Composer : Shri Gopaladasaru
ದುರಿತ ವಾರಿವಾಹ ಜಂಝಾನಿಳ ಶರಣು
ಶರಣು ನಮ್ಮ ಗುರುವೆ ವಿಜಯರಾಯ ||ಪ||
ಆಗಾಮಿ ಸಂಚಿತ ಅಖಿಳಕರ್ಮ ವಿದೂರ
ರಾಜದ್ವೇಷಾದಿ ದುರ್ಗುಣ ವರ್ಜಿತ
ಭೋಗ ಪ್ರಾರಬ್ಧ ಭುಂಜಿಸುವ ಭೂದೇವ
ಭಾಗವತರನ್ನ ಬಿಡದೆ ಭಜಿಸುವರ ||೧||
ಈಷಣತ್ರಯ ದೂರ ಇಳೆಯೊಳಗೆ ಪುಣ್ಯ
ದೇಶ ಸಂಚಾರ ಪಾವನ ಶರೀರ
ದಾಸರ ನಿಜಪ್ರಿಯ ಶಮದಮೆಯಾದಿ ಪಾವನ
ಕೋಷಭರಿತ ನಿತ್ಯ ಕೊಂಡಾಡುವ ಜನರ ||೨||
ಅಧ್ಯಾತ್ಮ ಅಮಿತ ಗೌಪ್ಯ ತತ್ವವಿಚಾರ
ಸ್ವಾಧ್ಯಾಯ ನಿಪುಣ ಸಕಲ ಜನ್ಮದಿ
ಅದ್ವೈತಮತ ಕೋಲಾಹಲ ಅಮಲಶೀಲ
ಸಿದ್ಧಾಂತ ಜ್ಞಾನ ನಿಧಿಯೆ ನಿಜಾಶ್ರಿತರ ||೩||
ಕಾಮಾದಿ ಷಡ್ ರಿಪುಗಳನ ಗೆಲಿದು ಹೃದಯ
ವ್ಯೋಮದೊಳಗೆ ನಿತ್ಯದಿ ಪೂಜಿಸುವ ಮಹಿಮ
ನೇಮದಿಂದಲಿ ನಿಮ್ಮ ಸ್ಮರಿಸುವ ಜನರಘ
ಸ್ತೋಮವನು ಕಳೆದು ಪಾಲಿಸುವರು ಬಿಡದೆ ||೪||
ಭುವನ ಮಂಡಾಲಾಧಿಪ ಕವಿಗಳ ಶಿರೋರತುನ
ಭವದೂರ ಭಾಗ್ಯ ನಿಧಿಯೆ ಭಕ್ತರ
ಪವನಾಂತರ್ಗತ ನಮ್ಮ ಗೋಪಾಲವಿಠಲನ್ನ
ಸುವನಜ ಚರಣ ಸೇವೆಯಲಿಟ್ಟ ಗುರುರನ್ನ ||೫||
durita vArivAha jaMJAniLa SaraNu
SaraNu namma guruve vijayarAya ||pa||
AgAmi saMcita aKiLakarma vidUra
rAjadvEShAdi durguNa varjita
BOga prArabdha BuMjisuva BUdEva
BAgavataranna biDade Bajisuvara ||1||
IShaNatraya dUra iLeyoLage puNya
dESa saMcAra pAvana SarIra
dAsara nijapriya SamadameyAdi pAvana
kOShaBarita nitya koMDADuva janara ||2||
adhyAtma amita gaupya tatvavicAra
svAdhyAya nipuNa sakala janmadi
advaitamata kOlAhala amalaSIla
siddhAMta j~jAna nidhiye nijASritara ||3||
kAmAdi ShaD ripugaLana gelidu hRudaya
vyOmadoLage nityadi pUjisuva mahima
nEmadiMdali nimma smarisuva janaragha
stOmavanu kaLedu pAlisuvaru biDade ||4||
Buvana maMDAlAdhipa kavigaLa SirOratuna
BavadUra BAgya nidhiye Baktara
pavanAMtargata namma gOpAlaviThalanna
suvanaja caraNa sEveyaliTTa gururanna ||5||
Leave a Reply