Composer : Shri Vijayadasaru
ಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿ
ರಾಗ: ಆನಂದಭೈರವಿ
ಧ್ರುವತಾಳ
ಆವ ಪರಿಯಿಂದ ನಿನ್ನರ್ಚಿಸುವೆ ನಿಗಮಮಣಿ
ದೇವ ಮಹೋತ್ತಮ ಮಹಾ ಮಹಿಮಾ
ಜೀವೋತ್ತಮರು ಪೂರ್ವದಲ್ಲಿ ಜಪತಪ ವ್ರತ
ಪಾವಕಾಹುತಿಯಿಂದಲಾರಾಧಿಸೇ
ಭಾವದಲಿ ಕಾಣರು ಬಹುಕಾಲ ತೊಳಲೆ ರಾ –
ಜೀವ ವದನನೆಂದು ಅನಂತಾನಂತ ವೇ –
ದಾವಳಿಗಳು ಕೂಗಿ ಪೇಳುತಿವಕೋ
ಹ್ಯಾವರಿಕೆ ಸಂಸಾರ ಡಾವಣಿಯ ನಡುವೆ ಕೊರ –
ಳಾವಲಿಗೆ ಸಿಗಬಿದ್ದು ಮಿಡುಕುತಿಪ್ಪ
ಜೀವಾಧಮನು ನಿನ್ನ ಮೆಚ್ಚಿಸಲಾಪೆನೆ ವಸು –
ದೇವನಂದನ ದ್ವಿಜಾಪತಿ ಶ್ಯಂದನಾ
ಪೂವಿಲ್ಲನಯ್ಯಾ ಅದೃಶ ವಿಜಯವಿಟ್ಠಲ
ಸೇವಿ ಆಗುವದೆಂತೊ ಮತಿ ವಿಭ್ರಮನಿಗೆ || ೧ ||
ಮಟ್ಟತಾಳ
ಅರ್ಚಿಸುವೆನೆನೆ ನಿನ್ನ ಅರ್ಚಿಸಲಾರೆನೋ
ಮೆಚ್ಚಿಸುವೆನೆನೆ ನಿನ್ನ ಮೆಚ್ಚಿಸಲಾರೆನು
ನಿಚ್ಚ ಸಪುತವನಧಿ ಅಚ್ಚಲದೊಳಗುಳ್ಳ
ಅಚ್ಚ ಕುಸುಮ ಪತ್ರಾ ನಿಚ್ಚಯಾದಿಗಳೆಲ್ಲ
ಅರ್ಚನೆ ಮಾಡಿದರು ಮೆಚ್ಚಾಗುವದೇನೊ
ಹೆಚ್ಚಿನ ದೈವವೇ ಮುಚುಕುಂದ ವರದಾ
ಅಚಿಂತ್ಯನಾಮಕನೆ ವಿಜಯವಿಟ್ಠಲ ನೀನೆ
ಸಚ್ಚಿದಾನಂದೈಕನೆ ನೆಚ್ಚಿನ ಕರುಣಾಳೇ || ೨ ||
ತ್ರಿವಿಡಿತಾಳ
ನಿತ್ಯತೃಪ್ತನು ನೀನು ನಿರ್ವಿಕಾರನು ನೀನು
ಸತ್ಯಸಂಕಲ್ಪ ಶುದ್ಧಾತ್ಮ ಅಂತರಾತ್ಮಕಾ
ಅತ್ಯಾಶ್ಚರ್ಯವ ತೋರುವ ಮಹಾಪುರುಷಾ –
ದಿತ್ಯ ಸನ್ನಿಭ ಕೋಟಿ ನಿರ್ಮಲಾಂಗಾ
ಸತ್ಯಲೋಕದ ವಾಸಿ ಸಂತರ್ಪಣೆ ಮಾಡಿದರು
ಕೃತ್ಯವೇ ನಿನಗದರಲ್ಲಿ ಇಲ್ಲಾ
ಮರ್ತ್ಯ ಲೋಕದ ನೊರಜು ಏಕಾಗ್ರ ಮನದಲ್ಲಿ
ಅತ್ಯಂತವಾಗಿ ಪೂಜಿಸಬಲ್ಲೆನೇ
ಸತ್ಯಧರ್ಮ ನಾಮ ವಿಜಯವಿಟ್ಠಲ ನಿನಗೆ
ಭೃತ್ಯರಂಗ ಸಂಗಾ ನಲಿವದೇ ತೃಪ್ತಿ || ೩ ||
ಅಟ್ಟತಾಳ
ಸದನದೊಳಗೆ ಮಾಡುಳ್ಳ ಪದಾರ್ಥ
ಮುದದಿಂದಲಿ ನಿನ್ನ ಸಮ್ಮುಖದಲ್ಲಿ ಇಟ್ಟು
ಎದುರಲಿ ನಿಂದು ಮನಸ್ಸಿಗೆ ತೋರಿದ ಹಾಗೆ
ಪದುಮನಾಭ ನಿನ್ನ ಪದಕೆ ಸಮರ್ಪಿಸ –
ಲದರೊಳಗೊಂದು ಸ್ವಲ್ಪು ಕಡಿಮೆಯಾ –
ಗದು ನೋಡು ನಿನ್ನ ಮಹಿಮೆಗೆ ನಮೊ ನಮೋ
ಅದೆ ಮಹಾಪ್ರಸಾದ ಭಕುತರು ಭುಂಜಿಸಿ
ಪದವಿಯಲ್ಲಿ ಅಧಿಕವಾದ ಸುಖವ ಬಡುವರು
ಸುದರುಶನ ನಾಮ ವಿಜಯವಿಟ್ಠಲರೇಯಾ
ಇದರಿಂದ ನೀ ಕೃಪಾ ಉದಧಿ ಸದ್ಗುಣ ದೇವಾ || ೪ ||
ಆದಿತಾಳ
ಮಿಗಿಲಾದ ದೈವಗಳು ಯುಗಳ ಕರಗಳನು
ಮುಗಿದು ದೂರದಲಿ ನೀನುಗುಳುವ ಬಾಯಿ ತೊಂಬ –
ಲಿಗೆ ಶಿರವಾಗಿ ತಮ್ಮ ಮೊಗವನು ನೋಡುತ್ತ ನ –
ಮಗೆ ಕೊಡುವನೋ ನಿಮಗೆನೀವೆನೆನುತಲಿ
ಜಗುಳಿ ಪೋಗದೇ ಮನದೆಗಿಯದೆ ಸೋತಗಾರು
ಯುಗ ಯುಗಾಂತರಕೆ ಮರುಗಿ ಮರುಳಾಗುವರು
ಯುಗವರ್ತನಾಮ ಚನ್ನ ವಿಜಯವಿಟ್ಠಲ ರನ್ನ
ಹಗಲಿರುಳು ಅರ್ಚಿಸೆ ನಿನ್ನುಗುರು ಕಾಣಲಳವೇ || ೫ ||
ಜತೆ
ಯಾತರಿಂದಲಿ ನಿನ್ನ ಒಲಿಸಿಕೊಳಬಲ್ಲೆನೆ
ಧಾತಾರುತ್ತಮ ನಾಮಾ ವಿಜಯವಿಟ್ಠಲ ಪೂರ್ವಿ ||
SrIkRuShNAvatAra stOtra suLAdi
rAga: AnaMdaBairavi
dhruvatALa
Ava pariyiMda ninnarcisuve nigamamaNi
dEva mahOttama mahA mahimA
jIvOttamaru pUrvadalli japatapa vrata
pAvakAhutiyiMdalArAdhisE
BAvadali kANaru bahukAla toLale rA –
jIva vadananeMdu anaMtAnaMta vE –
dAvaLigaLu kUgi pELutivakO
hyAvarike saMsAra DAvaNiya naDuve kora –
LAvalige sigabiddu miDukutippa
jIvAdhamanu ninna meccisalApene vasu –
dEvanaMdana dvijApati SyaMdanA
pUvillanayyA adRuSa vijayaviTThala
sEvi AguvadeMto mati viBramanige || 1 ||
maTTatALa
arcisuvenene ninna arcisalArenO
meccisuvenene ninna meccisalArenu
nicca saputavanadhi accaladoLaguLLa
acca kusuma patrA niccayAdigaLella
arcane mADidaru meccAguvadEno
heccina daivavE mucukuMda varadA
aciMtyanAmakane vijayaviTThala nIne
saccidAnaMdaikane neccina karuNALE || 2 ||
triviDitALa
nityatRuptanu nInu nirvikAranu nInu
satyasaMkalpa SuddhAtma aMtarAtmakA
atyAScaryava tOruva mahApuruShA –
ditya sanniBa kOTi nirmalAMgA
satyalOkada vAsi saMtarpaNe mADidaru
kRutyavE ninagadaralli illA
martya lOkada noraju EkAgra manadalli
atyaMtavAgi pUjisaballenE
satyadharma nAma vijayaviTThala ninage
BRutyaraMga saMgA nalivadE tRupti || 3 ||
aTTatALa
sadanadoLage mADuLLa padArtha
mudadiMdali ninna sammuKadalli iTTu
edurali niMdu manassige tOrida hAge
padumanABa ninna padake samarpisa –
ladaroLagoMdu svalpu kaDimeyA –
gadu nODu ninna mahimege namo namO
ade mahAprasAda Bakutaru BuMjisi
padaviyalli adhikavAda suKava baDuvaru
sudaruSana nAma vijayaviTThalarEyA
idariMda nI kRupA udadhi sadguNa dEvA || 4 ||
AditALa
migilAda daivagaLu yugaLa karagaLanu
mugidu dUradali nInuguLuva bAyi toMba –
lige SiravAgi tamma mogavanu nODutta na –
mage koDuvanO nimagenIvenenutali
jaguLi pOgadE manadegiyade sOtagAru
yuga yugAMtarake marugi maruLAguvaru
yugavartanAma canna vijayaviTThala ranna
hagaliruLu arcise ninnuguru kANalaLavE || 5 ||
jate
yAtariMdali ninna olisikoLaballene
dhAtAruttama nAmA vijayaviTThala pUrvi ||
Leave a Reply