Dasara bhagyavidu

Composer : Shri Shreesha Pranesha vittala

By Smt.Shubhalakshmi Rao

Shri Shreeshapranesha dasaru : 1815 – 1892
Ankita upadesha GurugaLu – Shri Gurupranesha dasaru
[Shishyaru of Shri Pranesha dasaru]
Aradhane: Bhadrapada Shukla Ashtami


ದಾಸರ ಭಾಗ್ಯವಿದು | ಶ್ರೀ ಹರಿ |
ದಾಸರ ಭಾಗ್ಯವಿದು [ಪ]

ತರಳ ತನದಿ ಬಲುಮಂದ ಬುದ್ಧಿಯಲಿ |
ತರುಳರ ಕರಕರೀ ಬಡಿಸುವನಾ ||
ಕರವ ಪಿಡಿದು ಉದ್ಧರಿಸಿ ನಾಮಾಮೃತ |
ಎರದು ದೇಶದೊಳು ಮೆರೆಸಿದಿ ಎಲ್ಲಾ [೧]

ಪದ ಸುಳಾದಿಗಳು ತಾಳ ಪ್ರಾಸದಿಂ |
ಪದುಮನಾಭನ ಚರಿತೆಯನೂ ||
ಮುದದಿಂದಲಿ ಕೊಂಡಾಡುತ ವದನದಿ |
ಪದ ಪದಿಗೆ ಅಡಿಗೆ ಎರಗುವುದೆಲ್ಲಾ [೨]

ಯೇಸು ಜನ್ಮದ ಸುಕೃತ ಒದಗಿತೊ ಹರಿ |
ದಾಸಾರ್ಯರು ಇತ್ತರು ಪದವಾ ||
ಶ್ರೀಶ ಪ್ರಾಣೇಶ ವಿಠ್ಠಲ ದಾಸಾರ್ಯರ |
ದಾಸರ ದಾಸನು ಎನಿಸುವುದೆಲ್ಲಾ [೩]


taraLa tanadi balumaMda buddhiyali |
taruLara karakarI baDisuvanA ||
karava piDidu uddharisi nAmAmRuta |
eradu dESadoLu meresidi ellA [1]

pada suLAdigaLu tALa prAsadiM |
padumanAbhana chariteyanU ||
mudadiMdali koMDADuta vadanadi |
pada padige aDige eraguvudellA [2]

yEsu janmada sukRuta odagito hari |
dAsAryaru ittaru padavA ||
SrISa prANESa viThThala dAsAryara |
dAsara dAsanu enisuvudellA [3]

Leave a Reply

Your email address will not be published. Required fields are marked *

You might also like

error: Content is protected !!