-
Vandisuve Guru Raghavendra
Composer : Shri Jagannatha dasaru ರಾಗ: ಬಾಗೇಶ್ರೀ ಖಂಡಛಾಪುತಾಳ ವಂದಿಸುವೆ ಗುರುರಾಘವೇಂದ್ರಾರ್ಯರಾ ।ವೃಂದಾವನಕೆ ಪ್ರತಿಪ್ರತಿ ದಿನಗಳಲ್ಲಿ ॥ ಪ ॥ ಸುವಿರೋಧಿ ವತ್ಸರದಿ ಶ್ರಾವಣಪರ ದ್ವಿತೀಯ ।ಕವಿವಾರ ತುಂಗಭದ್ರಾ ತೀರದಿ ॥ನವಸುಮಂತ್ರಾಲಯದಿ ದೇಹ್ಯವನು ಬಿಟ್ಟು ಮಾ -।ಧವನ ಪುರವೈದಿದ ಮಹಾತ್ಮರಿವರಹುದೆಂದು ॥ 1 ॥ ಸ್ವಪದಾವಲಂಬಿಗಳಿಗೆ ಉಪನಿಷತ್ ಖಂಡಾರ್ಥ ।ಉಪದೇಶಗೈದು ಕಾಶ್ಯಪಿ ಸುರರನು ॥ಪ್ರಪುನೀತರನು ಮಾಡಿ ಅಪವರ್ಗದವರೊಳಗೆ ।ಉಪಮರಿಲ್ಲೆಂದುರುಪಿದ ಉಪಕಾರಿಗಳ ಕಂಡು ॥ 2 ॥ ದೇವತೆಗಳಿವರು ಸಂದೇಹ್ಯ ಬಡಸಲ್ಲ ವೃಂ -।ದಾವನವ ರಚಿಸಿ ಪೂಜಿಪ…
