane kRuShNa rakShisu nammananavarata || 58 ||

halavu karmagaLiMda mUtrada bilagaLali saMcarisi padaviya
Palava kANade holapu tappidenenna dEhadali ||
olidu nInire ninna salugeya olumeyali baraseLeva mukutiya
lalaneyane taLuvilla rakShisu nammananavarata || 59 ||

ettidenu nAnA SarIrava hottu hottalisidenu sale bE
sattu ninnaya padava kANade toLali baLalidenu ||
sattu huTTuva huTTi hiMguva sutta toDakanu mANisale puru
ShOttamane manavolidu rakShisu nammananavarata || 60 ||

iMdu I janmadali nInE baMdhu hiMdaNa janmadali baLi
saMdu muMdaNa janmakadhi-patiyAgi irutiralu ||
eMdigU tanagilla tanu saM-baMdha ninnadu enage nI gati
yeMdu binnaisidenu rakShisu nammananavarata || 61 ||

gaNaneyillada jananiyaru mole yuNisalApaya biMdu-gaLanada
neNisalaLavE sapta sAgara-kadhika-venisuvudu ||
baNagu kamalajanadake tAnE maNeyagAranu Ita mADida
kuNikegaLa nI biDisi rakShisu nammananavarata || 62 ||

lEsa kANenu janana maraNadi GAsiyAdenu noMdenakaTA
lEsenisi nODalu parAparavastu nInAgi ||
nI salahuvavanallavE karuNA samudranu nIniralu kama
lAsanana haMgEnu rakShisu nammananavarata || 63 ||

kApuruSharaidAru maMdi samIpadali kADuvaru ennenu
nI parAmarisade parAkAgihudu lEsalla ||
SrIpadAbjada sEveyali nere pApavanu pariharisE nI nija
rUpinali baMdoLidu rakShisu nammananavarata || 64 ||

aidu tatvagaLAda-voMdakkaidu kaDeyali tatvavippa
ttaidu kUDida tanuLenali vaMcisade nIniralu ||
BEdisade jIvAtma tA saM-pAdisida saMcita sukarmava
nAdarasi kaikoMDu rakShisu nammananavarata || 65 ||

eMTugENina dEha rOmaga-LeMTu kOTiya kIlgaLarava
tteMTu mAMsa-gaLiMda mADida manavolidu ||
neMTa nInirdagalidoDe oNa heMTeyali muccuvaru dEhada
luMTe Pala puruShArtha rakShisu nammananavarata || 66 ||

snAnasaMdhyA dhyAna japatapa dAna dharma parOpakAra vi
hIna karmadoLulivanallade bEre gatiyuMTe ||
Enu mADidaDEnu muktij~jAnavilladaDilla Baktige
nIne kAraNanAgi rakShisu nammananavarata || 67 ||

kOpaveMbudu tanuvinali nere pApa pAtakadiMda narakada
kUpadali muLuguvudu tappadu SAstra siddhavalE ||
rApu mADade biDanu yamanu ni-rAparAdhiya nODi kIrti ka
lApavanu nI kAydu rakShisu nammananavarata || 68 ||

ninna sUtradoLADuvavu caitanya sacarAcaragaLellavu
ninna sUtravu tappidare moggupavu hUhegaLu ||
innu namage svataMtravelliya danya karma sukarmavellavu
ninnadeMdoppiside rakShisu nammananavarata || 69 ||

oDeya nIneMdaritu nA nI ninnaDiya Bajisade duruLanAdenu
maDadi makkaLa mOhadali mana silukitaDigaDige ||
maDadiyArI makkaLArI oDaligoDeyanu nInu nI kai
piDidu mudadali biDade rakShisu nammananavarata || 70 ||

vaMTisida mada muKaru kelagalaruMTu ripugaLu daMTisuta
balu kaMTakadi kADuvaru kAyai kaluSha saMhAra ||
baMTanallave nAnu dInara neMTanallave nInu nannoLa
guMTe nirdaya nODi rakShisu nammananavarata || 71 ||

daMDa dharanupaTaladi mige muM-koMDu moreyAguvavara kANenu,
puMDarIkOdBavana Siravanu kaDidu tuMDisida ||
KaMDaparaSavu rudra BUmiyo-LaMDaledu tiruguvanu nInu
ddaMDa dEvara dEva rakShisu nammananavarata || 72 ||

SaktiyeMbudu mAye mAyA Saktiyadu tanuvinali nI nija
mukti dAyakaniralu suKa duHKAdigaLigAru ||
yuktiyoLagida-naritu manadi viraktiyali Bajisuvage muktige
BaktiyE kAraNavu rakShisu nammananavarata || 73 ||

mUru guNa moLedOrita-daroLu mUru mUrtigaLAgi
raMjisi tOri sRuShTi sthiti layaMgaLa racisi vilayadali ||
mUru rUpoMdAgi praLayada vAriyali vaTapatra Sayanadi
sEridava nInIga rakShisu namnananavarata || 74 ||

nIramElaNa guLLeyaMdadi tOriyaDaguva dEhadI saM
sAra bahaLArNava-doLage muLugidenu patikarisi ||
tOrisacalAnaMda padaviya sEri sakaTA ninnavOl nama
ginnAru bAMdhavaruMTu rakShisu nammananavarata || 75 ||

hoddi niluvude darpaNada mEludduruLi bILvaMte nimiShadi
biddu hOguva kAyavI tanuveMba pASadali ||
baddhanAdenu mamateyali nI nirddudake PalavEnu Baktavi
ruddhavAgada-pOlu rakShisu nammananavarata || 76 ||

kELuvudu kaDukaShTa kaShTada bALuveya badukEnu suDusuDu
gALigoDDida soDaru I saMsAradELigeyu ||
bALa bEkeMbavage nere nInnULigava mige mADi Baktiyo
LALi badukuvuducita rakShisu nammananavarata || 77 ||

dEhadhArakanAgi bahuvidha mOhadELigeyAgi mukutige
bAhiranu tAnAgi viShayAdi-gaLi-goLagAgi ||
dEhavI saMsAravennade mOhisuva matigEDi mAnava
sAhasiye saTemAtu rakShisu nammananavarata || 78 ||

aLiva oDalanu necci viShayaMgaLige kAturanAgi mige kaLa
vaLisi kAlana baLige haMgiganAgi bALuvare ||
tiLidu manadoLu ninna nAmAvaLiya jihvege taMdu pApava
kaLeda badukE lEsu rakShisu nammananavarata || 79 ||

varuSha nUrAyuShya-vadaroLa-giruLu kaLedaivattu aiva
ttarali vArdhika bAlya kaumAradali mUvattu ||
irade saMdadu baLika ippa tvaruSha-vadaroLagAdu-daMtaH
karaNa ninnoLu tOri rakShisu nammananavarata || 80 ||

Uru tanagoMdilla hotta SarIragaLa mitiyilla tA saM
saccAristha daLavilla nuDiyada BAShe mattilla ||
bEre hosatoMdilla uNNada sAra vastugaLiya tanu saM
cAravI bageyAytu rakShisu nammananavarata || 81 ||

gOpurada BAravanu gAreya rUpadOrida pratimeyaMdadO-
LIpariya saMsAra BAravanAru tALuvaru ||
tA parAkramiyeMdu manujanu kApathava naiduvanu viSva
vyApakanu nInahudu rakShisu nammananavarata || 82 ||

bIja vRukShadoLAytu vRukShake bIja vAriMdAytu lOkadi
bIjavRukSha nyAyavida BEdisuvarArinnu ||
sOjigava nI balle ninnoLu rAjisuta moLe dOruvadu sura
rAjanaMda nanamita rakShisu nammananavarata || 83 ||

togalu boMbegaLaMte nAlaku bageya nirmANadali idaroLu
negaLadI cauShaShTi lakShaNa jAti dharmadali ||
bage bageya nAmAMkitada jIvigaLadellavu ninna nAmadi
jagake tOruttihudu rakShisu nammananavarata || 84 ||

hUDidelu maramaTTu mAMsada gODe carmada hodike naragaLa,
kUDe hiMDige bigida maneyoLagAtma nIniralu ||
bIDu tolagida baLikalA suDu-gADinali beMduriva koMpeya
nODi naMbira bahude rakShisu nammananavarata || 85 ||

bIga mudregaLilla dUrige bAgilugaLoMbattu hagaliru
LAgi muccade teradihudu jIvAtma tAniruta ||
nIgi ellava bisuTTu bEgadi hOgutiha samayadali ivarava
rAgaballare nIne rakShisu nammananavarata || 86 ||

kIlu balidihadaidu tiruguva gAliyaraDara rathake traiguNa
SIlanOrvanu saMcarisutihanA rathAgradali ||
kIlu kaDegoMdUDi bILalu kAlagati tappuvudu adaranu
kUla ninnoLagihudu rakShisu nammananavarata || 87 ||

bigida rakutada rOmakUpada togala kOTeya naMbi rOgA
digaLa muttige balidu jIvana piDiyalanuvAytu ||
vigaDa yamanALugaLu barutire tegesu kAlana balava balu mu
ttigeyanida pariharisi rakShisu nammananavarata || 88 ||

vAruNagaLeMTeseva nagarake dvAravoMbattadake balu mone
gArarAdALugaLu kAvalugAraranu mADi ||
ArariyadaMtaroLage hRuda yAraviMdadi nIniralu bari
dUru jIvaniguMTe rakShisu nammananavarata || 89 ||

pELalinnaLavallavI yama nALugaLu nereyaMga dESava
dALi mADuvarakaTakaTa sere sUregaLa piDidu ||
kALu mADuvarinnu tanuvidu bALalariyadu kOTeyavarige
kOLu hOgada munna rakShisu nammananavarata || 90 ||

nAligeyu nAsikavu nayana kapAla pada pANigaLu tanuvina
mUla kartavinali paricArakaru tAvAgi ||
lIleyiMdirutirda kaDeyali kAla tIrida baLikaladaranu
kUla ninnoLagihudu rakShisu nammananavarata || 91 ||

sattavarigalalEke tannanu hottavaru hettavarugaLu tA
sattu hOguvaralla-duLivare marugalEkinnu ||
mRutyu benninolihudu tAvinnattu mADuvudEnu pUrvada
tettiganu nInIga rakShisu nammananavarata || 92 ||

maNNu maNNinoLudisaladarali maNNu goMbegaLAgi raMjisi
maNNi-nAhAradali jIvava poredu upacarisi ||
maNNinali baMdhisida dEhava maNNu gUDisabEDa j~jAnada
kaNNa dRuShTiyannittu rakShisu nammananavarata || 93 ||

bIyavAguva tanuvinali nirdAyakanu nInirdu ati hiri
dAya saMbaDisuvare nInanukUlanAgirdu ||
tAyanagalida SiSuvinaMdadi bAya biDuvaM-tAytalE ciMtA
yakane biDabEDa rakShisu nammananavarata || 94 ||

modalu jananavanariye maraNada hadana kaDeyali tiLiye nA
madhyadali nere nipuNaneMbudu baLika nagegEDu ||
modalu kaDe madhyagaLa ballava madana janakanu nInu
ninnaya padayugava bayasuvenu rakShisu nammananavarata || 95 ||

sAravillada dEhavidu nissAravAgiha tanuvinali saM
cAriyaha nInirdu kaDeyali tolagi hOgutali ||
dUra tappisikoMDu bariyapadUra horisida jIvanali ida
nAru meccuvarakaTa rakShisu nammananavarata || 96 ||

aMDaveraDud-Bavisidavu brahmAMDavada-rOpAdiyali piM
DAMDavesedudu sthUla kAraNa sUkShma tanuvinali ||
aMDa ninnaya rOma kUpadoLaMDaleda-vaKilAMDavidu bra
hmAMDa nAyaka nInu rakShisu nammananavarata || 97 ||

oMdu dina tanuvinali naDevudu iMdu BAskara svaragaLippa
ttoMdu sAviradAnUranu ELu BAgadali ||
baMdadanu uDu cakradallige taMdu dhAreyanereda munikula
vRuMda hRudayanu nInu rakShisu nammananavarata || 98 ||

tolaguvaru kaDe kaDege tA hole holeyenuta kaLavaLisi mUtrada
biladoLage baMdihuda kANade baride mananoMdu ||
jaladoLage muLugidare tolagadu holagelasavI dEhadoLu nI
nelesiralu holeyuMTe rakShisu nammananavarata || 99 ||

baridahaMkAradali tatvada kuruha kANade ninna dAsara
jaredu vEda purANa SAstragaLOdi PalavEnu ||
nararu duSh karmadali mADida duritavaDagalu ninna nAma
smaraNeyoMdE sAku rakShisu nammananavarata || 100 ||

eMjaleMjalu eMbarAnuDi eMjalallave vAri jalacara
eMjalallave hAlu karuvina eMjalenisirade ||
eMjalelliyadelliyuM para-reMjalallade bEre BAvisa
leMjaluMTE dEva rakShisu nammananavarata || 101 ||

kELuvudu harikatheya kELalu hELuvudu hariBakti manadali
tALuvudu hiridAgi ninnaya caraNasEveyali ||
ULigava mADuvudu viShayava hULuvudu nijamukti kAMteya
nALuvudu kRupe mADi rakShisu nammananavarata || 102 ||

I teredoLaccutana nAmava nUtanadi vasudhA taladi vi
KyAtiyali baNNisida kannaDa kusuma ShaTpadiya ||
nIti kOvidarAlisuvadati prItiyali kELdarige asurA
rAti cennigarAya suKagaLanIva-nanavarata || 103 ||

bAdarAyaNa pELda BAratakAdi kartanu dAra SrIpura
dAdi kESava mUrtigaMkitavAda cariteyanu ||
mEdiniyoLidanAru hRudayadOLAdarisi kELdaparu mudadali
Adi mUruti vara purAdhipa-nolivananavarata || 104 ||

kulagirigaLanvayava dhAruNi jaladhi pAvaka maruta jala naBa
jalaja saKa SItAMSu tAregaLuLLa pariyaMta ||
calaneyillade ninna cariteyu olidu dhareyoLa-goppuvaMdadi
caluva cennigarAya rakShisu nammananavarata || 105 ||

nUru kanyAdAnavanu BAgIrathi snAnavanu mige kai
yAra gOvgaLa prEmadiMdali BUsurarigolidu ||
UrugaLa nUragrahArava dhAreyeradittaMte Pala kai
sEruvudu hariBaktisArada katheya kELdarige || 106 ||

mEru maMdara niBa suvarNava vAri madhyadoLiruva avaniya
nAriyara gAyatri paSugaLannitta Palavahudu ||
dhAruNiyoLI BaktisArava nAru Oduva-ravariganudina
cAruvaragaLannittu rakShipanAdikESavanu || 107 ||

lOkadoLagatyadhika-nenisuva kAginele siriyAdikESava
tA kRupeyoLage nuDisidanu I BaktisAravanu ||
jOkeyali baredOdi kELdara nAkuladi mAdhavanu karuNipa
SrI kamalavallaBanu mige baDadAdikESavanu || 108 ||

maMgaLaM sarvAdiBUtage
maMgaLaM sarvavanu porevage
maMgaLaM tannoLage lOkava layisikoMbuvage
maMgaLaM sarva svataMtrage
maMgaLaM satya svarUpage
maMgaLaM sirigoDeya cennigarAya kESavage |

maMgaLaM jagadAdi mUrtige
maMgaLaM Srita puNyakIrtige
maMgaLaM karakalita cakravidaLita-nakranige
maMgaLaM draupadiya poredage
maMgaLaM dhruvarAjagolidage
maMgaLaM bElUra cennigarAya kESavage |

jaya surEMdravarArcitAMghriye
jaya purAdhipa saMstutAtmane
jaya mahAmuni yOgagamyane mEgha mEchakane |
jaya jAnakaje mukhAbja mitrane
jaya kalAdhipa sUrya nEtrane
jaya jaya jagannAtha dEvane cennakESavane ||

shrI kRuShNArpaNamastu !!

Leave a Reply

Your email address will not be published. Required fields are marked *

You might also like

error: Content is protected !!