Bhajisi baduku nitya

Composer : Shri Gopaladasaru

By Smt.Shubhalakshmi Rao

ಭಜಿಸಿ ಬದುಕು ನಿತ್ಯ ವಿಜಯದಾಸರ ಪಾದ |
ರಜವ ಸೇವಿಸು ಬ್ಯಾಗ ನಿಜವೊ ನಿಜವೊ || ಪ ||

ಕಾಮಧೇನಿನ ಕಂಡು ಕರದು ಕೊಂಡಂತೆನ್ನ |
ಗ್ರಾಮಗೋವಿನ ಪಾಲು ಕರೆದು ಕೊಂಬುವಿಯಾ ||
ತಾಮರಸ ಬಂಧು ಕಂಡರೆ ತಮಸು ಹಾರಿದಂತೆ |
ಧೂಮ ಪೊರಡುವ ಉರಿಗೆ ತಮವು ಓಡುವುದೇ || ೧ ||

ಕಲ್ಪವೃಕ್ಷವು ಕಂಡು ಬೇಡಿದ್ದು ಕೊಡುವಂತೆ |
ಮಳ್ಪೇ ಮುತ್ತದ ಗಿಡವು ಕೊಡಬಲ್ಲದೆ ||
ಕಲ್ಪಾಯು ಕೊಡುವ ಚಿಂತಾಮಣಿಯು ಕೊಡುವಂತೆ |
ಅಲ್ಪ ಚಿಂತಾಕ ಬೀಜವದು ತಾ ಕೊಡುವದೆ || ೨ ||

ಹಲವು ಸಾಧನ ಮಾಡಿ ಬಳಲಿನ್ಯಾಕೆ ನೀ |
ನಿಲಿಸು ನಿಗಮಗಳ ಧ್ಯಾನ ನಿಜ ಮನಕೆ ||
ತಿಳಕೊ ಇವರೆ ನಿನಗೆ ಗತಿ ಪೊಂದಿಪದಕೆ |
ಒಲಿವ ಗೋಪಾಲವಿಠಲ ಸಂಶಯವಿಲ್ಲದಕೆ || ೩ ||


Bajisi baduku nitya vijayadAsara pAda |
rajava sEvisu byAga nijavo nijavo || pa ||

kAmadhEnina kaMDu karadu koMDaMtenna |
grAmagOvina pAlu karedu koMbuviyA ||
tAmarasa baMdhu kaMDare tamasu hAridaMte |
dhUma poraDuva urige tamavu ODuvudE || 1 ||

kalpavRukShavu kaMDu bEDiddu koDuvaMte |
maLpE muttada giDavu koDaballade ||
kalpAyu koDuva ciMtAmaNiyu koDuvaMte |
alpa ciMtAka bIjavadu tA koDuvade || 2 ||

halavu sAdhana mADi baLalinyAke nI |
nilisu nigamagaLa dhyAna nija manake ||
tiLako ivare ninage gati poMdipadake |
oliva gOpAlaviThala saMSayavilladake || 3 ||

Leave a Reply

Your email address will not be published. Required fields are marked *

You might also like

error: Content is protected !!