-
Haribhaktisara – Dirgha kriti
Composer : Shri Kanakadasaru ಶ್ರೀಯರಸ ಗಾಂಗೇಯ-ನುತ ಕೌಂ-ತೇಯ ವಂದಿತಚರಣ ಕಮಲದಳಾಯತಾಂಬಕರೂಪ ಚಿನ್ಮಯ ದೇವಕೀ-ತನಯ ||ರಾಯ ರಘುಕುಲವರ್ಯ ಭೂಸುರ ಪ್ರಿಯ ಸುರ ಪುರ ನಿಲಯ ಚೆನ್ನಿಗರಾಯ ಚತುರೋಪಾಯ ರಕ್ಷಿಸು ನಮ್ಮನನವರತ || ೧ || ದೇವದೇವ ಜಗದ್ಭರಿತ ವಸು ದೇವಸುತ ಜಗದೇಕ-ನಾಥ ರಮಾವಿನೋದಿತ ಸಜ್ಜನಾನತ ನಿಖಿಲ ಗುಣಭರಿತ ||ಭಾವಜಾರಿ ಪ್ರಿಯ ನಿರಾಮಯ ರಾವಣಾಂತಕ ರಘುಕುಲಾನ್ವಯದೇವ ಅಸುರ ವಿರೋಧಿ ರಕ್ಷಿಸು ನಮ್ಮನನವರತ || ೨ || ಅನುಪಮಿತ ಚಾರಿತ್ರ ಕರುಣಾ ವನಧಿ ಭಕ್ತ ಕುಟುಂಬಿ ಯೋಗೀಜನ ಹೃದಯ ಪರಿಪೂರ್ಣ…
