Teralidaru vaikunta

Composer : Shri Jagannatha dasaru on Shri Narasimha dasaru

By Smt.Shubhalakshmi Rao

ತೆರಳಿದರು ವೈಕುಂಠ ಪುರದರಸನ
ಚರಣಾಬ್ಜ ಸೇವಿಸಲು ನರಸಿಂಹದಾಸರು [ಪ]

ಜವಹರುಷದಿಂದ ಪಾರ್ಥಿವ ವರುಷ ಮಾರ್ಗಶಿರ
ಅಪರ ಪಕ್ಷದ ಷಷ್ಠಿ ಭೌಮವಾರ
ದಿವದಿ ಪ್ರಾತಃಕಾಲ ಸಮಯದಲಿ ಶ್ರೀ ಲಕ್ಷ್ಮೀ
ಧವನಂಘ್ರಿ ಕಮಲ ಧೇನಿಸುತ ಸಂತೋಷದಲಿ [೧]

ವರಹತನಯಾತೀರ ಪ್ರಾಚಿದಿಗ್ ಬಾಗದಲಿ
ಪರಮ ವೈಷ್ಣವ ಸುಕೃತ ಭಾಗಿಯೆಂಬಾ
ಪುರವರದಿ ತತ್ವ ತತ್ವೇಶರೊಳು ಲಯವರಿತು
ಪರಮ ಪುರುಷನ ದಿವ್ಯ ನಾಮಗಳ ಸ್ಮರಿಸುತಲಿ [೨]

ವರಯಜುಶ್ಯಾಖ ಹರಿತಸಗೋತ್ರ ಭವ ಅನಂ
ತರಸನ ಜಠರದಿ ಜನಿಸಿ ಬಂದೂ
ಗುರುವ್ಯಾಸಮುನಿ ಪುರಂದರ ದಾಸರಂಘ್ರಿಗಳ
ಸ್ಮರಿಸುತ ಜಗನ್ನಾಥ ವಿಠಲನೊಲುಮೆಯ ಪಡೆದು [೩]


teraLidaru vaikuMTha puradarasana
caraNAbja sEvisalu narasiMhadAsaru [pa]

javaharuShadiMda pArthiva varuSha mArgaSira
apara pakShada ShaShThi BaumavAra
divadi prAtaHkAla samayadali SrI lakShmI
dhavanaMGri kamala dhEnisuta saMtOShadali [1]

varahatanayAtIra prAcidig bAgadali
parama vaiShNava sukRuta BAgiyeMbA
puravaradi tatva tatvESaroLu layavaritu
parama puruShana divya nAmagaLa smarisutali [2]

varayajuSyAKa haritasagOtra Bava anaM
tarasana jaTharadi janisi baMdU
guruvyAsamuni puraMdara dAsaraMGrigaLa
smarisuta jagannAtha viThalanolumeya paDedu [3]

Leave a Reply

Your email address will not be published. Required fields are marked *

You might also like

error: Content is protected !!