-
Rayara bhagyavidu
Composer : Shri Honnali Venkatadasaru ರಾಯರ ಭಾಗ್ಯವಿದು ರಾಘವೇಂದ್ರ ||ಕಾಯಜ ಪಿತನಂಘ್ರಿ ಸೇವೆ ಮಾಡುವುದೆಲ್ಲ [ಪ] ಹರಿ ಹರಿ ಹರಿ ಎಂದು ಮೊರೆ ಇಡಲಾಕ್ಷಣ,ನರಹರಿ ಕಂಬದಿ ತ್ವರಿತದಿ ಬಂದುದು [೧] ಬಾಲ ಯತಿಯು ಮೈ ಮರೆತು ಪಾಡುತಲಿರೆ ,ಗಾನಲೋಲನು ಕುಣಿ ಕುಣಿದಾಡುವುದೆಲ್ಲ [೨] ಮಂತ್ರಸದನದಿ ಸಂತರ ಸೇವಿಪರಿಗೆ,ಕಂತುಪಿತನ ಕಾರುಣ್ಯ ದೊರೆಯುವುದೆಲ್ಲ [೩] ಸ್ನಾನ ಧ್ಯಾನ ಜಪ ವ್ರತ ಸಾಧನಮಾಲೋಲನ ದಯದಿಂದ ನಡೆಯುವುದೆಲ್ಲ [೪] ಕ್ಷಣ ಬಿಡದಲೆ ವೆಂಕಟವಿಠ್ಠಲನ ಪಾದಕುಣಿದು ಪಾಡಿಸೆ, ಗತಿಯ ಪಡೆವುದೆಲ್ಲ [೫] rAyara…
