Composer : Shri Jagannatha dasaru
ರಾಗ: ಬಾಗೇಶ್ರೀ ಖಂಡಛಾಪುತಾಳ
ವಂದಿಸುವೆ ಗುರುರಾಘವೇಂದ್ರಾರ್ಯರಾ ।
ವೃಂದಾವನಕೆ ಪ್ರತಿಪ್ರತಿ ದಿನಗಳಲ್ಲಿ ॥ ಪ ॥
ಸುವಿರೋಧಿ ವತ್ಸರದಿ ಶ್ರಾವಣಪರ ದ್ವಿತೀಯ ।
ಕವಿವಾರ ತುಂಗಭದ್ರಾ ತೀರದಿ ॥
ನವಸುಮಂತ್ರಾಲಯದಿ ದೇಹ್ಯವನು ಬಿಟ್ಟು ಮಾ -।
ಧವನ ಪುರವೈದಿದ ಮಹಾತ್ಮರಿವರಹುದೆಂದು ॥ 1 ॥
ಸ್ವಪದಾವಲಂಬಿಗಳಿಗೆ ಉಪನಿಷತ್ ಖಂಡಾರ್ಥ ।
ಉಪದೇಶಗೈದು ಕಾಶ್ಯಪಿ ಸುರರನು ॥
ಪ್ರಪುನೀತರನು ಮಾಡಿ ಅಪವರ್ಗದವರೊಳಗೆ ।
ಉಪಮರಿಲ್ಲೆಂದುರುಪಿದ ಉಪಕಾರಿಗಳ ಕಂಡು ॥ 2 ॥
ದೇವತೆಗಳಿವರು ಸಂದೇಹ್ಯ ಬಡಸಲ್ಲ ವೃಂ -।
ದಾವನವ ರಚಿಸಿ ಪೂಜಿಪ ಭಕ್ತರ ॥
ಸೇವೆ ಕೈಕೊಂಡವರ ಮನೋರಥವ ಲ -।
ಕ್ಷ್ಮೀವರ ಜಗನ್ನಾಥವಿಠ್ಠಲಗೆ ಪ್ರಿಯರೆಂದು ॥ 3 ॥
rAga: bAgESrI KaMDaCAputALa
vaMdisuve gururAGavEMdrAryarA |
vRuMdAvanake pratiprati dinagaLalli || pa ||
suvirOdhi vatsaradi SrAvaNapara dvitIya |
kavivAra tuMgaBadrA tIradi ||
navasumaMtrAlayadi dEhyavanu biTTu mA -|
dhavana puravaidida mahAtmarivarahudeMdu || 1 ||
svapadAvalaMbigaLige upaniShat KaMDArtha |
upadESagaidu kASyapi suraranu ||
prapunItaranu mADi apavargadavaroLage |
upamarilleMdurupida upakArigaLa kaMDu || 2 ||
dEvategaLivaru saMdEhya baDasalla vRuM -|
dAvanava racisi pUjipa Baktara ||
sEve kaikoMDavara manOrathava la -|
kShmIvara jagannAthaviThThalage priyareMdu || 3 ||
Leave a Reply