Composer : Shri Shyamasundara dasaru
ದಾಸರಾಯ ವಿಜಯ ದಾಸರಾಯ |
ದೋಷವೆಣಿಸದೆ ಸದಾ ಪೋಷಿಸು ಕರುಣದಿ [ಪ]
ಸಕಲ ಜಗತ್ತಿಗೆ ಲಕುಮೀಶ ಪರನೆಂದು
ಮಖವ ರಚಿಪ ಮುನಿ ಕರಕ್ಕೆ ಸಾರಿದ (ಅ.ಪ)
ಕ್ಷಿತಿ ಸುರವರ ಮಧ್ವಪತಿ ನಾಮದಿಂದಲಿ |
ಶತಕ್ರತು ರಾಯರ ಸುತನಾಗಿ ಜನಿಸಿದ |
ಬೇಸಿಗೆ ಬಿಸಿಲೊಳು ರಾಸಭ ತೃಷೆಯಿಂದ |
ಘಾಸಿಯಾಗಿರೆ ಜಲ ಪ್ರಾಶನಗೈಸಿದ |೧|
ನಿಷ್ಟೆಯಿಂದಲಿ ಮನ ಮುಟ್ಟಿ ಭಜಿಪರಿಗೆ |
ಇಷ್ಟಾರ್ಥ ಗರೆಯುವ ಪುಟ್ಟ ಬದರಿವಾಸ |
ಮೋದ ತೀರ್ಥಾಗಮ ಮರ್ಮ ಮಧುರ ಕನ್ನಡದಲ್ಲಿ
ವಿಧ ವಿಧ ರಚಿಸಿದ ಸದಮಲ ಸುಚರಿತ್ರ |೨|
ಜ್ಞಾನಿ ಶಿರೋಮಣಿ ಧೇನುಪಾಲಾರ್ಯರ |
ಮಾನಸ ಕುಮುದಕೆ ಏಣಾಂಕನೆನಿಸಿದ |
ತಪ್ಪದೆ ಭಕ್ತಿಲಿ ಬಪ್ಪ ಭಕ್ತರಿಗೊಲಿದು
ತಪ್ಪು ಮನ್ನಿಸಿ ಪೊರೆವ ಚಿಪ್ಪ ಶಿಖರ ನಿಲಯ |೩|
ನಂಬಿದೆ ತ್ವತ್ಪಾದ ಬೆಂಬಿಡದಲೆ ಕಾಯೊ |
ಕುಂಭಿಣಿ ಸುರ ನಿಕುರುಂಬಾಭಿಮಾನಿಯೆ |
ಪಾಮರನಾದೆನಗೆ ಶಾಮಸುಂದರ ವಿಠಲ
ನಾಮಾಮೃತ ಪಾನ ಪ್ರೇಮದಿ ನೀಡಯ್ಯ (೪)
dAsarAya vijaya dAsarAya |
dOShaveNisade sadA pOShisu karuNadi [pa]
sakala jagattige lakumISa paraneMdu
maKava racipa muni karakke sArida (a.pa)
kShiti suravara madhwapati nAmadiMdali |
shatakratu rAyara sutanAgi janisida |
bEsige bisiloLu rAsaBa tRuSheyiMda |
ghAsiyAgire jala prASanagaisida |1|
niShTeyiMdali mana muTTi Bajiparige |
iShTArtha gareyuva puTTa badarivAsa |
mOda tIrthAgama marma madhura kannaDadalli
vidha vidha racisida sadamala sucaritra |2|
j~jAni SirOmaNi dhEnupAlAryara |
mAnasa kumudake ENAMkanenisida |
tappade Baktili bappa Baktarigolidu
tappu mannisi poreva cippa SiKara nilaya |3|
naMbide tvatpAda beMbiDadale kAyo |
kuMbhiNi sura nikuruMbAbhimAniye |
pAmaranAdenage SAmasuMdara viThala
nAmAmRuta pAna prEmadi nIDayya (4)
Leave a Reply