Composer : Shri Honnali Venkatadasaru
ರಾಯರ ಭಾಗ್ಯವಿದು ರಾಘವೇಂದ್ರ ||
ಕಾಯಜ ಪಿತನಂಘ್ರಿ ಸೇವೆ ಮಾಡುವುದೆಲ್ಲ [ಪ]
ಹರಿ ಹರಿ ಹರಿ ಎಂದು ಮೊರೆ ಇಡಲಾಕ್ಷಣ,
ನರಹರಿ ಕಂಬದಿ ತ್ವರಿತದಿ ಬಂದುದು [೧]
ಬಾಲ ಯತಿಯು ಮೈ ಮರೆತು ಪಾಡುತಲಿರೆ ,
ಗಾನಲೋಲನು ಕುಣಿ ಕುಣಿದಾಡುವುದೆಲ್ಲ [೨]
ಮಂತ್ರಸದನದಿ ಸಂತರ ಸೇವಿಪರಿಗೆ,
ಕಂತುಪಿತನ ಕಾರುಣ್ಯ ದೊರೆಯುವುದೆಲ್ಲ [೩]
ಸ್ನಾನ ಧ್ಯಾನ ಜಪ ವ್ರತ ಸಾಧನ
ಮಾಲೋಲನ ದಯದಿಂದ ನಡೆಯುವುದೆಲ್ಲ [೪]
ಕ್ಷಣ ಬಿಡದಲೆ ವೆಂಕಟವಿಠ್ಠಲನ ಪಾದ
ಕುಣಿದು ಪಾಡಿಸೆ, ಗತಿಯ ಪಡೆವುದೆಲ್ಲ [೫]
rAyara bhAgyavidu rAghavEMdra ||
kAyaja pitanaMGri sEve mADuvudella [pa]
hari hari hari eMdu more iDalAkShaNa,
narahari kaMbadi tvaritadi baMdudu [1]
bAla yatiyu mai maretu pADutalire ,
gAnalOlanu kuNi kuNidADuvudella [2]
maMtrasadanadi saMtara sEviparige,
kaMtupitana kAruNya doreyuvudella [3]
snAna dhyAna japa vrata sAdhana
mAlOlana dayadiMda naDeyuvudella [4]
kShaNa biDadale veMkaTaviThThalana pAda
kuNidu pADise, gatiya paDevudella [5]
Leave a Reply