Composer : Shri Madhwesha vittala
ಬಾರೋ ನಮ್ಮ ಮನೆಗೆ ಗುರು ರಾಘವೇಂದ್ರ ||
ಬಾರೋ ದುಃಖಾಪಹಾರ ಬಾರೋ ದುರಿತದೂರ
ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು ||
ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ
ಲೋಲ ಶ್ರೀನರಹರಿ ಕಾಲರೂಪವ ತೋರ್ದ || ೧ ||
ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ
ಬೇಸರದೆ ಓದಿ ಮೆರೆವ ವ್ಯಾಸಮುನಿಯೆ || ೨ ||
ಮಂತ್ರ ಗೃಹದಲಿ ನಿಂತ ಸುಯತಿವರ್ಯ
ಅಂತರ ತಿಳಿಯದೊ ನೀ ಅಂತರಂಗದೊಳು || ೩ ||
ಭೂತ ಪ್ರೇತಾದಿಗಳ ಘಾತಿಸಿ ಬಿಡುವಂಥ
ಖ್ಯಾತಿಯುತ ಯತಿನಾಥನೆ ಸ್ತುತಿಸುವೆ || ೪ ||
ಕುಷ್ಟ ರೋಗಾದಿಗಳ ನಷ್ಟ ಮಾಡುವಂಥ
ಅಷ್ಟ ಮಹಿಮೆಯುತ ಶ್ರೇಷ್ಠ ಮುನಿಯೆ ಬೇಗ || ೫ ||
ಕರೆದರೆ ಬರುವಿಯೆಂಬ ಕೀರುತಿ ಕೇಳಿ ನಾ
ಕರೆವೆನೊ ಕರುಣದಿ ಕರವ ಪಿಡಿಯೊ ಗುರು || ೬ ||
ಭಕ್ತವತ್ಸಲನೆಂಬ ಬಿರುದು ನಿಂದಾದರೆ
ಭಕ್ತರ ಮೊರೆ ಕೇಳೊ ಮಧ್ವೇಶವಿಠ್ಠಲ ದಾಸ || ೭ ||
bArO namma manege guru rAGavEMdra ||
bArO duHKApahAra bArO duritadUra
bArayya sanmArga dAri tOruva guru ||
bAla prahlAdanAgi KULa kaSyapuvige
lOla SrInarahari kAlarUpava tOrda || 1 ||
vyAsanirmita graMtha madhvakRuta BAShyava
bEsarade Odi mereva vyAsamuniye || 2 ||
maMtra gRuhadali niMta suyativarya
aMtara tiLiyado nI aMtaraMgadoLu || 3 ||
BUta prEtAdigaLa GAtisi biDuvaMtha
KyAtiyuta yatinAthane stutisuve || 4 ||
kuShTa rOgAdigaLa naShTa mADuvaMtha
aShTa mahimeyuta SrEShTha muniye bEga || 5 ||
karedare baruviyeMba kIruti kELi nA
kareveno karuNadi karava piDiyo guru || 6 ||
BaktavatsalaneMba birudu niMdAdare
bhaktara more kELo madhvESaviThThala dAsa || 7 ||
Leave a Reply