Ranga olida dasaraya

Composer : Shri Shyamasundara dasaru

By Smt.Shubhalakshmi Rao

ರಂಗ ಒಲಿದ ದಾಸರಾಯ | ಸಾಧು ಸಂಗ ವಿರಿಸಿ
ಕರುಣದಿ ಪಿಡಿ ಕೈಯ್ಯ |
ದಾಸರಾಯ ದಾಸರಾಯ ದಾಸರಾಯ || ಪ ||

ಹರಿಕಥೆ ಸುಧೆಸಾರ, ಸುರಸ ಗ್ರಂಥವ
ಜಗದಿ, ವಿರಚಿಸಿರುವ ನಿನ್ನ |
ವರ ಉಪಕಾರ ವರ್ಣಿಸಲಪಾರ,
ಪರಮೋದಾರ, ಪರಮೋದಾರ || ೧ ||

ಕುಂಭಿಣಿ ಸುರನಾಥ, ನಂಬಿದೆ ನಿನ್ನ ಪಾದ,
ಬೆಂಬಿಡದಲೆ ಕಾಯೋ |
ಸ್ತಂಭ ಮಂದಿರ, ಕಂಬು ಕಂದರ,
ಭಕ್ತ ಮಂದಾರ, ಭಕ್ತ ಮಂದಾರ || ೨ ||

ಸಾಮಗಾನ ವಿಲೋಲ, ಶ್ಯಾಮಸುಂದರ ವಿಠಲನ,
ಸ್ವಾಮಿಯ ಭಕುತ |
ನಿಸ್ಸೀಮ ಪ್ರಹ್ಲಾದ, ಅನುಜ ಸಹ್ಲಾದ,
ನೀಡೆಮಗಾಹ್ಲಾದ, ನೀಡೆಮಗಾಹ್ಲಾದ || ೩ ||


raMga olida dAsarAya | sAdhu saMga virisi
karuNadi piDi kaiyya |
dAsarAya dAsarAya dAsarAya || pa ||

harikathe sudhesAra, surasa graMthava
jagadi, virachisiruva ninna |
vara upakAra varNisalapAra,
paramOdAra, paramOdAra || 1 ||

kuMbhiNi suranAtha, naMbide ninna pAda,
beMbiDadale kAyO |
staMbha maMdira, kaMbu kaMdara,
bhakta maMdAra, bhakta maMdAra || 2 ||

sAmagAna vilOla, shyAmasuMdara viThalana,
swAmiya bhakuta |
nissIma prahlAda, anuja sahlAda,
neeDemagAhlAda, neeDemagAhlAda || 3 ||

Leave a Reply

Your email address will not be published. Required fields are marked *

You might also like

error: Content is protected !!