-
Baro namma manege – Rayaru
Composer : Shri Madhwesha vittala ಬಾರೋ ನಮ್ಮ ಮನೆಗೆ ಗುರು ರಾಘವೇಂದ್ರ ||ಬಾರೋ ದುಃಖಾಪಹಾರ ಬಾರೋ ದುರಿತದೂರಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು || ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆಲೋಲ ಶ್ರೀನರಹರಿ ಕಾಲರೂಪವ ತೋರ್ದ || ೧ || ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವಬೇಸರದೆ ಓದಿ ಮೆರೆವ ವ್ಯಾಸಮುನಿಯೆ || ೨ || ಮಂತ್ರ ಗೃಹದಲಿ ನಿಂತ ಸುಯತಿವರ್ಯಅಂತರ ತಿಳಿಯದೊ ನೀ ಅಂತರಂಗದೊಳು || ೩ || ಭೂತ ಪ್ರೇತಾದಿಗಳ ಘಾತಿಸಿ ಬಿಡುವಂಥಖ್ಯಾತಿಯುತ ಯತಿನಾಥನೆ ಸ್ತುತಿಸುವೆ…
